ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್; 10 ಲಕ್ಷಕ್ಕೆ ಬೇಡಿಕೆಯಿಟ್ಟ ಬ್ಲಾಕ್‌ಮೈಲರ್

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡೀಯೋ ಹರಿಬಿಟ್ಟ ಪ್ರಕರಣಕ್ಕೆ ಟ್ವಿಸ್ಟ್. ಬೆತ್ತಲೆ ವೀಡಿಯೋ ಇಟ್ಟುಕೊಂಡು ಅಪರಿಚತ ದುಷ್ಕರ್ಮಿಗಳಿಂದ ಬ್ಲಾಕ್ ಮೇಲ್.

ವೀಡಿಯೋದಲ್ಲಿರುವ ಪುರುಷ ಮತ್ತು ಯುವತಿಗೆ ಬ್ಲಾಕ್‌ಮೇಲ್ ಮಾಡಿ ಹಣ ದೋಚಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಅಬ್ದುಲ್ ರಹಿಮಾನ್‌ಗೆ 10 ಲಕ್ಷ ಬೇಡಿಕೆಯಿಟ್ಟಿದ್ದ ಬ್ಯಾಕ್‌ಮೈಲರ್. 1 ಲಕ್ಷ ಹಣ ಕೊಟ್ಟರು ಪದೇ ಪದೇ ಬ್ಲಾಕ್‌ಮೇಲ್ ಮಾಡುತ್ತಿದ್ದ ದುಷ್ಕರ್ಮಿಗಳು.

ನಂತರ ಅಬ್ದುಲ್ ರಹಿಮಾನ್‌ನನ್ನು ಕಿಡ್ನಾಪ್ ಮಾಡಿ ಆತನ ಬಳಿಯಿದ್ದ ಚಿನ್ನ, ಹಣ, ಎಟಿಎಂ ಕಿತ್ತುಕೊಂಡು ಪಾಸ್ವರ್ಡ್ ಪಡೆದು ಹಣ ಡ್ರಾ ಮಾಡಿಕೊಂಡಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರನ್ನು ಆಧರಿಸಿ ತನಿಖೆ ಅರಂಭಿಸಿದ ಪೊಲೀಸರು.

ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್‌ಗೆ ಕರೆತಂದಿದ್ದ ಅಬ್ದುಲ್ಲಾ. ಮೊಬೈಲ್‌ನಲ್ಲಿ ಇಬ್ಬರ ಬೆತ್ತಲೆ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ಯುವತಿ. ಮೊಬೈಲ್ ರಿಪೇರಿಗೆ ಅಂತಾ ಶಾಪ್‌ಗೆ ಕೊಟ್ಟಾಗ ವೀಡೀಯೋ ಲೀಕ್ ಆಗಿದ್ದು . ಇದನ್ನೆ ಬಂಡವಾಳವಾಗಿಸಿಕೊಂಡು ಇಬ್ಬರನ್ನು ಬ್ಲಾಕ್‌ಮೇಲ್ ಮಾಡಿದ್ದ ದುಷ್ಕರ್ಮಿಗಳು.

Leave a Reply

Your email address will not be published. Required fields are marked *

error: Content is protected !!