ಟ್ಯಾಕ್ಸಿ ಮೆನ್ಸ್ ಅಸೋಸಿಯೇಷನ್ – ಗೋವಾ ಮುಖ್ಯಮಂತ್ರಿ ಭೇಟಿ

ಉಡುಪಿ: ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ನ ನಿಯೋಗವು ನಿನ್ನೆ ಜಿಲ್ಲಾಧ್ಯಕ್ಷರಾದ ಕೆ.ರಘುಪತಿ ಭಟ್ ರವರ ನೇತೃತ್ವದಲ್ಲಿ  ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವನ್ನು ಭೇಟಿ ಮಾಡಿದರು.   ರಾಜ್ಯದ ಸ್ಟೇಟ್ ಪರ್ಮಿಟ್ ವಾಹನಗಳಿಗೆ ಗೋವಾ ಪ್ರವೇಶಕ್ಕೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಸಿ , ಮನವಿಯನ್ನು ಸಲ್ಲಿಸಲಾಯಿತು.

ಮನವಿಯನ್ನು ಪರಿಶೀಲಿಸಲಿಸಿದ ಗೋವಾ ಮುಖ್ಯ ಮಂತ್ರಿ  ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.  ಈ ಸಂದರ್ಭದಲ್ಲಿ ನಮ್ಮ ಪ್ರಧಾನ ಕಾರ್ಯದರ್ಶಿ ಯಾದ ರಮೇಶ್ ಕೆ ಕೋಟ್ಯಾನ್,  ಕಾರ್ಯಾಧ್ಯಕ್ಷರಾದ ಹರಿದಾಸ್ ಭಟ್, ಕೋಶಾಧಿಕಾರಿಗಳಾದ ಪ್ರಕಾಶ್ ಅಡಿಗ,  ಉಪಾಧ್ಯಕ್ಷರಾದ ರಾಘವೇಂದ್ರ ಸೋಮಯಾಜಿ , ಸಂಘಟನಾ ಕಾರ್ಯದರ್ಶಿ ಯಾದ ವಿನ್ಸೆಂಟ್ ಬಂಟಕಲ್ ಮತ್ತಿತರರು ಉಪಸ್ಥಿತಿತರಿದ್ದರು.

Leave a Reply

Your email address will not be published. Required fields are marked *

error: Content is protected !!