ಹಸೆಮಣೆಯೇರಿದ ಹನ್ನೆರಡು ಜೋಡಿಗಳು

ಕಟಪಾಡಿ,: ಇಲ್ಲಿನ ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ವಾರ್ಷಿಕೋತ್ಸವದ ಅಂಗವಾಗಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ರವಿವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ತಂತ್ರಿಗಳಾದ ಬ್ರಹ್ಮಶ್ರೀ ವಿಶ್ವನಾಥ ಆಚಾರ್ಯ ಉದ್ಯಾವರ, ಪುರೋಹಿತ ಪಿ.ಕೆ. ಶ್ರೀಧರಾಚಾರ್ಯ ಪಾದೂರು ಮತ್ತು ವೈದಿಕ ವೃಂದದ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಯುವ ಸಂಘಟನೆಯ ಅಧ್ಯಕ್ಷ ವೈ. ಗಣೇಶ ಆಚಾರ್ಯ ಉಚ್ಚಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಮುಂಬಯಿ ದಹಿಸರ್‌ ಹೊಟೇಲ್‌ ಗೋಕುಲಾನಂದ ಪ್ರೈ.ಲಿ.ನ ರಾಜೀವಿ-ಕೃಷ್ಣ ವಿ. ಆಚಾರ್ಯ ದಂಪತಿ ಉದ್ಘಾಟಿಸಿದರು.

ಬೆಂಗಳೂರು ಗಾಂಧಿನಗರ ಹೊಟೇಲ್‌ ಅಕ್ಷಯ ಔರಾದ ವೀಣಾ ವಿಶ್ವನಾಥ ರಾವ್‌ ಮಾತನಾಡಿ, ಸಾಮೂಹಿಕ ವಿವಾಹದ ಮೂಲಕ ಸಮಾಜದ ನೊಂದವರ ಕಣ್ಣೀರೊರೆಸುವ ಕೆಲಸ ಸ್ತುತ್ಯರ್ಹ ಎಂದರು.

ಮುಖ್ಯ ನ್ಯಾಯಾಧೀಶೆ ಬೆಂಗಳೂರಿನ ಹೇಮಾವತಿ, ಅ. ಭಾ.ಬ್ಯಾಂಕ್‌ ನೌಕರರ ಒಕ್ಕೂಟದ ಅಧ್ಯಕ್ಷ ವೈ. ಸುದರ್ಶನ್‌ ಎಲ್ಲೂರು ಮಾತನಾಡಿದರು. ಮಂಗಳೂರು ಕೆನರಾ ಜುವೆಲರ್ನ ವಂದನಾ ಧನಂಜಯ ಪಾಲ್ಕೆ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಸಂಘಟನೆಯ ಗೌರವಾಧ್ಯಕ್ಷ ಸದಾಶಿವ ಆಚಾರ್ಯ ಪಡುಕುತ್ಯಾರು, ಮೊಕ್ತೇಸರರಾದ ನವೀನ್‌ ಆಚಾರ್ಯ ಪಡುಬಿದ್ರಿ, ವಿ. ಶ್ರೀಧರ್‌ ಆಚಾರ್ಯ ವಡೇರ ಹೋಬಳಿ, ಪ್ರವೀಣ ಆಚಾರ್ಯ ಬಾಕೂìರು, ಸತೀಶ್‌ ಆಚಾರ್ಯ ಮುಂಬಯಿ, ಶೇಖರ್‌ ಆಚಾರ್ಯ ಕಾಪು, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಸಲಹಾ ಸಮಿತಿ ಅಧ್ಯಕ್ಷ ವಿಶ್ವನಾಥ ಆಚಾರ್ಯ ಕರಂಬಳ್ಳಿ, ಕರ್ನಾಟಕ ರಾಮಸೇನಾ ಸಂಸ್ಥಾಪಕ ಪ್ರಸಾದ್‌ ಅತ್ತಾವರ, ಸಂಘಟನೆಯ ಸಂಚಾಲಕ ಮುರಳೀಧರ ಆಚಾರ್ಯ ಇನ್ನಂಜೆ, ಶ್ರೀ ಎಸ್‌ಕೆಜಿ ಕೋ- ಆಫ್ ಬ್ಯಾಂಕ್‌ ಅಧ್ಯಕ್ಷ ಜನಾರ್ದನ ಆಚಾರ್ಯ ಬೈಕಾಡಿ, ವಿಶ್ವಕರ್ಮ ಸಮಾಜ ಸೇವಾ ಸಂಘ ಚಕ್ರತೀರ್ಥದ ಅಧ್ಯಕ್ಷ ಕೇಶವ ಆಚಾರ್ಯ ಸಗ್ರಿ, ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್‌ ಆಚಾರ್ಯ, ಕೊಯಮತ್ತೂರು ವಿಶ್ವಕರ್ಮ ಸಂಘದ ಅಧ್ಯಕ್ಷ ಕೆ. ರಮೇಶ್‌ ಆಚಾರ್ಯ, ಬೊರಿವಿಲಿ ಬಿ. ರಮೇಶ್‌ ಆಚಾರ್ಯ ಮಂಚಕಲ್ಲು, ಸಂಘಟನೆಯ ಸಲಹೆಗಾರ ರವಿ ಪುರೋಹಿತ್‌ ಬಂಟಕಲ್ಲು ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್‌ ಆಚಾರ್ಯ ಕಳತ್ತೂರು, ಕೋಶಾಧಿಕಾರಿ ರತ್ನಾಕರ ಆಚಾರ್ಯ ಕುರ್ಕಾಲು, ಜತೆ ಕಾರ್ಯದರ್ಶಿ ದಿನೇಶ್‌ ಎರ್ಮಾಳ್‌, ಉಪಾಧ್ಯಕ್ಷರು, ಗೌರವ ಸಲಹೆಗಾರರು, ವಲಯಾಧ್ಯಕ್ಷರು ಉಪಸ್ಥಿತರಿದ್ದರು.

ಅಧ್ಯಕ್ಷ ವೈ. ಗಣೇಶ ಆಚಾರ್ಯ ಉಚ್ಚಿಲ ಸ್ವಾಗತಿಸಿದರು. ಅವಿಭಜಿತ ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್‌ ಆಚಾರ್ಯ ಅವರು ಪ್ರಸ್ತಾವನೆಗೈದರು. ರಾಜೇಶ್‌ ಆಚಾರ್ಯ ಅವರು ವಂದಿಸಿದರು. ಪುರೋಹಿತ್‌ ದಾಮೋದರ ಶರ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭಕ್ಕೆ ಉಡುಪಿ ಶ್ರೀಕೃಷ್ಣ ಮಠದಿಂದ ಎಂಟು ಸಾವಿರ ಲಾಡು ಕಳುಹಿಸಿಕೊಡಲಾಗಿತ್ತು. ಮಣಿಪಾಲ ಮಾಹೆಯ ಉದ್ಯೋಗಿ, ಯುವ
ಸಂಘಟನೆಯ ಸದಸ್ಯ ಪ್ರದೀಪ್‌ ಅವರು ದಿವ್ಯಾ ಅವರನ್ನು ವಿವಾಹವಾಗುವ ಮೂಲಕ ಮಾದರಿಯಾದರು. 7 ಸಾವಿರಕ್ಕೂ ಅಧಿಕ ಮಂದಿ ನೂತನ ವಧು-ವರರನ್ನು ಆಶೀರ್ವದಿಸಿದರು. ಸಮಾಜದ ಸಾಧಕರು, ಪ್ರತಿಭೆಗಳನ್ನು ಗುರುತಿಸಿ ಸಮ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!