ಜೆಸಿಐ ಕಟಪಾಡಿ : ಮೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ

ಜೆಸಿಐ ಕಟಪಾಡಿ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಜರಗಿದ ಜೇಸೀ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಯಾವುದೇ ಮಳೆ ಗಾಳಿಯನ್ನು ಲೆಕ್ಕಿಸದೆ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಗ್ರಾಹಕರಿಗೆ ನಿರಂತರ ವಿದ್ಯುತ್‌ ಪೊರೈಸುತ್ತಿರುವ, ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಮೆಸ್ಕಾಂನ ಕಟಪಾಡಿ ಶಾಖೆಯ ವಿಭಾಗಾಧಿಕಾರಿ ರಾಜೇಶ್ ನಾಯಕ್ ಹಾಗೂ ಸಿಬ್ಬಂದಿಗಳನ್ನು ಜೆಸಿಐನ ವಲಯಾಧ್ಯಕ್ಷ ಅಶೋಕ್ ಚುಂತಾರು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಜೇಸೀ ಸಂಸ್ಥೆಗೆ ನೀಡಿದ ಸೇವೆಗಾಗಿ ಹಾಗೂ ಮೆಡಿಕಲ್ ರೆಪ್ ಆಗಿ ತನ್ನ ವೃತ್ತಿಜೀವನದಲ್ಲಿ ಮಾಡಿದ ಸಾಧನೆಗಾಗಿ ನೀಡುವ ‘ಕಮಲ ಪತ್ರ’ ಪ್ರಶಸ್ತಿಯನ್ನು ಪ್ರವೀಣ್ ಪೂಜಾರಿಯವರಿಗೆ ಜೆಸಿಐ ವಲಯಾಧ್ಯಕ್ಷ ಅಶೋಕ್ ಚುಂತಾರು ನೀಡಿ ಗೌರವಿಸಿದರು.

35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ ಕಟಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿ ದಯಾನಂದ ವಿ ಶೆಟ್ಟಿ ಕಟಪಾಡಿ ಇವರನ್ನು ಜೇಸಿ ವಲಯಾಧ್ಯಕ್ಷ ಅಶೋಕ್ ಚುಂತಾರು ಸನ್ಮಾನಿಸಿದರು.

ಪೂರ್ವ ವಲಯಾದ್ಯಕ್ಷ ಹರಿಶ್ಚಂದ್ರ ಅಮೀನ್, ವಲಯಾಧಿಕಾರಿ ಸುನಿಲ್ ಡಿ ಬಂಗೇರ, ನಿಕಟಪೂರ್ವ ಅಧ್ಯಕ್ಷೆ ಜಯಶ್ರೀ ಕೋಟ್ಯಾನ್ ,ಸಪ್ತಾಹದ ನಿರ್ದೇಶಕ ದಿನೇಶ್, ಮಹೇಶ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಧ್ಯಕ್ಷ ಗಂಗಾಧರ್ ಕಾಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಅಂಬಾಡಿ ವಂದಿಸಿದರು. ಸುಧೀರ್ ಡಿ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!