ಎರಡು ಬೇರೆ ಬೇರೆ ಯೋಚನಾ ಲಹರಿಯ ಮನಸ್ಸುಗಳು ಕಥೆಯೇ ಹನಿಮೂನ್

ಕನ್ನಡ ವೆಬ್ ಸರಣಿಗಳಲ್ಲಿ  ತನ್ನದೇ ಆದ ಛಾಪನ್ನ ಮೂಡಿಸಿರುವ ಸಕ್ಕತ್ ಸ್ಟುಡಿಯೋ ಇತ್ತೀಚೆಗಷ್ಟೆ ಡಾ ಶಿವರಾಜ್ ಕುಮಾರ್ ರವರ ಶ್ರೀ ಮುತ್ತು ಸಿನಿ ಸರ್ವೀಸಸ್ ಜೊತೆ  ” ಹೇಟ್ ಯು ರೋಮಿಯೋ ” ಎಂಬ ದಕ್ಷಿಣ ಭಾರತದ ಅತಿ ದೊಡ್ಡ ವೆಬ್ ಸೀರೀಸ್ ನಿರ್ಮಾಣ ಹಂತ ಮುಗಿಸಿ ಬಿಡುಗಡೆಯ ಹಂತದಲ್ಲಿರುವಾಗಲೇ ಈ ಎರಡೂ ನಿರ್ಮಾಣ ಸಂಸ್ಥೆಗಳು ಸೇರಿ ಮತ್ತೊಂದು ದೊಡ್ಡ ವೆಬ್ ಸರಣಿಗೆ ಕೈ ಹಾಕಿವೆ.ಹೊಸ ಸರಣಿಗೆ  ” ಹನಿಮೂನ್” ಎಂಬ ಶೀರ್ಷಿಕೆಯಿದ್ದು , ಅರೇಂಜ್ಡ್ ಮದುವೆಯಾದ ನವವಿವಾಹಿತ  ಜೋಡಿ ಹನಿಮೂನ್ ಗೆ ಹೋಗುವ ಕಥೆ. ಹನಿಮೂನ್ ಅಂದ್ರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತದ್ದಲ್ಲಾ , ಎರಡು ಬೇರೆ ಬೇರೆ ಯೋಚನಾ ಲಹರಿಯ ಮನಸ್ಸುಗಳು ಒಂದಾಗುವ ಕಥೆಯೇ ಹನಿಮೂನ್.
ಮೂಲತಃ ರಂಗಭೂಮಿಯ ಕಲವಿದರು ಹಾಗು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ  ಮೈಸೂರಿನವರಾದ ನಾಗಭೂಷಣ ರವರು ಈ ವೆಬ್ ಸರಣಿಯ ಚಿತ್ರಕಥೆ ಹಾಗು ಸಂಭಾಷಣೆಯ ಬರೆಯುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ  ಅಭಿನೆಯಿಸುತ್ತಿದ್ದಾರೆ.ಇತ್ತೀಚೆಗಷ್ಟೆ ಬಿಡುಗಡೆಯಾದ ” ಕೆಮಿಷ್ಟ್ರಿ ಆಫ್ ಕರಿಯಪ್ಪಾ ” ಸಿನಿಮಾದಲ್ಲಿ  ಅಭಿನೆಯಿಸಿರುವ ಸಂಜನಾ ಆನಂದ್ ರವರು ಈ ಸೀರೀಸ್ ಗೆ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ.
ಇದಕ್ಕೂ ಮುಂಚೆ ” ಹೀಗೊಂದು ದಿನ ” ಸಿನಿಮಾ ” ಡಾ ಪಾಲ್ ” ವೆಬ್ ಸರಣಿಯನ್ನು  ನಿರ್ದೇಶಿಸಿ ಅನುಭವವಿರುವ ವಿಕ್ರಂ ಯೋಗಾನಂದ್ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.
” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ” “ಒಂದಲ್ಲಾ ಎರಡಲ್ಲಾ”  ಖ್ಯಾತಿಯ ವೈಭವ್ ವಾಸುಕಿ ಈ ಸರಣಿಗೆ ೪ ಹಾಡುಗಳು ಹಾಗು ಹಿನ್ನೆಲೆ ಸಂಗೀತವನ್ನು ಸಂಯೋಜಿಸುತ್ತಿದ್ದಾರೆ.
ನಿವೇದಿತಾ ಶಿವರಾಜ್ ಕುಮಾರ್ ರವರ ” ಶ್ರಿ ಮುತ್ತು ಸಿನಿ ಸರ್ವಿಸಸ್ ” ಮತ್ತು ಆರ್ ಜೆ ಪ್ರದೀಪಾ, ರವಿಶಂಕರ್, ವಿವೇಕ್ ನಡೆಸುತ್ತಿರುವ ಸಕ್ಕತ್ ಸ್ಟುಡಿಯೋ ಜೊತೆಗೂಡಿ ಈ ವರ್ಷ ೫ ವೆಬ್ ಸರಣಿಗಳನ್ನು ಮಾಡುವ ಯೋಜನೆಯಲ್ಲಿವೆ. ಮುಂಬರುವ ವೆಬ್ ಸರಣಿಯಲ್ಲಿ ನಮ್ಮ ಕನ್ನಡದ ಬಹು ದೊಡ್ಡ ನಾಯಕ ನಟರು ಅಭಿನಯಿಸುತ್ತಿದ್ದು, ಅತಿ ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!