ಗುಜರಾತ್: ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟುಗಳ ವಶ

ಬುಜ್ : ಗುಜರಾತಿನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಐದು ಪಾಕಿಸ್ತಾನದ ಮೀನುಗಾರಿಕಾ ಬೋಟುಗಳನ್ನು ವಶಕ್ಕೆ ಪಡೆದುಕೊಂಡಿವೆ.

ಶೋಧ ಕಾರ್ಯಾಚರಣೆ ವೇಳೆಯಲ್ಲಿ ಈ ಬೋಟುಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಗಡಿ ಭದ್ರತಾ ಪಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 

ಅಕ್ಟೋಬರ್ 11 ರಂದು ರಾತ್ರಿ 10-45 ರ ಸುಮಾರಿನಲ್ಲಿ ಹರಮಿ ನುಲ್ಲಾ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಸೇರಿದ ಐದು ಮರದ ಮೀನುಗಾರಿಕಾ ಬೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಲಾಗಿದೆ. 

ಕಳೆದ ವಾರ ಪಾಕಿಸ್ತಾನದ ಎರಡು ಮರದ ಮೀನುಗಾರಿಕಾ ಬೋಟುಗಳನ್ನು ಗಡಿ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿತ್ತು

Leave a Reply

Your email address will not be published. Required fields are marked *

error: Content is protected !!