ಕಾರ್ಕಳ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಗೋಪಾಲ ಭಂಡಾರಿಯವರಿಗೆ ಶ್ರದ್ಧಾಂಜಲಿ

ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟನೆ
ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಕ್ಷೇತ್ರದ ಸದಸ್ಯತ್ವ ಅಭಿಯಾನದ ಉದ್ಘಾಟನೆಯನ್ನು ಶಾಸಕರ ಕಛೇರಿ ವಿಕಾಸದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹೂಹಾರ ಹಾಕಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.

ಸಭೆಯ ಪ್ರಾರಂಭದಲ್ಲಿ ಕಾರ್ಕಳದ ಮಾಜಿ ಶಾಸಕರಾದ ಹೆಚ್. ಗೋಪಾಲ ಭಂಡಾರಿಯವರ ಬಗ್ಗೆ ಕ್ಷೇತ್ರಾಧ್ಯಕ್ಷರಾದ ಮಣಿರಾಜ ಶೆಟ್ಟಿ ಮಾತನಾಡಿ ಜಿಲ್ಲೆ ಕಂಡ ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ವ್ಯಕ್ತಿ ರಾಜಕೀಯದಿಂದ ದೂರವಾಗಿರುವುದು ನಮ್ಮೆಲ್ಲರಿಗೂ ದುಖಃ ತಂದಿದೆ ಎಂದರು. ಸಭೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಅಗಲಿದ ಗೋಪಾಲ ಭಂಡಾರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಸ್ತಾವಿಕ ಭಾಷಣದಲ್ಲಿ ಶಾಸಕರಾದ ವಿ. ಸುನಿಲ್ ಕುಮಾರ್ ಸದಸ್ಯತ್ವ ಅಭಿಯಾನವನ್ನು ದೊಡ್ಡ ದೊಡ್ಡ ಪ್ರಮಾಣದಲ್ಲಿ ಮಾಡಬೇಕು. ಸಂಘಟನಾ ಕಾರ್ಯಕ್ಕೆ ಇನ್ನೂ ಹೆಚ್ಚಿನ ಮುತುವರ್ಜಿ ಮಾಡಿದ್ದಲ್ಲಿ ಮುಂದೆ ನಡೆಯುವ ಪಂಚಾಯತ್ ಚುನಾವಣೆಯಲ್ಲಿ ಬೃಹತ್ ಗೆಲುವು ಸಾಧಿಸಬಹುದು ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪಕ್ಷ ಸಂಘಟನೆ ಬಗ್ಗೆ ಅಮಿತ್ ಶಾ ವೈಖರಿಯಿಂದ ದೇಶದೆಲ್ಲೆಡೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾಯಿತು. ವಿಶ್ವದಲ್ಲೇ ಅತೀ ದೊಡ್ಡ ಸದಸ್ಯತ್ವ ಹೊಂದಿರುವ ಕೀರ್ತಿ ಇದ್ದರೆ ಅದು ಭಾರತೀಯ ಜನತಾ ಪಾರ್ಟಿಗೆ ಸಲ್ಲುತ್ತದೆ. ದೇಶದ ರಾಜಕೀಯ ಪಕ್ಷಗಳಲ್ಲಿ ಪ್ರಜಾ ತಂತ್ರವನ್ನು ಕಾಪಾಡಿಕೊಂಡು ಬಂದ ಪಕ್ಷ ಬಿಜೆಪಿ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ ಕಾರ್ಯಕರ್ತರಿಗೆ ಸದಸ್ಯತ್ವ ಅಭಿಯಾನದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್, ದಾಖಲಾತಿ ಪ್ರಮುಖರಾದ ರೇಶ್ಮಾ ಉದಯ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ, ಸದಸ್ಯತ್ವ ಅಭಿಯಾನದ ಕಾರ್ಕಳ ತಾಲೂಕು ಸಂಚಾಲಕರಾಗಿ ಆಯ್ಕೆಯಾದ ನವೀನ್ ನಾಯಕ್ ನಿಟ್ಟೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!