ವಿದ್ಯಾರ್ಥಿಗಳ ಪ್ರತಿಭಟನೆ ಸುಖಾಂತ್ಯ

ಬಂಟ್ವಾಳ:   ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳನ್ನು ಆಡಳಿತ ಮಂಡಳಿ ಈಡೇರಿಸುತ್ತಿಲ್ಲ ಎಂದು ಆರೋಪಿಸಿ    ಬಂಟ್ವಾಳ ಎಸ್‌.ವಿ.ಎಸ್ ಕಾಲೇಜಿನ  ವಿದ್ಯಾರ್ಥಿಗಳು ಸೋಮವಾರ ಮತ್ತೆ ತರಗತಿ ಬಹಿಷ್ಕರಿಸಿ,ತಮ್ಮ ಷೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಕಳೆದ ವಾರ ಪ್ರತಿಭಟನೆಯ ಮೂರನೇ ದಿನದಂದು  ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಕರೆದು ಮಾತುಕತೆ ನಡೆಸಿದ ಪ್ರಾಂಶುಪಾಲರು  ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿ ಕಾಲೇಜ್ ನಿಂದ ಸಾಧ್ಯವಾಗುವ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಾತ್ಕಾಲಿಕಮಟ್ಟಿಗೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದರು. ಆದರೆ ಆಡಳಿತ ಮಂಡಳಿ ವಿದ್ಯಾರ್ಥಿ ಗಳ ಬೇಡಿಕೆ ಈಡೇರಿಸುವ ಸ್ಪಷ್ಟ ಭರವಸೆ ನೀಡದ ಹಿನ್ನಲೆಯಲ್ಲಿ  ಸೋಮವಾರ ಮತ್ತೆ ವಿದ್ಯಾರ್ಥಿ ಗಳು ಪ್ರತಿಭಟನೆಯ ಹಾದಿ ಹಿಡಿದಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪುರಸಭಾ ಸದಸ್ಯ ಗೋವಿಂದ ಪ್ರಭು ಹಾಗೂ  ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ ಅವರನ್ನೊಳಗೊಂಡ ನಿಯೋಗ ಕಾಲೇಜಿಗೆ ಭೇಟಿ ನೀಡಿ  ಸಂಚಾಲಕರೊಂದಿಗೆ ಮಾತುಕತೆ ನಡೆಸಿದರು. ಇದೀಗ ಕಾಲೇಜ್ ಆಡಳಿತ ಮಂಡಳಿ ಮುಂದಿನ 39 ದಿನದೊಳಗೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವ ಭರವಸೆಯನ್ನು ಸಂಚಾಲಕರು ನೀಡಿರುವ ಹಿನ್ನಲಯಲ್ಲಿ ಮುಷ್ಕರವು ಸುಖಾಂತ್ಯಗೊಂಡಿತು ‌ ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ. ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ. ಬೇಬಿ ಕುಂದರ್. ಸದಾಶಿವ ಬಂಗೇರ. ಜನಾರ್ದನ್ ಚಂತಡ್ತಿಮಾರ್. ಜಗದೀಶ್ ಕೊಯಿಲ. ಪ್ರಶಾಂತ್ ಕುಲಾಲ್. ಚಂದ್ರಶೇಖರ್ ಬಾಳ್ತಿಲ. ವಿಶ್ವಜಿತ್  ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.   ಸಿಐ ನಾಗರಾಜ್ ,ಎಸ್ ಐ ಚಂದ್ರಶೇಖರ,ಪ್ರಾಂಶುಪಾಲರಾದ ಪಾಂಡುರಂಗ ನಾಯಕ್ ರವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!