ಟೈಮ್ಸ್ ಪಾಕ ಶಾಲೆ ; ಧಿಡೀರ್ ಟೊಮೊಟೊ ಗೊಜ್ಜು

ಟೈಮ್ಸ್ ಪಾಕ ಶಾಲೆ ಗೆ ಅನೇಕ ರೆಸಿಪಿ ಗಳುಬಂದಿದ್ದು ನಿಮಗಾಗಿ ನಿಮ್ಮ ನೆಚ್ಚಿನ ಉಡುಪಿ ಟೈಮ್ಸ್ ವೆಬ್ಸೈಟ್ ಲಿ ಪ್ರಕಟಿಸಲಾಗುವುದು ಇಂದಿನ ರೆಸಿಪಿ

ಧಿಡೀರ್ ಟೊಮೊಟೊ ಗೊಜ್ಜು
ಬೇಕಾಗುವ ಸಾಮಗ್ರಿ
ಟೊಮೊಟೊ -2 – 3
ಶುಂಠಿ – ೧ ತುಂಡು
ಮೆಣಸಿನ ಪುಡಿ
ಎಣ್ಣೆ -ಒಗ್ಗರಣೆಗೆ
ಜೀರಿಗೆ -೧ಚಮಚ
ಅರಿಶಿನ
ಉಪ್ಪು -ರುಚಿಗೆ ತಕಷ್ಟು
ಮಾಡುವ ವಿಧಾನ – ಮೊದಲು ಟೊಮೊಟೊವನ್ನು ಬೇಯಿಸಿಕೊಳ್ಳಿ ನಂತರ ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ ಅದು ಬಿಸಿಯಾದ ಮೇಲೆ ಜೀರಿಗೆ ಹಾಕಿ ಜೀರಿಗೆ ನಂತರ ಅದಕ್ಕೆ ಟೊಮೊಟೊ ರಸವನ್ನ ಹಾಕಿ ಅದು ಕುದಿಯುವಾಗ ಅದಕ್ಕೆ ಅರಿಶಿನ , ರುಚಿಗೆ ತಕಷ್ಟು ಉಪ್ಪು,ಮೆಣಸಿನ ಪುಡಿ ಹಾಕಿ ಕುದಿಸಿ ನಂತರ ಈ ಮಿಶ್ರಣಕ್ಕೆ ಶುಂಟಿಯನ್ನ ತುರಿದು ಹಾಕಿ ಚೆನ್ನಾಗಿ ಕುದಿಸಿ, ನಂತರ ಈ ಗೊಜ್ಜಿನ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಧಿಡೀರ್ ಟೋಮೋಟ್ ಗೊಜ್ಜು ಸವಿಯಲು ಸಿದ್ದ

ಜಯಶ್ರೀ , ಮಂಗಳೂರು


Leave a Reply

Your email address will not be published. Required fields are marked *

error: Content is protected !!