ನಿಟ್ಟೂರು ಪ್ರೌಢಶಾಲೆ ಹಳೆವಿದ್ಯಾರ್ಥಿ ಸಂಘದಿಂದ ಶಿಕ್ಷಕರಿಗೆ ಗೌರವ
ಉಡುಪಿ : ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಬ್ರಹ್ಮಾವರ ವಲಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಅತ್ಯಧಿಕ ಶೇಖಡಾವಾರು ಫಲಿತಾಂಶ ತರುವಲ್ಲಿ ಶ್ರಮಿಸಿದ ಅಧ್ಯಾಪಕ ವೃಂದವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ಜೂನ್ 22, 2019ರಂದು ಶಾಲೆಯ ಸಭಾಂಗಣದಲ್ಲಿ ಜರಗಿತು.
ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ, ಶಾಸಕ ಶ್ರೀ ಕೆ. ರಘುಪತಿ ಭಟ್‌ರವರು ಮುಖ್ಯೋಪಾಧ್ಯಾಯರಾದ ಶ್ರೀ ಮುರಲಿ ಕಡೆಕಾರ್, ಶಿಕ್ಷಕರಾದ ಶ್ರೀಮತಿ ಅನಸೂಯ, ಶ್ರೀ ಎಚ್.ಎನ್ ಶೃಂಗೇಶ್ವರ್, ಶ್ರೀಮತಿ ನಮಿತಾಶ್ರೀ, ಶ್ರೀ ರಾಮದಾಸ್, ಶ್ರೀ ದೇವದಾಸ ಶೆಟ್ಟಿ, ಶ್ರೀ ಅಶೋಕ ಎಂ. ಶ್ರೀಮತಿ ಸೀಮಾ, ಶ್ರೀಮತಿ ಚಿನ್ನಮ್ಮ, ಶ್ರೀ ಮಂಜುನಾಥ ಶಿಕ್ಷಕೇತರ ವೃಂದದವರಾದ ಶ್ರೀಮತಿ ಮನೋರಮಾ, ಶ್ರೀಮತಿ ಕವಿತಾ, ಶ್ರೀ ಪ್ರಸಾದ್ ಇವರನ್ನು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಪಠ್ಯದೊಂದಿಗೆ ವೈವಿಧ್ಯಮಯ ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಾ ಈ ಶಾಲೆಯ ಅಧ್ಯಾಪಕ ವೃಂದ ನಿರಂತರವಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಶಿಕ್ಷಣ ನೀಡುತ್ತಾ ಬಂದಿದೆ, ಶಾಲೆಗೆ ಹಿಂದುಳಿದ ವರ್ಗದ ಹಾಸ್ಟೆಲ್ ಮಂಜೂರಾಗಿದ್ದು ತನ್ಮೂಲಕ ಉತ್ತರ ಕರ್ನಾಟಕದ ಕಾರ್ಮಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಸೇರ್ಪಡೆಗೆ ಅವಕಾಶವಾಗುತ್ತದೆ ಎಂದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರೀ ಶ್ರೀ ಭಾಸ್ಕರ ಡಿ. ಸುವರ್ಣ, ನಿವೃತ್ತ ಮುಖ್ಯೋಪಾಧ್ಯಾಯ ಕೆ. ಎ. ಪಿ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು