ಅರೆಬೆತ್ತಲೆಗೊಳಿಸಿ ಬಸ್ ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ

ಉಡುಪಿ ಶಿವಮೊಗ್ಗ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಏಳು ಜನರ ತಂಡವೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ಮಂಡಗದ್ದೆಯಲ್ಲಿ ನಡೆದಿದೆ. 

ಉಡುಪಿಯಿಂದ ಶಿವಮೊಗ್ಗಕ್ಕೆ ಹೊರಟ ನಿಶಾನ್ ಖಾಸಗಿ ಬಸ್ಸನ್ನು ಹೆಬ್ರಿಯಿಂದ ಹಿಂಬಾಲಿಸಿಕೊಂಡು ಹೋದ 2 ಕಾರು ಮಂಡಗದ್ದೆ ಬಳಿ ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಬಸ್ಸಿನಲ್ಲಿದ್ದ ನಿರ್ವಾಹಕ ಗಣೇಶ ಶೆಟ್ಟಿ(48)  ಹಲ್ಲೆ ಮಾಡಿ ನಗದು 1500೦ ರೂ. ದೋಚಿ ಪರಾಯಾಗಿದೆ.  ಹಲ್ಲೆ ನಡೆಸಿರುವ ದ್ರಶ್ಯ ಬಸ್ ನ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು‌ ಪ್ರಮುಖ ಆರೊಪಿ ಪರ್ಕಳ ಹರೀಶ್ ಎಂದು ತಿಳಿದು ಬಂದಿದ್ದು ಉಳಿದವರ ಪತ್ತೆಗೆ ಶಿವಮೊಗ್ಗ ಪೊಲೀಸರ ಬಲೆಬಿಸಿದ್ದಾರೆ .

ಹೆಬ್ರಿಯಿಂದ ಸೋಮೇಶ್ವರಕ್ಕೆ ನಿಶಾನ್ ಹಾಗೂ  ನಿಶ್ಮಿತಾ ಬಸ್ ಕೇವಲ ೫ ನಿಮಿಷಗಳ ಅಂತರದಲ್ಲಿ ಸೋಮೇಶ್ವರಕ್ಕೆ ಸಂಚಾರಿಸುತ್ತದೆ .ನಿಶಾನ್ ಬಸ್ ನಿರ್ವಾಹಕ ೪.೨೦ಕ್ಕೆ ಹೆಬ್ರಿಯಿಂದ ಪ್ರಯಾಣಿಕರನ್ನು ಸೋಮೇಶ್ವರಕ್ಕೆ  ಕೂಗಿ ಕರೆದು  ಆಹ್ವಾನಿಸುತ್ತ  ನಿಶ್ಮಿತಾ ಬಸ್ ಹೊರಡುವ ಸಮಯದವರೆಗೆ ಇರುತ್ತಾನೆ ಎಂದು ಈ ತಂಡ 2 ಕಾರಿನಲ್ಲಿ  ಹೆಬ್ರಿಯಿಂದ ಬೆನ್ನಟ್ಟಿ ನಿರ್ಜನ ಪ್ರದೇಶವಾದ ಮಂಡಗದ್ದೆಯ ಬಳಿ 6.45  ಕ್ಕೆ ಬಸ್  ತಡೆದು ಏಕಾಏಕಿ ಬಸ್ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ

ಮಾತ್ರವಲ್ಲದೆ ಬಸ್ ನಿಂದ ನಿರ್ವಾಹಕ ಗಣೇಶನನ್ನು  ಇಳಿಸಿ ಅರೆಬೆತ್ತಲೆ  ಮಾಡಿದ ತಂಡ  ಮತ್ತೆ ಬಸ್ ಹತ್ತಿದ ಗಣೇಶ್‌ಗೆ ಮನ ಬಂದಂತೆ ಥಳಿಸಿದ ವಿಡಿಯೋ ಬಸ್ ನಲ್ಲಿದ್ದ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ. ತೀವ್ರ ಹಲ್ಲೆಗೊಳಗಾದ ನಿರ್ವಾಹಕ ಮಂಡಗದ್ದೆ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!