ಉದ್ಯಾವರ : ವನಮಹೋತ್ಸವ ಆಚರಣೆ

ಕಟಪಾಡಿ : ಜೈ ಹಿಂದ್ ಫ್ರೆಂಡ್ಸ್ ಕಡವಿನ ಬಾಗಿಲು ಮತ್ತು ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್ ಇವರ ಜಂಟಿ ಆಶ್ರಯದಲ್ಲಿ,  ಉಡುಪಿಯ ಶ್ರೀ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ನೇತೃತ್ವದ ಆನಂದ ಸಮಿತಿಯು ಉಚಿತವಾಗಿ ನೀಡಿದ ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ನೆಡುವುದರ ಮೂಲಕ ವನಮಹೋತ್ಸವ ಆಚರಿಸಿದರು.

ಕಾಪು ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ರಾಜೇಂದ್ರ ಮಣಿಯಾಣಿ ಗಿಡವನ್ನು ನೆಡುವ ಮೂಲಕ ವನಮಹೋತ್ಸವದ ಉದ್ಘಾಟನೆ ಮಾಡಿ, ಸಂಘಟನೆಗಳ ಪರಿಸರ ಪ್ರೇಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಉಡುಪಿಯ ಶ್ರೀ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ನೇತೃತ್ವದ ಆನಂದ ಸಮಿತಿಯು 125 ವಿವಿಧ ಬಗೆಯ ಗಿಡಗಳನ್ನು ಉಚಿತವಾಗಿ ಸಂಘಟನೆಗಳಿಗೆ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ರಸ್ತೆಯ ಎರಡು ಬದಿಗಳಲ್ಲಿ ಜೈ ಹಿಂದ್ ಫ್ರೆಂಡ್ಸ್ ಕಡವಿನ ಬಾಗಿಲು ಮತ್ತು ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್ ಸದಸ್ಯರು ಗಿಡಗಳನ್ನು ನೀಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಿದರು.

ಕಾರ್ಯಕ್ರಮದ ಸಂಚಾಲಕ ಮೈಕಲ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರೆ, ದಯಾನಂದ ಶೆಟ್ಟಿ ಸ್ವಾಗತಿಸಿದರು. ರೊನಾಲ್ಡ್ ಡಿಸೋಜ ವಂದಿಸಿ, ಹರ್ಷ ಮೈಂದನ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಆನಂದ ಸಮಿತಿಯ ಸದಸ್ಯರಾದ ವಿಷ್ಣುಮೂರ್ತಿ ಭಟ್, ಉದ್ಯಾವರ ಲಯನ್ಸ್ ಕ್ಲಬ್ ಸನ್ಶೈನ್ ಅಧ್ಯಕ್ಷ ಹೆನ್ರಿ ಡಿಸೋಜ, ಕಾರ್ಯದರ್ಶಿ ಜೆರಾಲ್ಡ್ ಪಿರೇರ, ಜೈ ಹಿಂದ್ ಫ್ರೆಂಡ್ಸ್ ಕ್ಲಬ್ ಸಂಚಾಲಕ ರವಿ ಶೆಟ್ಟಿ, ಜಾನ್ ಫರ್ನಾಂಡಿಸ್,ಸಲ್ವಾದೊರ್ ದಾಂತಿ, ಹರೀಶ್ ಪುತ್ರನ್, ಐಶ್ವರ್ಯ ಮಿನೇಜಸ್, ಸುನಿಲ್ ಅನಿಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರಗಳು : ಪ್ರೇಮ್ ಮಿನೇಜಸ್, ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ.

Leave a Reply

Your email address will not be published. Required fields are marked *

error: Content is protected !!