ಉಡುಪಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಉಡುಪಿ: ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ.

ಪ್ರಶಸ್ತಿ ಪಡೆದವರ ವಿವರ: ಯಕ್ಷಗಾನ ಕ್ಷೇತ್ರದಲ್ಲಿ ಪುಂಡರಿಕಾಕ್ಷ ಉಪಾಧ್ಯಾಯ, ಆನಂದ ಶೆಟ್ಟಿ, ಬಡಾನಿಡಿಯೂರು ಕೇಶವ ರಾವ್, ದೈವಾರಾಧನೆ ಕ್ಷೇತ್ರದಲ್ಲಿ ನಾರಾಯಣ ನಲಿಕೆ, ಕೋಟಿ ಪೂಜಾರಿ, ಸಾಧು ಪಾಣಾರ, ರಂಗಭೂಮಿಯಲ್ಲಿ ವಿಜಯ್ ಆರ್ ನಾಯಕ್, ದಿನೇಶ್ ಪ್ರಭು ಕಲ್ಲೋಟ್ಟೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಸ್ ಜಿ ಕುರ್ಯ, ಸಂಗೀತ ಕ್ಷೇತ್ರದಲ್ಲಿ ಭೋಜರಾಜ್ ರಾಮ್ ಕಿದಿಯೂರು, ಕೆ. ರಾಘವೇಂದ್ರ ಭಟ್, ಸುಧಾಕರ ಶೇರಿಗಾರ್, ಸಾಹಿತ್ಯ ಕ್ಷೇತ್ರದಲ್ಲಿ ಉಪೇಂದ್ರ ಸೋಮಯಾಜಿ, ಮುನಿರಾಜ ರೆಂಜಾಳ,

ಕ್ರೀಡಾ ಕ್ಷೇತ್ರದಲ್ಲಿ ಅಶೋಕ ಪಣಿಯಾಡಿ, ಪ್ರಕಾಶ್ ಶೆಟ್ಟಿ ಹೆಜಮಾಡಿ, ಚಿತ್ರಕಲೆ ಕ್ಷೇತ್ರದಲ್ಲಿ ದಾಮೋದರ ಭಟ್, ಶಿಲ್ಪಕಲೆ ಕ್ಷೇತ್ರದಲ್ಲಿ ಎಸ್ ಸುಬ್ರಹ್ಮಣ್ಯ ಆಚಾರ್ಯ, ಸೋಮಪ್ಪ ಮೇಸ್ತ್ರಿ, ಕಲೆ ಕ್ಷೇತ್ರದಲ್ಲಿ ಲಲಿತಾ ಕೊರವಡಿ,, ಛಾಯಾಗ್ರಹಣ ಕ್ಷೇತ್ರದಲ್ಲಿ ಸಂತೋಷ್ ಕುಂದೇಶ್ವರ್,

ವೈದ್ಯಕೀಯ ಕ್ಷೇತ್ರದಲ್ಲಿ ಡಾ|ಕುಸುಮಾಕರ ಶೆಟ್ಟಿ, ಯೋಗ/ನೃತ್ಯ ಕ್ಷೇತ್ರದಲ್ಲಿ ಕು ಧನ್ವಿ, ಕೃಷಿ/ಹೈನುಗಾರಿಕೆ ಕ್ಷೇತ್ರದಲ್ಲಿ ದಯಾನಂದ ರಾವ್, ನೃತ್ಯ ಕ್ಷೇತ್ರದಲ್ಲಿ ಲಕ್ಷ್ಮೀ ಗುರುರಾಜ್, ಸಂಕೀರ್ಣ ಕ್ಷೇತ್ರದಲ್ಲಿ ರಮಣ ನಾಯಕ್, ಕರುಣಾಕರ ಶೆಟ್ಟಿ, ಪೌರ ಕಾರ್ಮಿಕ ಕೃಷ್ಣ, ಸಮಾಜ ಸೇವೆ ಕ್ಷೇತ್ರದಲ್ಲಿ ಅನಂತ್ರಾಯ ಆರ್ ಶೆಣೈ, ಡೇವಿಡ್ ಸಿಕ್ವೇರಾ ಅವರಿಗೆ ಪ್ರಶಸ್ತಿ ಲಭಿಸಿದೆ.


ಸಂಘ ಸಂಸ್ಥೆ ವಿಭಾಗದಲ್ಲಿ ಕರಾವಳಿ ಯುವಕ-ಯುವತಿ ವೃಂದ ಹೆಜಮಾಡಿ ಮತ್ತು ನವಚೇತನ ಯುವತಿ ಮಂಡಲ ಕುತ್ಪಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.

ನವೆಂಬರ್ 1 ರಂದು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ.


Leave a Reply

Your email address will not be published. Required fields are marked *

error: Content is protected !!