ಪೇಜಾವರ ಶ್ರೀಗಳಿಂದ ಮತದಾನ

ಉಡುಪಿ: ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಉಡುಪಿ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಇಳಿವಯಸ್ಸಿನಲ್ಲೂ ಮತಗಟ್ಟೆಗೆ ಉತ್ಸಾಹದಿಂದ ಆಗಮಿಸಿದ ಅವರು ವೀಲ್ ಚೇರ್ ನ್ನು ನಿರಾಕರಿಸಿ ಮತಗಟ್ಟೆಯೊಳಗೆ ಸಾಗಿ ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಪ್ರಜೆಯಾಗಿ ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ. ದೇಶದಲ್ಲಿ ಉತ್ತಮ ಸರ್ಕಾರ ಬರಬೇಕು. ಅಭಿವೃದ್ದಿಶೀಲ ಭಾರತಕ್ಕೆ ಎಲ್ಲರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು‌. ಮತದಾನ ಮಾಡದಿದ್ದರೆ ನಮಗೆ ಯಾರನ್ನು ಪ್ರಶ್ನಿಸುವ, ಟೀಕಿಸುವ ಹಕ್ಕು ಇರುವುದಿಲ್ಲ ಎಂದರು. ಚುನಾವಣೆ ಸಂದರ್ಭ ಕೀಳು ಮಟ್ಟದ ವೈಯಕ್ತಿಕ ನಿಂದನೆ ಬೇಡ, ಇದು ತುಂಬ ವಿಷಾಧಕರ ಬೆಳವಣಿಗೆ. ಚುನಾವಣೆ ಸಭ್ಯವಾಗಿ ನಡೆಯಬೇಕು ಎಂದು ಪೇಜಾವರ ಶ್ರೀಗಳು ಆಶಿಸಿದರು.

Leave a Reply

Your email address will not be published. Required fields are marked *

error: Content is protected !!