ಚಿನ್ನಾಭರಣ ವಂಚನೆ:ಬೀಡು ಬಿಟ್ಟಿದೆ ಖದೀಮರ ತಂಡ

ಉಡುಪಿ -ಕೊಪ್ಪ ದಿಂದ ಖದೀಮರ ತಂಡವೊಂದು ಉಡುಪಿಯಲ್ಲಿ ಬೀಡು ಬಿಟ್ಟಿರುವ ಬಗ್ಗೆ ಉಡುಪಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೊಪ್ಪ ದಲ್ಲಿ ತನ್ನ ಕೈ ಚಳಕ ತೋರಿಸಿರುವ ತಂಡ ಇದೀಗ ಉಡುಪಿ ಗೆ ಬಂದಿದೆ.
ಘಟನೆಯ ವಿವರ
ಕೊಪ್ಪ ದಲ್ಲಿ ಚಿನ್ನಾಭರಣಗಳ ಮಳಿಗೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿಳಿದ ಆಗಂತುಕರು ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಖರೀದಿಸಿ ನಂತರ ಅಂಗಡಿ ಮಾಲೀಕರ ಬ್ಯಾಂಕ್ ಖಾತೆಗೆ ಹಣವನ್ನ ಟ್ರಾನ್ಸ್ಫರ್ ಮಾಡಿದ ಬಗ್ಗೆ ಮೊಬೈಲ್ ನ ಸಂದೇಶವನ್ನ ತೋರಿಸಿ ಅಂಗಡಿ ಯಿಂದ ತೆರಳಿದ್ದಾರೆ ಆದರೆ ತುಂಬ ಸಮಯದ ನಂತರ ತನ್ನ ಖಾತೆಗೆ ಹಣ ಬರದೇ ಇದ್ದುದನ್ನ ಗಮನಿಸಿದ ಅಂಗಡಿ ಮಾಲೀಕ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ಅದೇ ತಂಡ ಇದೀಗ ಉಡುಪಿಗೆ ಬಂದಿದ್ದು ಇದೆ ರೀತಿಯ ಮೋಸ ಮಾಡುವ ಬಗ್ಗೆ ಅನುಮಾನವಿದ್ದು ಉಡುಪಿಯ ಎಲ್ಲ ಅಂಗಡಿಯವರು ಎಚ್ಚರಿಕೆ ಇರುವಂತೆ ಪೊಲೀಸ್ ಇಲಾಖೆ ಎಚ್ಚರಿಸಿದ್ದಾರೆ. ಅದೇ ರೀತಿ ಸಾರ್ವಜನಿಕರಿಗೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!