ಶ್ರೀದೇವಿ ಗ್ಲಾಸ್ ಹೌಸ್ : ಫಾರ್ಚೂನ್ ಸೇಫ್ಟಿ ಗ್ಲಾಸ್ ಲೋಕಾರ್ಪಣೆ
ಉಡುಪಿ: ಜಿಲ್ಲೆಯ ಪ್ರಸಿದ್ಧ ಗಾಜಿನ ಉತ್ಪನ್ನಗಳ ಉತ್ಪಾದಕರು ಮತ್ತು ಮಾರಾಟಗಾರರಾಗಿರುವ ಶ್ರೀದೇವಿ ಗ್ಲಾಸ್ ಹೌಸ್ನ ಸಹ ಸಂಸ್ಥೆ ಫಾರ್ಚೂನ್ ಸೇಫ್ಟಿ ಗ್ಲಾಸ್ನ ಉದ್ಘಾಟನೆಯು ಪಡುಬಿದ್ರೆ ಸಮೀಪದ ನಂದಿಕೂರಿನ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆಯಿತು.
ಡಾ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ನ ಮುಖ್ಯಸ್ಥ, ಉದ್ಯಮಿ ಡಾ. ಜಿ ಶಂಕರ್ ನೂತನ ಉದ್ಯಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ,ಕಠಿಣ ಪರಿಶ್ರಮ, ಹಾಗೂ ಗ್ರಾಹಕ ಸೇವೆಯ ಬದ್ಧತೆಯೊಂದಿಗೆ ಸಣ್ಣ ಉದ್ಯಮವನ್ನು ಸ್ಥಾಪಿಸಿ ಮೂವತ್ತು ವರ್ಷಗಳಲ್ಲಿ ಉನ್ನತ ಯಶಸ್ಸನ್ನು ಸಾಧಿಸಿ ಇದೀಗ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿದ ಗಾಜಿನ ಉತ್ಪನ್ನಗಳ ಬೃಹತ್ ಉತ್ಪಾದನಾ ಘಟಕವನ್ನು ಆರಂಭಿಸಿ ನೂರಾರು ಯುವಕರಿಗೆ ಉದ್ಯೋಗದ ಆಸರೆ ನೀಡಿದ ಸಂಸ್ಥೆಯ ಮಾಲಕ ಸುರೇಶ್ ನಾಯ್ಕ್ ಅವರ ಸಾಧನೆ ಅತ್ಯಂತ ಅಭಿನಂದನೀಯ ಮತ್ತು ಮಾದರಿಯಾದುದು ಎಂದರು.
ಉಡುಪಿಯಂಥಹ ಚಿಕ್ಕ ನಗರದಲ್ಲಿ ಇಂಥಹ ದೊಡ್ಡ ಉದ್ಯಮ ಸ್ಥಾಪನೆಯ ಹಿಂದೆ ಅವರ ದೊಡ್ಡ ಸಾಹಸದ ಕನಸು ಕಾರಣವಾಗಿದೆ .ನಿಶ್ಚಯವಾಗಿಯೂ ಅವರು ಕರಾವಳಿ ಜಿಲ್ಲೆಗಳಲ್ಲೇ ಅತ್ಯಂತ ಯಶಸ್ವಿ ಉದ್ಯಮಿಯಾಗುವುದರಲ್ಲಿ ಸಂದೇಹವೇ ಇಲ್ಲ ಈ ಸಂದರ್ಭ ನುಡಿದರು. ಉಡುಪಿ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್ ಅಧ್ಯಕ್ಷ ಎಂ ಗೋಪಾಲ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಂಡವಿ ಸಮೂಹ ಸಂಸ್ಥೆಯ ಮುಖ್ಯಸ್ಥ ಜೆರ್ರಿ ವಿನ್ಸೆಂಟ್ ಡಯಾಸ್ , ಸಾಯಿರಾಧಾ ಡೆವಲಪರ್ಸ್ ಮನೋಹರ್ ಶೆಟ್ಟಿ , ಉಜ್ವಲ್ ಡೆವಲಪರ್ಸ್ ಪಿ. ಪುರುಷೋತ್ತಮ ಶೆಟ್ಟಿ, ಮಂಗಳೂರು ಸಿವಿಲ್ ಇಂಜಿನಿಯರ್ಸ್ ಸಂಸ್ಥೆ ಅಧ್ಯಕ್ಷ ಅರುಣ ಪ್ರಭ , ಮುಂಬಯಿಯ ವಿವಾ ಕಂಪೊಸೈಟ್ ಪೆನೆಲ್ ಪ್ರೈ ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಜೈನ್ ಮೊದಲಾದರು ಭಾಗವಹಿಸಿದ್ದರು.
ಈ ಘಟಕವನ್ನು ಆರಂಭಿಸುವಲ್ಲಿ ಪೂರ್ಣ ಮಾರ್ಗದರ್ಶನ ನೀಡಿದ ಮುಂಬಯಿಯ ಸ್ಪೆಕ್ಟ್ರಮ್ ಗ್ಲಾಸ್ ಸೊಲ್ಯೂಷನ್ಸ್ ನ ಪಾಲುದಾರರುಗಳಾದ ಶಾಜಿ ಮತ್ತು ಸೋಮನಾಥ ಬಬಲಾದಿ ,ಚೈನಾದ ಶಾಂಘೈ ನಿಂದ ಯಂತ್ರೋಪಕರಣಗಳನ್ನು ಅಳವಡಿಸಲು ಬಂದ ವಾಂಗ್ ,ನೂತನ ಕಟ್ಟಡದ ಇಂಜಿನಿಯರ್ ಕೃಷ್ಣಮೂರ್ತಿ ಭಟ್ , ವಿದ್ಯುತ್ ದೀಪಗಳನ್ನು ಅಳವಡಿಸಿದ ಶಾಂತಾ ಇಲೆಕ್ಟ್ರಿಕಲ್ ಮಾಲಕ ಶ್ರೀಪತಿ ಭಟ್ ಸನ್ಮಾನಿಸಲಾಯಿತು.
ಸಂಸ್ಥೆಯ ಮಾಲಕ ಸುರೇಶ್ ನಾಯ್ಕ್ ತಾಯಿ ಸುಶೀಲಮ್ಮ, ಪತ್ನಿ ಸುಮನಾ ಸುರೇಶ್ ಪುತ್ರ ಧನುಷ, ಪುತ್ರಿ ದಿಶಾ, ವ್ಯವಸ್ಥಾಪಕ ಗೋಪಾಲ್ ಹೇರೂರ್ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು . ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ, ಸಂಸ್ಥೆಯ ಉದ್ಯೋಗಿ ಧನುಷ್ ಧನ್ಯವಾದ ಅರ್ಪಿಸಿದರು.ಉಡುಪಿ ಮಂಗಳೂರಿನ ನೂರಾರು ಉದ್ಯಮಿಗಳು , ಸಿವಿಲ್ ಇಂಜಿನಿಯರ್ ಗಳು ,ಕಾರ್ಯಕ್ರದಲ್ಲಿ ಭಾಗವಹಿಸಿ ಶುಭಕೋರಿದರು.