ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಜ್ಞಾನ ವಿಕಾಸ ಶಿಭಿರ: ಗುರೂಜಿ ಸಾಯಿ ಈಶ್ವರ್


ಉಡುಪಿ: ಬನ್ನಂಜೆ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮಕ್ಕಳ ಜ್ಞಾನ ವಿಕಸನ ಶಿಬಿರವನ್ನು ಗುರೂಜಿ ಸಾಯಿ ಈಶ್ವರ್ ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಹಿಂದೂ ಸಂಘಟನೆಯ ನಾಯಕರಾದ ಮಂಜು ಕೊಳ, ಸಂಪತ್ ಶೆಟ್ಟಿ ಉಡುಪಿ, ಪುರಂದರ್ ಉಡುಪಿ, ಬನ್ನಂಜೆ ದಯಾಕರ್ ಭಟ್ ಭಾಗವಹಿಸಿದರು.
ಒಟ್ಟು ನೂರ ಮೂವತ್ತನಾಲ್ಕು ಮಕ್ಕಳು ಶಿಬಿರದಲ್ಲಿ ಭಾಗವಹಿಸಿದರು.ಮಕ್ಕಳ ನಕಾರಾತ್ಮಕ ಶಕ್ತಿಯನ್ನು ತೆಗೆದು ಧನಾತ್ಮಕ ಶಕ್ತಿ ಜಾಗ್ರತಗೊಳಿಸುವುದು.ದೇಹದ ಆಧ್ಯಾತ್ಮ ಕೇಂದ್ರ ಜಾಗರಣಗೊಳಿಸುವುದು.ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಧ್ಯಾನ ಕ್ರಿಯೆ ಬಗ್ಗೆ ಮಾಹಿತಿ. ಮಕ್ಕಳ ಮಾನಸಿಕ , ಆರೋಗ್ಯ ವಿಕಾಸನ. ಮಕ್ಕಳ ಸಣ್ಣಪುಟ್ಟ ತಪ್ಪು ನಡವಳಿಕೆ ಯಿಂದ ಭವಿಷ್ಯದಲ್ಲಿ ಮುಂದೆ ಬರುವ ಸಮಸ್ಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು. ಹಿರಿಯರಿಗೆ ಗೌರವಿಸುವುದು ಹೇಗೆ ಮತ್ತು ಅದರಿಂದ ಆಗುವ ಶೇಯಸ್ಸಿನ ಬಗ್ಗೆ ಮಾಹಿತಿ. ಜೀವನಕ್ಕೆ ಗುರಿ ಮತ್ತು ಅದರತ್ತ ಹೋಗುವ ದಾರಿ ಇವುಗಳ ಬಗ್ಗೆ ಶಿಭಿರ ದಲ್ಲಿ ಮಕ್ಕಳಿಗೆ ವಿಷೇಶ ತರಬೇತಿ ನೀಡಲಾಯಿತು.


“ಮಕ್ಕಳೇ ವಿಶ್ವದ ಮುಂದಿನ ಭವಿಷ್ಯ” ಎಂಬ ಕಾರ್ಯಕ್ರಮವನ್ನು ರಾಜ್ಯದ ಅನೇಕ ಕಡೆ ಆಯೋಜಿಸಿದ ಮಹಾನ್ ಸಂತ ವಿಶ್ವದ ನಂ.೧ ಪೆಂಡುಲಂ ಶಾಸ್ತ್ರಜ್ಞರಾದ ಗುರೂಜಿ ಸಾಯಿ ಈಶ್ವರ್ ಇವರು ಈ ಶಿಬಿರವನ್ನು ಆಯೋಜಿಸಿದ್ದರು.ಒಂದು ಆರೋಗ್ಯಕರ ಮನೆಯ ಪರಿಸರದಲ್ಲಿ ಮಕ್ಕಳ ಬೆಳವಣಿಗೆ, ಮಕ್ಕಳ ಜ್ಞಾನದ ಸರ್ವತೋಮುಖ ವಿಕಾಸಕ್ಕೆ ದಾರಿಯಾಯಿತು. ಈ ಶಿಬಿರ, ಮಕ್ಕಳಿಗೆ ನಿಯಮಿತ ಬದುಕುವ ದಾರಿ ಯೊಂದಿಗೆ ಅವರ ದೇಹದಲ್ಲಿಯ ಆತ್ಮ , ತೇಜಸ್ವು (AURA) ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಉತ್ತಮ ಸಂಸ್ಕೃತಿ , ಸಂಸ್ಕಾರಯುತ ಜೀವನ ರೂಪಿಸಲು ಈ ಶಿಬಿರ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು ಮತ್ತು ಅವರ ಹೆತ್ತವರು ಕಾರ್ಯಕ್ರಮದ ಬಗ್ಗೆ ಸಂತಸ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!