ಯೋಗದ ಮಹತ್ವ

ಯೋಗವು ಚಿತ್ತ ವೃತ್ತಿ ನಿರೋಧ ಯೋಗದಿಂದ  ಶಾರೀರಿಕ ಹಾಗು ಮಾನಸಿಕ ಅರೋಗ್ಯ ವೃದ್ಧಿಯಾಗುತ್ತದೆ

ಯೋಗದಲ್ಲಿ 8   ಸ್ಥರಗಳಿವೆ ಅವುಗಳು ಯಾವುದೆಂದರೆ

1 . ಯಮ

2 .ನಿಯಮ

3 .ಆಸನ

4 . ಪ್ರಾಣಾಯಾಮ

5 ಪ್ರತ್ಯ ಹಾರ 

6 ಧ್ಯಾನ

7 ಧಾರಣ

8 ಸಮಾಧಿ

ಯೋಗವು ನಮಗೆ  ನಡವಳಿಕೆ, ಸ್ರಜನ ಶೀಲತ್ವ , ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಕಾಪಾಡುತ್ತದೆ

ಇತ್ತೀಚಿನ ದಿನಗಳಲ್ಲಿ ದೈಹಿಕವಾದ ಆರೋಗ್ಯಕ್ಕೆ ಮಾತ್ರ ಯೋಗವನ್ನ ಅಭ್ಯಾಸ ಮಾಡುವಂತಹ ಕಾಲ ಬಂದಿದೆ. ಯೋಗ ಎನ್ನುವುದು ರೋಗವನ್ನು ಮಾತ್ರ ಗುಣಪಡಿಸಲು ಮಾತ್ರ ಇರುವಂತಹ ಮಾರ್ಗವಲ್ಲ . ಅದರನೊಂದಿಗೆ ಇದು ನಮ್ಮ ನಿಮ್ಮ ಜೀವನದ ಒಂದು ಕ್ರಮವಾಗಬೇಕು

ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರು ಯೋಗವನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ನಮ್ಮ ಈಗ ಜಂಕ್ ಪದಾರ್ಥಗಳು  ದಿನೇ ದಿನೇ ನಮ್ಮ ಆರೋಗ್ಯವನ್ನ ಹದಗೆಡಿಸುತ್ತಿದೆ ಹಾಗಾಗಿ ಯೋಗದ ಮಹತ್ವ ನಾವು ಅರಿತಲ್ಲಿ  ಸಮಾಜದ ಸರ್ವೋತೋಮುಖ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ .

ಯೋಗದೊಂದಿಗೆ ಆಯುರ್ವೇದದಲ್ಲಿ ಹೇಳಿರುವಂತಹ ಆಹಾರಕ್ರಮಗಳು, ಋತು ಚರ್ಯ, ಆರೋಗ್ಯಯುತ ದಿನಚರಿಯನ್ನ ವ್ಯಕ್ತಿ  ಅಳವಡಿಸಿಕೊಂಡಲ್ಲಿ ಮನುಷ್ಯ ನಿರೋಗಿಯಾಗಿ  ಬದುಕಲು ಸಾಧ್ಯವಾಗುತ್ತದೆ

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡವು ದಿನೇ ದಿನೇ ನಮ್ಮ ಅನಾರೋಗ್ಯದ ಕಡೆಗೆ ದೂಡುತ್ತಿದ್ದೆ

ಅದಕ್ಕಾಗಿಯೇ ಪ್ರಾಣಾಯಾಮ ದ್ಯಾನಗಳನ್ನ ನಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಅದೆಷ್ಟೋ ಮಾನಸಿಕ ಕಾಯಿಲೆಗಳನ್ನು ದೂರವಿಡಲು ಸಾಧ್ಯವಿದೆ ಹಾಗು ಅದರಿಂದ ಹೊರಬರಲು ಸಾಧ್ಯವಿದೆ .ಜೂನ್ 21  ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಈ ಶುಭ ದಿನದಿಂದ ಯೋಗವನ್ನ ನಿಮ್ಮ ದಿನಚರಿಯಲ್ಲಿ  ಸೇರಿಸಿಕೊಂಡು  ರೋಗ ಮುಕ್ತವಾಗಿ ಬದುಕಿ ಸ್ವಸ್ಥ ಸಮಾಜವನ್ನ ನಿರ್ಮಾಣ ಮಾಡಿ ಎಂಬುದಾಗಿ ಉಡುಪಿ ಟೈಮ್ಸ್ ನ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ 

ಡಾ. ರಾಜೇಶ್ ಬಾಯರಿ, ಚಿತ್ರಕೂಟ ಆರ್ಯುವೇದ
ಚಿತ್ತೂರು, ಕುಂದಾಪುರ ಸಂಪರ್ಕಿಸಿ. www.chithrakoota.comFacebookTwitterEmailShare

Leave a Reply

Your email address will not be published. Required fields are marked *

error: Content is protected !!