ಹೆಚ್.ಪಿ.ಸಿ.ಎಲ್ ಸಂಸ್ಥೆಯಿಂದ ಆಂಬುಲೆನ್ಸ್ ಕೊಡುಗೆ ಜಿಲ್ಲಾಧಿಕಾರಿಗೆ ಹಸ್ತಾಂತರ
ಮಡಿಕೇರಿ: ವ್ಯವಹಾರಿಕ ಸಂಘ, ಸಂಸ್ಥೆಗಳು ಸಾಮಾಜಿಕ ಕಳಕಳಿಯನ್ನು ತೋರುವುದರೊಂದಿಗೆ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರೆ ನೀಡಿದ್ದಾರೆ.
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ವತಿಯಿಂದ ಕೊಡಗು ಜಿಲ್ಲೆಯ ಸಾರ್ವಜನಿಕರ ಉಪಯೋಗಕ್ಕಾಗಿ ಮಂಗಳೂರಿನ ಎಚ್ಪಿಸಿಎಲ್ನ ಮಾರಾಟಾಧಿಕಾರಿ ಅರವಿಂದ್ ಮಿಶ್ರಾ ಅವರು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸುಸ್ಸಜಿತವಾದ ಆಂಬುಲೆನ್ಸ್ ಹಸ್ತಾಂತರ ಮಾಡಿದರು.
ಅರವಿಂದ್ ಮಿಶ್ರಾ ಅವರು ಮಾತನಾಡಿ ಭಾರತ ಸರ್ಕಾರದ ಸಹಯೋಗದೊಂದಿಗೆ ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆರೋಗ್ಯದ ತುರ್ತು ರಕ್ಷಣೆಗೆ ಆಂಬುಲೆನ್ಸ್ನ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಆಂಬುಲೆನ್ಸ್ನ ಅಗತ್ಯವಿದೆ. ಜಿಲ್ಲೆಯಾದ್ಯಂತ ಪೆಟ್ರೋಲ್ ಪಂಪುಗಳ ನೂರು ಗಜ ಅಂತರದವೆರೆಗೆ ಸ್ವಚ್ಚತೆಯನ್ನು ಕಾಪಾಡುವಂತೆ ಸ್ವಚ್ಚತಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಜಿಎಂ ವೇಣುಗೋಪಾಲ್, ಪ್ರಸನ್ನ ಪೂಜಾರಿ, ಡಿಜಿಎಂ ಆರ್.ರವೀಂದ್ರನ್ ಹಾಗೂ ಇತರರು ಹಾಜರಿದ್ದರು.