ಬಹು ನಿರೀಕ್ಷೆಯ ಬೆಲ್ಚಪ್ಪ ತುಳು ಚಿತ್ರ ಅಗಸ್ಟ್ 9 ರಂದು ಬೆಳ್ಳಿ ತೆರೆಗೆ……
ಬೆಲ್ಚಪ್ಪ ಚಿತ್ರಕ್ಕೆ ಕಥೆ- ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ರಜನೀಶ್ ದೇವಾಡಿಗ ಮಾಡಿದ್ದು ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ತುಳುನಾಡಿನ ಮಾಣಿಕ್ಯ, ಹಾಸ್ಯ ಚಕ್ರವರ್ತಿ ಅರವಿಂದ ಬೋಳಾರ್ ಮುಖ್ಯ ಭೂಮಿಕೆ ನಟಿಸಿದ್ದು ಚಿತ್ರದ ಕೇಂದ್ರಬಿಂದುವಾಗಿದ್ದಾರೆ. ಇನ್ನು ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯ ಮುಖ್ಯ ಪಾತ್ರದಲ್ಲಿದ್ದಾರೆ. ಹಾಸ್ಯಕಲಾವಿದರಾದ ಉಮೇಶ್ ಮಿಜಾರು,ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆ, ಯಜ್ಞೇಶ್, ಹಾಸ್ಯಕ್ಕೆ ಜೀವ ತುಂಬಿದ್ದಾರೆ.ಆಶಾ ಮಾರ್ನಾಡು, ಸುಭಾಶ್ ಶೆಟ್ಟಿ, ಸುಬ್ಬು ಮೂಡುಬಿದರೆ, ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ಮಾಡಿದ್ದಾರೆ. ಇನ್ನು ಸಾಹಿತ್ಯ ಹಾಗೂ ರಾಗ ಸಂಯೋಜನೆಯನ್ನು ಭರತ್ ಕುಮಾರ್ ಮಾಡಿದ್ದು ತುಳು ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂ.ಕೆ.ವಿ.ಎ.ಆರ್ ಸ್ಟೆಡಿ ಸೈಕಲ್, ಸ್ಟೆಡಿ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಹಣವನ್ನು ಬಾಲಿವುಡ್ ಖ್ಯಾತಿಯ ಲಕ್ಷ್ಮೀಶ್ ಶೆಟ್ಟಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಹಸದಲ್ಲಿ ಕೌರವ ವೆಂಕಟೇಶ್ , ಸಂಕಲನದಲ್ಲಿ ಶ್ರೀಧರ್ , ಸಹ ನಿರ್ದೇಶನದಲ್ಲಿ ಸುಬ್ಬು ಮೂಡಬಿದರೆ, ಸಂತೋಷ್ ಶೆಟ್ಟಿ ಮಿಜಾರ್,ರಾಕೇಶ್ ದೇವಾಡಿಗ ಮತ್ತಿತರರು ದುಡಿದಿದ್ದಾರೆ.
ಈಗಾಗಲೇ ಟ್ರೈಲರ್ ಬಿಡುಗಡೆಯನ್ನ ಚಿತ್ರ ತಂಡ ಮಾಡಿದ್ದು ತುಳುನಾಡಿನಾದ್ಯಂತ ಸಂಚಲನ ಮೂಡಿಸಿದೆ. ಕರಾವಳಿಯಲ್ಲಿ ಬೆಲ್ಚಪ್ಪಗೆ ಭಾರೀ ರೆಸ್ಪಾನ್ ವ್ಯಕ್ತವಾಗಿದೆ. ಚಿತ್ರದ ಶೂಟಿಂಗ್ ನಿಂದ ಹಿಡಿದು ಪ್ರಮೋಷನ್ ತನಕ ಡಿಫರೆಂಟ್ ಆಗಿ ಬೆಲ್ಚಪ್ಪ ಮುಂದಡಿ ಇಟ್ಟಿದ್ದಾನೆ. ಕೋಸ್ಟಲ್ ವುಡ್ ನಲ್ಲೇ 14 ದಿನದಲ್ಲಿ ಹಾಡು ಸಹಿತ ಚಿತ್ರಿಕರಣ ಮುಗಿಸಿದ ದಾಖಲೆಯನ್ನ ಬೆಲ್ಚಪ್ಪ ಚಿತ್ರ ತಂಡ ಮಾಡಿದೆ. ಚಿತ್ರದ ಟ್ರೈಲರ್ ನ್ನು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆನೆ ಲಕ್ಷ್ಮೀ ಯ ಆಶೀರ್ವಾದದಿಂದ ನಡೆದಿದ್ದು ಟ್ರೈಲರನ್ನು ಯು ಟ್ಯೂಬ್ ನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬೆಲ್ಚಪ್ಪ ಚಿತ್ರ ಉಡುಪಿಯ ಆಸುಪಾಸಿನಲ್ಲೇ ಚಿತ್ರೀಕರಣ ಮಾಡಲಾಗಿದೆ.
ಭರತ್ ಕುಮಾರ್, ರತ್ನಾಕರ್ ಇಂದ್ರಾಳಿ, ಪಲ್ಲವಿ ಸಂತೋಷ್, ಸಂತೋಷ್ ಶೆಟ್ಟಿ ಮಿಜಾರ್, ಮನೀಷ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.