ಗುಣವಂತೆ ಏತ ನೀರಾವರಿ ಯೋಜನೆಗೆ ಚಾಲನೆ ಕೊಟ್ಟ ಭಟ್ಕಳ ಶಾಸಕ ಸುನೀಲ್ ನಾಯ್ಕ್

ಹೊನ್ನಾವರ:- ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿ ಗುಣವಂತೆ ಏತ ನೀರಾವರಿ ಯೋಜನೆಗೆ ಇಂದು ಭಟ್ಕಳ ಶಾಸಕರಾದ ಸುನೀಲ್ ನಾಯ್ಕ್ ಚಾಲನೆ ನೀಡಿದರು.

ಈ ಯೋಜನೆಯು ಸರಿಸುಮಾರು 8000 ಕುಟುಂಬಗಳಿಗೆ,ಬರೋಬ್ಬರಿ 700 ಎಕರೆ ಕೃಷಿಭೂಮಿಗೆ ನೀರುಣಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಇದು ಬರೋಬ್ಬರಿ ಆರು ಕೋಟಿ ರುಪಾಯಿಗಳ ಕಾಮಗಾರಿಯಾಗಿದ್ದು ಅತಿಶೀಘ್ರದಲ್ಲೇ ಕಾಮಗಾರಿ ಮುಗಿಸಲಾಗುವುದು ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ್ ಮಾಧ್ಯಮದವರೊಂದಿಗೆ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!