ಮಧ್ವರಾಜ್‌ಗೆ ಉಡುಪಿ ಜನತೆ ತಕ್ಕ ಪಾಠ ಕಲಿಸಿದ್ದಾರೆ.

ಉಡುಪಿ: ಹಿಂದೂ ಸಮಾಜದ ಪರ ಕೆಲಸ ಮಾಡಿಕೊಂಡು ಬರುತ್ತಿರುವ ಮೀನುಗಾರರು, ಅಂದಿನಿಂದಇಂದಿನವರೆಗೆ ನಿರಂತರವಾಗಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನುಬೆಂಬಲಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಹ ಬಿಜೆಪಿಗೆಕರಾವಳಿ ಮೀನುಗಾರರ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ–ದ.ಕ. ಜಿಲ್ಲಾ ಮೀನು ಮಾರಾಟಫೆಡರೇಶನ್‌ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ಸುವರ್ಣ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾಗಿರುವಪ್ರಮೋದ್‌ ಮಧ್ವರಾಜ್‌ ಅವರು ಹಿಂದೆ ಮೀನುಗಾರ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಮೇಲೆಮೀನುಗಾರರ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಮೀನುಗಾರರಿಗೆಸೌಲಭ್ಯಗಳನ್ನು ನೀಡುವ ಬದಲು ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವುಜಾರಿಗೊಳಿಸಿದ್ದ ಯೋಜನೆಗಳನ್ನು ಮೀನುಗಾರರಿಂದ ಕಿತ್ತುಕೊಂಡರು. ಮೀನುಗಾರರ ಒಂದೇ ಒಂದುಬೇಡಿಕೆಯನ್ನು ಈಡೇರಿಸದೆ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.ಬಿಜೆಪಿ ಸರ್ಕಾರ ಅವಧಿಯಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಪ್ರತಿ ವಿಧಾನಸಭಾಕ್ಷೇತ್ರಗಳಿಗೆ 400 ಮನೆಗಳಂತೆ ಪ್ರತಿಯೊಂದು ಮನೆಗಳಿಗೆ ಹಿಂದೆ ನೀಡುತ್ತಿದ್ದಸಹಾಯಧನವನ್ನು 40 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿತ್ತು. ಪ್ರಮೋದ್‌ ಅವರು ಈಯೋಜನೆಯನ್ನು ರಾಜೀವಗಾಂಧಿ ವಸತಿ ಯೋಜನೆಯಡಿ ವಿಲೀನಗೊಳಿಸುವ ಮೂಲಕ ಬಡಮೀನುಗಾರರುಮನೆಕಟ್ಟಿಕೊಳ್ಳುವಲ್ಲಿ ವಂಚಿತರನ್ನಾಗಿ ಮಾಡಿದರು. ಡೀಸೆಲ್‌ ಸಬ್ಸಿಡಿ ದರವನ್ನುಹಿಂದೆ ನೇರವಾಗಿ ಮೀನುಗಾರರ ಕೈಗೆ ನೀಡಲಾಗುತ್ತಿತ್ತು. ಅದನ್ನು ಬ್ಯಾಂಕ್‌ ಖಾತೆಗೆಹಾಕುವ ಮೂಲಕ ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು ಎಂದು ಆರೋಪಿಸಿದರು.ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಕಳೆದ ಐದು ವರ್ಷಗಳಲ್ಲಿ ಮೀನುಗಾರ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನುನೀಡಿದೆ. ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ನೀಡುವ ಮೂಲಕ ಮೀನುಗಾರರ ಸಮುದಾಯದಅಭಿವೃದ್ಧಿಗೆ ನಾವು ಬದ್ಧ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಈಬಾರಿಯ ಬಿಜೆಪಿ ಪ್ರಾಣಾಳಿಕೆಯಲ್ಲಿ ಮತ್ಸ್ಯಾಸಂಪಾದನಾ ಯೋಜನೆಯಡಿ ಮೀನುಗಾರರಿಗೆ ಹತ್ತುಸಾವಿರ ಕೋಟಿ ಅನುದಾನ, ಕೋಲ್ಡ್‌ ಸ್ಟೋರೇಜ್‌–ಐಸ್‌ ಪ್ಲಾಂಟ್‌ಗಳನ್ನು ಸ್ಥಾಪಿಸಲುಒತ್ತು ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನ ಮೀಸಲಿಡುವಯೋಜನೆಯನ್ನು ಹಾಕಿಕೊಂಡಿದೆ ಎಂದರು.ಮೀನುಗಾರರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಅಕ್ಟ್‌ ಕಲ್ಚರ್‌ ಯೋಜನೆಹಾಕಿಕೊಂಡಿದೆ. ಅಲಂಕಾರಿಕ ಮೀನುಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಪ್ರೋತ್ಸಾಹನೀಡುವ ಯೋಜನೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಇದೇ 15ರಂದುಬ್ರಹ್ಮಾವರದ ಗಾಂಧಿ ಮೈದಾನದಲ್ಲಿ 4 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ಕೇಂದ್ರಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾಗವಹಿಸುವರು. ಬಳಿಕ ಅವರು ಸಂಜೆ 5.15ಕ್ಕೆ ಮಲ್ಪೆಯವಡಾಬಂಡೇಶ್ವರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಇದೇ 13ರಂದುಮಂಗಳೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ30ರಿಂದ 35 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!