ಉಡುಪಿ – ನಿಷೇಧಿತ ಪ್ಲಾಸ್ಟಿಕ್ ಬಳಕೆ ಅಧಿಕಾರಿಗಳ ದಾಳಿ

ಉಡುಪಿ – ಉಡುಪಿ ನಗರ ಸಭಾ ಅಧಿಕಾರಗಳ ಮಿಂಚಿನ ಕಾರ್ಯಚರಣೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ. ಇಂದು ಬೆಳಿಗ್ಗೆ 11.30 ರ ಸುಮಾರಿಗೆ ಉಡುಪಿ ನಗರಸಭಾ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ನೇತ್ರತ್ವದ ಅಧಿಕಾರಿಗಳ ತಂಡ ನಗರದ ಆದಿ ಉಡುಪಿಯ ಸಂತೆ ಮಾರುಕಟ್ಟೆ ಯಲ್ಲಿ ೫೦ ಕೆಜಿ ಪ್ಲಾಸ್ಟಿಕ್ ,ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಹೋಲ್ ಸೆಲ್ ಪ್ಲಾಸ್ಟಿಕ್ ಮಳಿಗೆಯಲ್ಲಿ 140 ಕೆ ಜಿ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಹೂವಿನ ಮಾರುಕಟ್ಟೆ, ಕೆಲವು ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 195 ಕೆಜಿ ಪ್ಲಾಸ್ಟಿಕ್ ನ್ನು ವಶಪಡಿಸಿಕೊಂಡಿದೆ , ಈ ದಾಳಿ ಸಂದರ್ಭ ನಗರಸಭೆ ಕಂದಾಯ ನಿರೀಕ್ಷಕರಾದ ಧನಂಜಯ್ , ಆರೋಗ್ಯ ನಿರೀಕ್ಷಕ ಕರುಣಾಕರ್ , ಆನಂದ್ , ಪ್ರಸನ್ನ ಪಾಲ್ಗೊಂಡಿದ್ದರು, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ರವರ ಭದ್ರತೆಯಲ್ಲಿ ದಾಳಿ ನಡೆಸಲಾಗಿದೆ. ಈ ದಾಳಿ ಇನ್ನೂ ಮುಂದವರೆಯಲಿದೆ ಎಂದು ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಉಡುಪಿ ಟೈಮ್ಸ್ ಗೆ ತಿಳಿಸಿದರು .

2 thoughts on “ಉಡುಪಿ – ನಿಷೇಧಿತ ಪ್ಲಾಸ್ಟಿಕ್ ಬಳಕೆ ಅಧಿಕಾರಿಗಳ ದಾಳಿ

  1. Yentha sav plastic ban madud …first ration angadi alli togari bele plastic alli baruth adannu ban madi n super market ,shopping mall alli products plastic alli pack agi baruth adannu ban madi..totally plastic company annu close madi…avaga tan astakke plastic galu kuda kadme aguthe…sumne san san angadi ge hogi avrige upadra kododu nillisi please

Leave a Reply

Your email address will not be published. Required fields are marked *

error: Content is protected !!