ಪ್ರಧಾನಿ ಅಣ್ಣನ ಮಗಳ ಪರ್ಸ್ ಕದ್ದ ಕಳ್ಳರು

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕಳ್ಳರಿಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಣ್ಣನ ಮಗಳ ಪರ್ಸ್ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಗುರುತಿಸಿದ್ದಾರೆ. 

ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮಗಳಾದ ದಮಯಂತಿ ಬೆನ್ ಮೋದಿ ನಿನ್ನೆ ಪರ್ಸ್ ಕಳೆದುಕೊಂಡಿದ್ದರು. ಅಹ್ಮದಾಬಾದ್’ನಿಂದ ದೆಹಲಿಗೆ ಬಂದಿದ್ದ ದಮಯಂತಿ ಅವರು ಇಲ್ಲಿನ ಗುಜರಾತಿ ಭವನ ಮುಂಭಾಗ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದಿರುವ ಕಳ್ಳರಿಬ್ಬರು ಪರ್ಸ್ ಎಗರಿಸಿದ್ದರು. 

ಪರ್ಸ್ ನಲ್ಲಿ ರೂ.56 ಸಾವಿರ, ಎರಡು ಮೊಬೈಲ್ ಫೋನ್, ಮಹತ್ವದ ದಾಖಲೆಗಳು ಇದ್ದವು ಎಂದು ದಮಯಂತಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಳ್ಳರ ಪತ್ತೆಗೆ ತೀವ್ರ ಹುಡುಕಾಟ ಆರಂಭಿಸಿದ್ದರು. ಇದೀಗ ಸಿಸಿಟಿವಿಯಲ್ಲಿ ದೊರೆತ ದೃಶ್ಯಾವಳಿಗಳ ಮೂಲಕ ಕಳ್ಳರನ್ನು ಪತ್ತೆ ಹಚ್ಚಿದ್ದಾರೆಂದು ತಿಳಿಸಿದೆ.

ಇಬ್ಬರು ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಬಾಲಕನಿರುವುದು ಕಂಡು ಬಂದಿದೆ. ಶೀಘ್ರದಲ್ಲಿಯೇ ಇಬ್ಬರನ್ನೂ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ದೆಹಲಿ ಪೊಲೀಸ್ ವಕ್ತಾರ ಸಹಾಯಕ ಪೊಲೀಸ್ ಆಯುಕ್ತ ಅನಿಲ್ ಮಿಟ್ಟಲ್ ಅವರು ಹೇಳಿದ್ದಾರೆ. 

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಸಾಕಷ್ಟು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳ ಪೈಕಿ ಒಂದು ತಂಡ ಆರೋಪಿಗಳು ದೆಹಲಿ ಮೂಲದವರೆಂದು ಮಾಹಿತಿ ನೀಡಿದ್ದಾರೆ. 

Leave a Reply

Your email address will not be published. Required fields are marked *

error: Content is protected !!