ಮೊದಲನೇ ಹಂತದ ಖಾಸಗಿ ಮಿಯಾವಾಕಿ ವನಕ್ಕೆ ಚಾಲನೆ
ಉಡುಪಿ : ಪರಿಸರ ಮಾಲಿನ್ಯ, ಅಂತರ್ ಜಲ ವೃದ್ಧಿ,ಹೆಚ್ಚುತ್ತಿರುವ ಭೂಮಿಯ ತಾಪಮಾನಕ್ಕೆ ಇಂತಹ ಹತ್ತು ಹಲವಾರು ಸಮಸ್ಯೆಗೆ ಪರಿಹಾರವೇ “ಮಿಯಾವಾಕಿ ಕಾಡು”. ಇಂದು ಕಟಪಾಡಿ ಮಹೇಶ್ ಶೆಣೈಯವರ ಪೊಸರಿನ “ಗುರು ಕೃಪಾದಲ್ಲಿ” ಮೊದಲನೇ ಹಂತದ ಖಾಸಗಿ ಮಿಯಾವಾಕಿ ವನಕ್ಕೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಚಾಲನೆ ನೀಡಿದರು.” ಮಿಯಾವಾಕಿ” ಈ ವಿಧಾನವು ಭಾರತದ ಪಂಜಾಬ್ , ಮುಂಬೈ, ಬೆಂಗಳೂರು ಮತ್ತು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಅತ್ಯಂತ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯವನ್ನು ನಿರ್ಮಿಸ ಬಹುದಾಗಿದೆ.ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 400 ಮರಗಳನ್ನು ನೀಡಬಹುದಾಗಿದೆ ಮತ್ತು ಈ ವಿಧಾನವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ “Organic living”/ “ಸಾವಯವ ಬದುಕು “ತಂಡ ಪರಿಚಯಿಸುತ್ತಿದೆ. ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವ ಅಭಿಯಾನ ನಡೆಯಲಿದೆ. ಎರಡನೇ ಹಂತದಲ್ಲಿ ಎರಡು ಸೆಂಟ್ಸ್ ಜಾಗದಲ್ಲಿ 260 ಸಸಿಗಳನ್ನು ನೆಡುವ ಉದ್ದೇಶ ಇದ್ದು ,ಇದು ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ. ಸರಿಸುಮಾರು 260 ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿ ಗಳನ್ನು ಆಹ್ವಾನಿಸಿ (260 “ಮಿಯಾವಾಕಿ ವನಗಳು ” ಮೂಡಿ ಬರಲಿ ಎಂಬ ಉದ್ದೇಶದಿಂದ) ಮರದ ಸಸಿಗಳನ್ನು ನೆಟ್ಟು ಕಡಿಮೆ ಜಾಗದಲ್ಲಿ ಶೀಘ್ರ ವಾಗಿ ಬೆಳೆಯುವ ದಟ್ಟ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡುವ ಉದ್ದೇಶ ಇದೆ. ಇಂದು.ಕೆ. ಮಹೇಶ್ ಶೆಣೈ, ರವಿ ಕಟಪಾಡಿ, ಶ್ರೀ ನಿತ್ಯಾನಂದ ಒಳಕಾಡು, ಶ್ರೀ ಗಣೇಶ ರಾಜ್ ಸರಳಬೆಟ್ಟು ಇವರು ಉಪಸ್ಥಿತರಿದ್ದರು.