ಕೀಳು ಮಟ್ಟದ ಹೇಳಿಕೆ ಸಂಸದರಿಗೆ ಶೋಭೆಯಲ್ಲ ವೆರೊನಿಕಾ ಕರ್ನೆಲಿಯೋ

ಸಂಸದೆ ಶೋಭಾ ಕರಂದ್ಲಾಜೆ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ  ಎಂಬ ಹೇಳಿಕೆ ಶೋಭಾ ಅವರ ಸ್ವ ಅನುಭವವನ್ನು ಕಾಂಗ್ರೆಸ್ ಪಕ್ಷಕ್ಕೆ ಹೋಲಿಕೆ ಮಾಡಿ ಮಾತನಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೋ ಖಂಡಿಸಿದ್ದಾರೆ.

‘ಶೋಭಾ ಕರಂದ್ಲಾಜೆ ಓರ್ವ ಹೆಣ್ಣಾಗಿ ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಖಂಡನೀಯ. ಐದು ವರ್ಷ ಸಂಸದರಾಗಿ ಸರಿಯಾಗಿ ಕೆಲಸ ಮಾಡದ ಅವರು ಅದೇ ರೀತಿಯ ಬೇರೆ ಮಹಿಳೆಯರು ಕೂಡ ಕೆಲಸ ಮಾಡಲಾಗದವರು ಎಂಬ ರೀತಿಯಲ್ಲಿ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ.ಬಳೆ ತೊಟ್ಟ ಮಹಿಳೆಯರು ದೇಶವನ್ನೇ ಆಳಿದ ಉದಾಹರಣೆ ತಮ್ಮ ಮುಂದೆ ಇರುವಾಗ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿದ್ದ  ಅವರದೇ ಹುಟ್ಟೂರು ಕರಾವಳಿಯ ಮಹಿಳೆಯರು ಕೂಡ ತಮ್ಮ ಸಾಧನೆಯನ್ನು ತೋರಿದ್ದು ಇದನ್ನು ಸಂಸದೆ ಮರೆತಿದ್ದಾರೆ.

ಓರ್ವ ಮಹಿಳಾ ಸಂಸದೆಯಾಗಿ ಏನೂ ಕೂಡ ಸಾಧನೆ ಮಾಡದ ಅವರು ಅಸಮರ್ಥ ಮಹಿಳೆಯಾಗಿದ್ದು ಇತರರ ಮಹಿಳೆಯರನ್ನು ಟೀಕಿಸುವ ನೈತಿಕ ಹಕ್ಕನ್ನು ಶೋಭಾ ಕಳೆದುಕೊಂಡಿದ್ದಾರೆ. ಇನ್ನು ಮುಂದಾದರೂ ಶೋಭಾ ಕರಂದ್ಲಾಜೆ ಮಾತನಾಡುವ ವೇಳೆ ಅರಿತು ಮಾತನಾಡಲಿ

Leave a Reply

Your email address will not be published. Required fields are marked *

error: Content is protected !!