ಭೀಕರ ಮಳೆ ನಿಲ್ಲುವಂತೆ ನಾಗರಿಕ ಸಮಿತಿಯಿಂದ ನಾಳೆ “ಚಿತ್ರಾನ್ನ ಸೇವೆ” : ಒಳಕಾಡು
ಉಡುಪಿ: ಕೆಲವು ದಿನಗಳಿಂದ ಸುರಿಯುತ್ತಿರುವ ಅತಿವೃಷ್ಠಿಯಿಂದ ಜನ-ಜೀವನ ಅಸ್ತವ್ಯಸ್ಥಗೊಂಡಿದೆ. ಪ್ರಾಕೃತಿಕ ವಿಕೋಪಗಳು ನಡೆದಿವೆ. ಮಳೆ ಸಮತೋಲನ ಸ್ಥಿತಿಗೆ ಬರುವಂತೆ ಪ್ರಾರ್ಥಿಸಿ, ಉಡುಪಿ ರಥಬೀದಿಯ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ಹಿರಿಯರ ಮಾರ್ಗದರ್ಶನದಂತೆ, ವಿಶೇಷವಾಗಿ “ಚಿತ್ರಾನ್ನ ಸೇವೆ”ಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ನಾಳೆ (ಅ.14) ಬುಧವಾರ ಸಂಜೆ 6- 20 ಕ್ಕೆ ಸರಿಯಾಗಿ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ ಎರಡನೇ ವಾರದವರೆಗೂ ಉಡುಪಿ ಯಲ್ಲಿ ಮಳೆ ಬಾರದ ಕಾರಣ ಇದೇ ನಾಗರಿಕ ಸಮಿತಿಯಿಂದ ಕಪ್ಪೆಗೆ ಮದುವೆ ಮಾಡ ಲಾಗಿತ್ತು.