ಪಡೀಲ್: ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೆ ಸಾವು

ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಪಡೀಲ್ ಬಳಿಯ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.
ಪಡೀಲ್ ನ ಶಿವನಗರದ ನಿವಾಸಿಗಳಾದ ವರ್ಷಿಣಿ (9) , ವೇದಾಂತಿ( 7) ನಾಳೆ ನಡೆಯುವ ಪರೀಕ್ಷೆಗೆ ಓದಲೆಂದು ಮನೆಯ ಹೊರಗೆ ಸಿದ್ದತೆ ನಡೆಸುತ್ತಿರುವಾಗ ರವಿವಾರ 7.35 ರ ಸುಮಾರಿಗೆ ಆವರಣ ಗೋಡೆ ಅವರ ಮೇಲೆ ಕುಸಿದು ಬಿದ್ದಿದೆ. ಮೃತ ಮಕ್ಕಳು ಕಪಿತನಿ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಂಕನಾಡಿ ಪೊಲೀಸರು ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!