ದಾಮಾಯಣ ದ ಪೋಸ್ಟರ್ ಬಿಡುಗಡೆ ಮಾಡಿದ ರಿಷಭ್ ಶೆಟ್ಟಿ

ಹೆಸರಿನಿಂದಲೇ ಗಮನ ಸೆಳೆದದಾಮಾಯಣಚಲನಚಿತ್ರವೀಗ ತನ್ನ ಚೊಚ್ಚಲ ಪೋಸ್ಟರ್ ಬಿಡುಗಡೆ ಮಾಡಿದೆ. ಬಹು ನಿರೀಕ್ಷೆ ಹುಟ್ಟಿಸುವಂತಿರುವ ಪೋಸ್ಟರ್ ಸಿನಿ ರಸಿಕರ ಹುಬ್ಬೇರುವಂತೆ ಮಾಡಿದೆ.

ಹಳ್ಳಿಯ ರಸ್ತೆಯಲ್ಲಿಸಪ್ಪಗೆದಾರಿಮರೆತಂತೆ ನಿಂತಿರುವಯುವಕ. ನಗು ತರಿಸುವ ಮುಖ. ಹೆಗಲಲ್ಲಿ ಹಳೆಯ ಕಡು ಹಸಿರು ಬಣ್ಣದ ಬ್ಯಾಗು. ಪಕ್ಕದಲ್ಲೊಂದು ಖಾಲಿ ಆಟೋರಿಕ್ಷಾ. ಆಗಸದಲ್ಲಿ ಚಿತ್ರ ಶೀರ್ಶಿಕೆ. ಮೈಲಿಗಲ್ಲಿನಲ್ಲಿ ‘ ‘Coming Soon’ಎಂಬ ಬರಹ.ಇದು ದಾಮಾಯಣದ ಮೊದಲ ಪೋಸ್ಟರ್ನಲ್ಲಿ ಕಂಡುಬಂದ ದೃಶ್ಯ.

ಪೋಸ್ಟರನ್ನು ಕಿರಿಕ್ ಪಾರ್ಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ನಿರ್ದೇಶಕನಟ ರಿಷಭ್ ಶೆಟ್ಟಿಯವರು ಬಿಡುಗಡೆ ಮಾಡಿದರು. ಪೋಸ್ಟರ್ ಬಿಡುಗಡೆಗೂ ಮುನ್ನ ತಂಡಕ್ಕೆ ಯಶಸ್ಸನ್ನು ಕೋರಿದ ಅವರು ಪೋಸ್ಟರ್ತುಂಬಾಕುತೂಹಲ ಮೂಡಿಸುವಂತಿದ್ದು, ಚಲನಚಿತ್ರವು ನೈಜತೆಯಿಂದ ಕೂಡಿರುವಂತೆ ತೋರುತ್ತಿದೆ.ಎಂದು ಅಭಿಪ್ರಾಯಪಟ್ಟರು.

ದಾಮಾಯಣ ಹೆಸರಿಗೆ ಹೇಳಿ ಮಾಡಿಸಿದಂತಿರುವ ಕ್ರೀಯಾಶೀಲ ಪೋಸ್ಟರನ್ನು ಆದರ್ಶ್ ಮೋಹನ್ದಾಸ್ರವರು ವಿನ್ಯಾಸ ಮಾಡಿದ್ದಾರೆ. ನಾವು ಹೇಳಲು ಹೊರಟಿರುವಕಥೆಗೆ ಪೋಸ್ಟರ್ ಮುನ್ನುಡಿಇದ್ದಂತೆ.ಇದನ್ನು ಆದರ್ಶ್ರವರು ಸುಂದರವಾಗಿ ರೂಪಿಸಿದ್ದಾರೆ.ಕಥೆಯ ಸಾರಾಂಶ ತಿಳಿದುಕೊಂಡ ಆದರ್ಶ್ ಮೋಹನ್ದಾಸ್ರವರು ಕೇವಲ ಒಂದೇ ಪ್ರಯತ್ನದಲ್ಲಿ ನಮ್ಮನ್ನು ತೃಪ್ತಿಗೊಳಿಸಿದರು. ಎಂದು ನಿರ್ದೇಶಕ ಶ್ರೀಮುಖ ಹೆಮ್ಮೆಯಿಂದ ತಿಳಿಸಿದರು.

ತಂಡಕ್ಕೆ ಏಪ್ರಿಲ್೧ ವಿಶೇಷ ದಿನವಂತೆ. ದಾಮಾಯಣ ಚಲನಚಿತ್ರವು ಮೂರ್ಖನೊಬ್ಬನ ಕನಸುಗಳು ಹಾಗು ವಾಸ್ತವದ ನಡುವೆ ಚಲಿಸುವ ಒಂದುಕಥೆ. ಇದೇ ಕಾರಣಕ್ಕೆ ಮೂರ್ಖರದಿನವನ್ನೇ ಚಿತ್ರತಂಡ ಪೋಸ್ಟರ್ ಬಿಡುಗಡೆಗೆ ಆಯ್ಕೆ ಮಾಡಿತ್ತು. ಸದ್ಯದಲ್ಲೇ ಮೊದಲ ಟೀಸರ್ ಬಿಡುಗಡೆ ಮಾಡಲಿರುವ ಮಂಗಳೂರಿನ ತಂಡಅದಕ್ಕಾಗಿ ಸಿದ್ಧತೆ ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!