ತರಬೇತಿ ಪಡೆದಾಗಲೇ ಕಲೆಯು ಬಲಿಷ್ಟವಾಗುವುದು – ವಂ.ವಿಲ್ಪ್ರೆಡ್ ಪ್ರಕಾಶ್ ಡಿಸೋಜ

ಇಂದಿನ ಮೊಬೈಲ್ ಯುಗದಲ್ಲೂ ಈ ಯುವಜನರು ರಂಗಭೂಮಿಯ ತರಬೇತಿ ಪಡೆದು,  ಕೊಂಕಣಿ ನಾಟಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮಾಂಡ್ ಸೊಭಾಣ್ ಕಲೆ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಯೋಗದಾನ ನೀಡುತ್ತಿದೆ. ಯಾವುದೇ ಕಲೆಯು ತರಬೇತಿ ಪಡೆದಾಗಲೇ ಬಲಿಷ್ಟವಾಗುವುದು. ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಸಂತ ಜೊಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಂ ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಹೇಳಿದರು.

ಅವರು ಶಕ್ತಿನಗರದ ಕಲಾಂಗಣದಲ್ಲಿ ಭಾನುವಾರ, 01.09.19 ರಂದು ತಿಂಗಳ ವೇದಿಕೆ ಸರಣಿಯ 213 ನೇ ಕಾರ್ಯಕ್ರಮದಲ್ಲಿ, 2018-19 ಸಾಲಿನ, ಕೊಂಕಣಿ ನಾಟಕ ರೆಪರ್ಟರಿ, ಕಲಾಕುಲ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಶ್ರೇಷ್ಟ ಕಲಾಕುಲ್ ವಿದ್ಯಾರ್ಥಿಯಾಗಿ ಮನೀಶ್ ಪಿಂಟೊ ರೂ. 3000/- ಬಹುಮಾನ ಪಡೆದರೆ ಆಮ್ರಿನ್, ಸವಿತಾ ಹಾಗೂ ಸುಶ್ಮಿತಾ 1000/- ರೂಪಾಯಿಯೊಡನೆ ಶ್ರೇಷ್ಟ ಕೆಲಸಗಾರ ಗೌರವ ಪಡೆದರು. ತಮ್ಮ ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಸುಶ್ಮಿತಾ ತಾವ್ರೊ, ಸವಿತಾ ಸಲ್ಡಾನ್ಹಾ, ಆಮ್ರಿನ್ ಡಿಸೋಜ, ಮನೀಶ್ ಪಿಂಟೊ ಹಾಗೂ ಫ್ಲಾವಿಯಾ ಮಸ್ಕರೇನ್ಹಸ್ ಇವರಿಗೆ ರಂಗಭೂಮಿ ಪದವಿ ನೀಡಿ ಗೌರವಿಸಲಾಯಿತು. 2019-20 ನೇ ಸಾಲಿಗೆ ಶರ್ಲಿನ್ ಡಿಸೋಜ ಪೆರ್ಮನ್ನೂರು, ಅಕ್ಷಯ್ ಮೊಂತೇರೊ ಮಂಜೇಶ್ವರ್, ಜೀವನ್ ಸಿದ್ದಿ ಮುಂಡಗೋಡ್, ಸುಜಯಾ ನತಾಶಾ ಡಿಸೋಜ ವಾಲೆನ್ಸಿಯಾ ಹಾಗೂ ಕಳೆದ ಸಾಲಿನ ಮುಂದುವರಿಕೆಯಾಗಿ ಸವಿತಾ ಸಲ್ಡಾನ್ಹಾ, ಆಮ್ರಿನ್ ಡಿಸೋಜ, ಫ್ಲಾವಿಯಾ ಮಸ್ಕರೇನ್ಹಸ್ ಹಾಗೂ ಸಹ ತರಬೇತುದಾರರಾಗಿ ಗುರುಮೂರ್ತಿ ವಿ.ಎಸ್. ಆಯ್ಕೆಗೊಂಡರು.

ವೇದಿಕೆಯಲ್ಲಿ ಕಲಾಕುಲ್ 2019 ಅವಧಿಯ ಕಲಾಕುಲ್ ಪೋಷಕರಾದ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜ ಇವರ ಪರವಾಗಿ ಗಿಲ್ಬರ್ಟ್ ಡಿಸೋಜ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ವಿಕಾಸ್ ಕಲಾಕುಲ್ ವಾರ್ಷಿಕ ವರದಿಯನ್ನು ಮಂಡಿಸಿದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ `ಹಾಂವ್ ಕೊಣಾಚಿಂ? ಹೊಸ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!