ಹನುಂತನ ಫೋಟೋ ಎಸೆದು ಸೆಲ್ಫಿ: ದೊಡ್ಡಣಗುಡ್ಡೆ ಉದ್ವಿಗ್ನ

ಉಡುಪಿ: ವ್ಯಾಯಾಮ ಶಾಲೆಯಲ್ಲಿದ್ದ ಹನುಮಂತನ ದೇವರ ಚಿತ್ರ ತೆಗೆದ ಅನ್ಯಕೋಮಿನ ಯುವಕರು ಸೆಲ್ಫಿ ತೆಗೆದು ಅಲ್ಲಿನ ಯುವಕರಿಗೆ ಹಲ್ಲೆ ಮಾಡಿ ಪರಾರಿಯಾದ ಘಟನೆ ದೊಡ್ಡಣಗುಡ್ಡೆ ವ್ಯಾಯಾಮ ಶಾಲೆಯಲ್ಲಿ ನಡೆದಿದೆ.
ಇಂದು ರಾತ್ರಿ ಸ್ಥಳೀಯ ನಾಲ್ಕೈದು ಮುಸ್ಲಿಂ ಯುವಕರ ತಂಡವು ಈ ಕೃತ್ಯ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣಾ ನಿರ್ಮಾಣವಾಗಿದೆ.
ವ್ಯಾಯಮ ಶಾಲೆಯಲ್ಲಿ ಪ್ರತಿ ನಿತ್ಯ ಸ್ಥಳೀಯ ಯುವಕರು ಜಿಮ್ ತರಬೇತಿ ಪಡೆಯಲು ಬರುತ್ತಾರೆ. ಇಂದು ಕೂಡ ಯುವಕರು ತರಬೇತಿ ಪಡೆಯುತ್ತಿರುವ ಸಂದರ್ಭ ಏಕಾಏಕಿ ಬಂದ ನಾಲ್ಕೈದು ಮುಸ್ಲಿಂ ಯುವಕರು ಒಳಪ್ರವೇಶಿಸಿ ಹನುಮಂತನ ದೇವರ ಚಿತ್ರದ ಫೋಟೊ ತೆಗೆದು ಅಲ್ಲಿ ಅವರ ಬನಿಯಾನ್ ಇಟ್ಟು ತಾವು ಕೂಡ ದೇಹದಾಡ್ಯ ಪಟುಗಳಂತೆ ಸೆಲ್ಫೀ ತೆಗೆದಿದ್ದರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯ ಯುವಕರಿಗೆ ಹಲ್ಲೆ ನಡೆಸಿ ಯುವಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ,ಡಿವೈಎಸ್ಪಿ ಜೈಶಂಕರ್ ಭೇಟಿ ನೀಡಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಬಜರಂಗದಳ ಆಗ್ರಹ – ನಗರದಲ್ಲಿ ಶಾಂತಿ ಸಾಮರಸ್ಯ ಹದಗೆಡಲು ವ್ಯವಸ್ಥಿತ ಷಡ್ಯಂತ್ರ  ನಡೆಸುತ್ತಿದ್ದಾರೆ, ಈ ಘಟನೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ .ಇದೇ ರೀತಿ ಕಳೆದ ಕೆಲ ದಿನದ ಹಿಂದೆ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ಇಂತಹ ಘಟನೆ ನಡೆದಿದ್ದು ತಪ್ಪಿತಸ್ಥ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇರುವುದು ಜಿಲ್ಲೆಯಲ್ಲಿ ಶಾಂತಿ ಕದಡಲು ಕಾರಣವಾಗುತ್ತಿದೆ, ಜಿಲ್ಲೆಯಲ್ಲಿ ಕೋಮುಸೌಹಾರ್ದ ಹದಗೆಡಲು ಕೆಲವೊಂದು ಯುವಕರು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದು ಅವರನ್ನು ತಕ್ಷಣ ಬಂಧಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕೆಂದು  ಎಂದು ವಿಶ್ವ ಹಿಂದೂ ಪರಿಷತ್ತಿನ ಉಡುಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಸುವರ್ಣ ಬೊಳ್ಜೆ  ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!