ಕಡಲಿಗೆ ಕಾದಿದೆ ಆಪತ್ತು: ಕಲ್ಮಾಡಿ ಬೊಬ್ಬರ್ಯ ನುಡಿ

ಉಡುಪಿ:ಪ್ರಕೃತಿ ಮುನಿದಿದೆ, ಕಡಲಿನಲ್ಲಿ ಸೂತಕದ ಗಾಳಿ ಬೀಸುತ್ತಿದೆ, ಕಡಲಿಗೆ ಕಾದಿದೆ ಆಪತ್ತು ಎಂದು ಕಲ್ಮಾಡಿ ಬೊಬ್ಬರ್ಯ ದೈವವು ನೀಡಿದ ನುಡಿಯು ಮೀನುಗಾರರಲ್ಲಿ ಇದ್ದ ಆತಂಕವು ಮತ್ತಷ್ಟು ಹೆಚ್ಚು ಮಾಡಿದೆ.


ಇಂದು ಬೆಳಿಗ್ಗೆ ಪರ್ಸಿನ್ ಮೀನುಗಾರರ ಸಂಘವು ಕಡಲಿನಲ್ಲಿ ಉಂಟಾದ ಮೀನಿನ ಕ್ಷಾಮಕ್ಕೆ ಮತ್ತು ಉಪಯೋಗವಿಲ್ಲದ ಮೀನುಗಳು ಕಡಲಿನಲ್ಲಿ ಹೇರಳವಾಗಿ ಸಿಗುವ ಪರಿಣಾಮ ಮೀನುಗಾರರು ತೊಂದರೆ ಅನುಭವಿಸುತ್ತಿರುವದನ್ನು ಮನಗಂಡು ಕಲ್ಮಾಡಿಯ ಬೊಬ್ಬರ್ಯನ ಮೊರೆ ಹೋಗಿದ್ದರು.


ಅಲ್ಲಿ ದೈವವು ನೀಡಿದಂತಹ ಪ್ರಸಾದದಲ್ಲಿ ಸತತ ನಾಲ್ಕು ಬಾರಿಯೂ ತಡೆ ಬಂದಿದ್ದು ಮೀನುಗಾರರಲ್ಲಿ ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿತು.
ಮಾತ್ರವಲ್ಲದೆ ದೈವವು ಕಡಲಿಗೆ ಅನಿಷ್ಠ ಒದಗಿಬಂದಿದ್ದು ಮಾತ್ರವಲ್ಲದೆ ಮೀನುಗಾರರಲ್ಲಿ ಇರುವ ಕಚ್ಚಾಟದ ಬಗ್ಗೆಯೂ ಹೇಳಿದೆ.


ಇದೆಲ್ಲ ಸಂಕಷ್ಟವನ್ನು ದೂರ ಮಾಡಬೇಕಾದರೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ತೀರ್ಥ ಪ್ರಸಾದ ಮತ್ತು ಕಲ್ಮಾಡಿ ಬೊಬ್ಬರ್ಯನ ಪ್ರಸಾದವನ್ನು ಸಮುದ್ರದ ಮಧ್ಯೆ ಹೋಗಿ ಸಮರ್ಪಿಸಿ ಬರಬೇಕೆಂದು ದೈವವು ನುಡಿನೀಡಿದೆ.

Leave a Reply

Your email address will not be published. Required fields are marked *

error: Content is protected !!