ಕಾಶ್ಮೀರದಲ್ಲಿ ಉಡುಪಿ ಹೋಟೆಲ್ ಮತ್ತು ಪೇಜಾವರ ಮಠದ ಶಾಖೆ ಸ್ಥಾಪನೆಯಾಗಲಿ : ವಾಸುದೇವ ಭಟ್

ಉಡುಪಿ :ಜಮ್ಮು ಕಾಶ್ಮೀರದಲ್ಲಿ ಈ ತನಕ ಇದ್ದ  ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರಕಾರ ರದ್ದು ಪಡಿಸುವ ಐತಿಹಾಸಿಕ ಹೆಜ್ಹೆ ಇರಿಸಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಈ ಮೂಲಕ ತಾಯಿ ಭಾರತಿಯ ಕಿರೀಟವನ್ನು ಉಳಿಸಿಕೊಂಡಂತಾಗಿದೆ.

ಇದಕ್ಕಾಗಿ ಕೇಂದ್ರಸರಕಾರಕ್ಕೆ ಅಭಿನಂದನೆಗಳು  ಸಲ್ಲಿಸಿದ ಭಟ್,  ಈ ಐತಿಹಾಸಿಕ‌ನಿರ್ಣಯದ ಹಿನ್ನಲೆಯಲ್ಲಿ  ಜಮ್ಮು ಕಾಶ್ಮೀರದಲ್ಲಿ ಅತೀ ಶೀಘ್ರ ಉಡುಪಿ ಹೋಟೆಲ್ ಮತ್ತು ಉಡುಪಿ ಪೇಜಾವರ ಮಠದ ಶಾಖೆಯು ಸ್ಥಾಪನೆಯಾಗಲಿ ಎಂದು  ಉದ್ಯಮಿಗಳು ಮತ್ತು ಪೇಜಾವರ ಶ್ರೀಗಳವರಲ್ಲಿ ಸಾಮಾಜಿಕ  ಕಾರ್ಯಕರ್ತನಾಗಿ ಒತ್ತಾಯವನ್ನು ಮಂಡಿಸುತ್ತಿದ್ದೇನೆ.

ದೇಶ ಮತ್ತು ಪ್ರಪಂಚಾದ್ಯಂತ ಉಡುಪಿ ಹೋಟೆಲ್ ಗಳು ಪ್ರಸಿದ್ಧವಾಗಿದ್ದರೂ ಕಾಶ್ಮೀರದಲ್ಲಿ ಸ್ಥಾಪಿಸುವ ಅವಕಾಶ ಇರಲಿಲ್ಲ. ಅದೇ ರೀತಿ ಪೂಜ್ಯ ಪೇಜಾವರ ಶ್ರೀಗಳು ದೇಶಾದ್ಯಂತ ಶ್ರೀಮಠದ ಶಾಖೆಗಳನ್ನು ಸ್ಥಾಪಿಸಿದ್ದರೂ  ಕಾಶ್ಮೀರದಲ್ಲಿ ಇರದೇ ಇದ್ದುದ್ದು ಅವರ ತ್ರಿವಿಕ್ರಮ ಸಾಧನೆಗೆ ಕೊರತೆಯಾಗಿತ್ತು 370 ನೇ ವಿಧಿ ರದ್ದಾಗಿರುವುದರಿಂದ ಆ ಸಾಧನೆಗೆ ಅವಕಾಶವಾಗಿದೆ. ಆದ್ದರಿಂದ ಈ ಕೂಡಲೇ ಅಲ್ಲಿ ಉಡುಪಿ ಹೋಟೆಲ್ ಮತ್ತು ಪೇಜಾವರ ಮಠದ ಶಾಖೆ ಆರಂಭವಾಗಲಿ ಎಂದು ಒತ್ತಾಯಿಸುತ್ತೇನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!