ಜುಲೈ 1 ರಂದು ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಮಹಾಸಭೆ

ಉಡುಪಿ: ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ಟೆಂಟ್ ಮತ್ತು ಡೆಕೋರೆಟರ್ಸ್ ಹಾಗೂ ಧ್ವನಿ ಬೆಳಕು ಕ್ಷೇಮಾವೃದ್ಧಿ ಸಂಘದ ಜೊತೆಗೆ ಸೇರ್ಪಡೆಗೊಂಡ ಜಿಲ್ಲೆಯ 8 ನೇ ವರ್ಷದ ಮಹಾಸಭೆಯು ಇದೇ ಜುಲೈ 1 ರಂದು ಬ್ರಹ್ಮಾವರದ ಆಶ್ರಯ ಹೋಟೆಲಿನ ಸಭಾಭವನದಲ್ಲಿ ನಡೆಯಲಿದೆ.

7 ವರ್ಷಗಳಿಂದ ಧ್ವನಿ ಬೆಳಕಿನ ವೃತ್ತಿ ಭಾಂಧವರೆಲ್ಲ ಜೊತೆ ಸೇರಿ ಕಾರ್ಕಳ, ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ ಬೈಂದೂರು ೬ ವಲಯಗಳಾಗಿ ಪ್ರಾರಂಭವಾದ ಜಿಲ್ಲಾ ಸಂಘಟನೆಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದೆ. ಈ ಸಂಘನೆಯು ಒಟ್ಟು ೮೫೦ ಸದಸ್ಯರನ್ನು ಹೊಂದಿದೆ.

8 ನೇ ವರ್ಷದ ಬ್ರಹ್ಮಾವರ ವಲಯದ ವಾರ್ಷಿಕೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಂಘಟನೆಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ , ಉನ್ನತ ಶಿಕ್ಷಣಕ್ಕಾಗಿ ಧನಸಹಾಯ, ಹಿರಿಯ ಕಾರ್ಮಿಕರಿಗೆ ಸನ್ಮಾನ, ಆಕಸ್ಮಿಕ ಅಪಘಾತಕ್ಕೀಡಾದ ಸದಸ್ಯರ ಮನೆಯವರಿಗೆ ಧನಸಹಾಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಧರ್ಭ ಶಿವರಾಜ್ ಮಲ್ಲಾರ್, ಸಂತೋಷ್ ಶೆಟ್ಟಿಗಾರ್, ಕೆ.ದಾಮೋದರ್, ರಾಮಕೃಷ್ಣ ಕುಂದರ್, ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!