ಮೂರು ಸೆಂಟ್ಸ್ ಜಾಗದಲ್ಲಿ 400 ಗಿಡ: ಮಹೇಶ್ ಶೆಣೈ

ಉಡುಪಿ:ಅವಿಭಜಿತ ಜಿಲ್ಲೆಯ ಪರಿಸರವು ದಿನೇದಿನೇ ಕಲುಷಿತಗೊಳ್ಳುತ್ತಿರುವುದರಿಂದ ಇದರ ರಕ್ಷಣೆಗೆ ಜಪಾನ್ ದೇಶದ ಮಾದರಿಯಲ್ಲಿ ಮರಗಿಡಗಳನ್ನು ಬೆಳೆಸಲು ಇಲ್ಲಿನ ಸಾಮಾಜಿಕ ಸೇವಾ ಕಾರ್ಯಕರ್ತರು ನಿರ್ಧರಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾವಯುವ ಬದುಕು ತಂಡದ ಸಂಯೋಜಕ ಕಟಪಾಡಿ ಮಹೇಶ ಶೆಣೈ ಮಾತನಾಡಿ ಉಡುಪಿ ಮತ್ತು ಆಸುಪಾಸಿನಲ್ಲಿ ಕಳೆದ ವರ್ಷ ಕುಡಿಯುವ ನೀರಿನ ತೀವೃ ಅಭಾವ ಉಂಟಾಗಿದೆ. ತಾಪಮಾನದ ಅತೀವಾ ಹೆಚ್ಚಳದಿಂದ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚು ಕ್ಷೀಣಿಸುವ ಸಾಧ್ಯತೆಯಿದ್ದು, ಮುಂಬರುವ ದಿನಗಳಲ್ಲಿ ಮನುಷ್ಯನ ಉಳಿವಿಗೆ ಜೀವವೈವಿಧ್ಯಗಳಾದ ಚಿಟ್ಟೆ, ಗುಬ್ಬಿ, ಇತ್ಯಾದಿಗಳು ನಶಿಸಿಹೋಗುವ ಹಂತದಲ್ಲಿವೆ ಎಂದು ಹೇಳಿದರು.

ಪರಿಸರದಲ್ಲಿರುವ ಶುದ್ಧಗಾಳಿ, ಕುಡಿಯುವ ನೀರು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸದಿದ್ದರೆ ಮುಂದೆ ಎಣಿಸಲಾಗದ ಘೋರ ಅನಾಹುತ ಸಂಭವಿಸಲಿದೆ. ಈ ರೀತಿಯ ಸಮಸ್ಯೆಗಳಿಗೆ ಜಪಾನ್‌ನ ಪರಿಸರ ತಜ್ಞರು ಮನುಷ್ಯನ ಉಳಿವಿಗಾಗಿ ಅಗತ್ಯವಿರುವ ಕಾಡನ್ನು ವೇಗವಾಗಿ ಬೆಳೆಸಲು ಕಂಡುಹಿಡಿದ ವಿಧಾನ “ಮಿಯಾವಾಕಿ ಕಾಡು”.

ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 400 ಗಿಡಗಳನ್ನು ಬೆಳೆಸಬಹುದು. ಕರಾವಳಿಯಲ್ಲಿ ಮೊದಲ ಬಾರಿಗೆ “ಸಾವಯವ ಬದುಕು ” ಸಂಸ್ಥೆಯು ಪರಿಚಯಿಸುತ್ತಿದೆ. ಇದನ್ನು ಪ್ರಾಯೋಗಿಕ ಅಕ್ಟೋಬರ್ 13 ರಂದು ಸಾಮಾಜಿಕ ಸೇವಾ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ರವಿ ಕಟಪಾಡಿ, ನಿತ್ಯಾನಂದ ಒಳಕಾಡು, ಕಟಪಾಡಿಯ ಗುರುಕೃಪಾ ಪೊಸಾರುನಲ್ಲಿ ಜಂಟಿಯಾಗಿ ಮಣ್ಣಿನ ವಿಶೇಷ ಪದರ ರಚನೆಗೆ ಚಾಲನೆ ನೀಡಲಿದ್ದಾರೆ.
ಈ ವಿಧಾನವು ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಭಾರತದ ಪಂಜಾಬ್, ಮುಂಬೈ, ಬೆಂಗಳೂರು ಮತ್ತು ಮುಂತಾದ ಕಡೆಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ಅತ್ಯಂತ ಕಡಿಮೆ ಸ್ಥಳದಲ್ಲಿ ಹೆಚ್ಚು ಹೆಚ್ಚು ಖಾಸಗಿ ಅರಣ್ಯವನ್ನು ನಿರ್ವಹಿಸಬಹುದಾಗಿದೆ.

ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ವಿಶೇಷ ಪದರವನ್ನು ರಚಿಸುವುದು. ಎರಡನೇ ಹಂತದಲ್ಲಿ ಸಸಿಗಳನ್ನು ನೇಡುವುದು ಎಂದು ತಿಳಿಸಿದರು.
ಎರಡು ಸೆಂಟ್ಸ್ ಜಾಗದಲ್ಲಿ260 ಸಸಿಗಳನ್ನು ನೆಡುವ ಉದ್ದೇಶ ಇದ್ದು ಇದು ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ. ಸರಿಸುಮಾರು260 ಸಾಮಾಜಿಕ ಕಳಕಳಿಯ ವ್ಯಕ್ತಿ ಗಳನ್ನು ಆಹ್ವಾನಿಸಿ (260 “ಮಿಯಾವಾಕಿ ವನಗಳು ” ಮೂಡಿ ಬರಲಿ ಎಂಬ ಉದ್ದೇಶದಿಂದ) ಸಸಿಗಳನ್ನು ನೆಟ್ಟು ಕಡಿಮೆ ಜಾಗದಲ್ಲಿ ಶೀಘ್ರ ವಾಗಿ ಬೆಳೆಯುವ ದಟ್ಟ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಇಟ್ಟು ಕೊಂಡಿದ್ದೇವೆಂದು ಸಾವಯವ ಬದುಕು ತಂಡದ ಸಂಯೋಜಕರಾದ ಕೆ. ಮಹೇಶ್ ಶೆಣೈ ತಿಳಿಸಿದರು

1 thought on “ಮೂರು ಸೆಂಟ್ಸ್ ಜಾಗದಲ್ಲಿ 400 ಗಿಡ: ಮಹೇಶ್ ಶೆಣೈ

  1. ಮೊದಲು ಸಾಂಪ್ರದಾಯಿಕ ಬತ್ತ ಬೆಳೆಸಿ ಸಾವಿರಾರು ಗ್ಯಾಲನ್ ನೀರು ಭೂಮಿಯ ಒಳಗೆ ಸೇರುತ್ತದೆ.ಅಂತರ್ ಜಲ ಮರುಪೂರಣವಾಗುತ್ತದೆ

Leave a Reply

Your email address will not be published. Required fields are marked *

error: Content is protected !!