ಪಬ್ಲಿಕ್ ಟೀವಿ ರಂಗಣ್ಣನ ಮಂಗಾಟಕ್ಕೆ ಮೋದಿ ಬ್ರೇಕ್!

(ಎಕ್ಸ್‌ಕ್ಲೂಸಿವ್ ರಿಪೋರ್ಟ್ -ಎಸ್ಸೆನ್ ಕುಂಜಾಲ್)
ಹೌದು; ಗುಟ್ಟು ರಟ್ಟಾಗಿದೆ. ರಾತ್ರಿ ಒಂಭತ್ತು ಗಂಟೆಗೆ ‘ಬಿಗ್ ಬುಲೆಟಿನ್’ ಹೆಸರಿನಲ್ಲಿ ಅಪ್ಪಟ ಸುಳ್ಳು ಸುದ್ದಿಗಳನ್ನೇ ನಿಮ್ಮ ಮುಂದೆ ಬರೋಬ್ಬರಿ ಒಂದು ತಾಸು ಬಡಬಡಿಸುತ್ತಿದ್ದ ‘ಪಬ್ಲಿಕ್ ಟಿವಿ’ಯ ಚಯರ್‌ಮ್ಯಾನ್, ಎಂ.ಡಿ ಆಗಿರುವ ಹೆಚ್.ಆರ್. ರಂಗನಾಥನ ಖಯ್ಯಾಲಿಗಳು ಎಳೆಎಳೆಯಾಗಿ ಬಯಲಾಗತೊಡಗಿವೆ. ಖುದ್ದು ಕೇಂದ್ರ ಸರಕಾರವೇ ರಂಗಣ್ಣನಿಗೆ ಶೋಕಾಸ್ ನೋಟೀಸ್‌ನ್ನೂ ನೀಡಿದೆ. ಗವರ್ನ್‌ಮೆಂಟ್ ಆಫ್ ಇಂಡಿಯಾದ ಮಿನಿಸ್ಟ್ರಿ ಆಫ್ ಇನ್‌ಫಾರ್‍ಮೇಶನ್ ಆಂಡ್ ಬ್ರಾಡ್‌ಕಾಸ್ಟಿಂಗ್ ಅಡಿಶನಲ್ ಡೈರಕ್ಟರ್ ಜನರಲ್‌ರೇ ಉಲ್ಲಂಘನೆಯನ್ನ ಪಟ್ಟಿ ಮಾಡಿ ಶೋಕಾಸನ್ನು ಜ್ಯಾರಿ ಮಾಡಿದ್ದಾರೆ. ಇದರ ಸಾಕ್ಷ್ಯಾಧಾರವನ್ನ ನಿಮ್ಮ ಮುಂದಿಡುತ್ತಾ, ಪಬ್ಲಿಕ್ ರಂಗಣ್ಣ ಮಾಡುತ್ತಿರುವ ನಖರಾಗಳು, ರೋಲ್‌ಕಾಲ್‌ಗಳು, ಬ್ಲಾಕ್‌ಮೇಲ್‌ಗಳು, ಜಾಹೀರಾತಿನ ಹೆಸರಿನಲ್ಲಿ ಸರಕಾರದ ಬೊಕ್ಕಸದಿಂದ ಕೊಳ್ಳೆ ಹೊಡೆಯುತ್ತಿರುವ ಪರಿಯನ್ನು ಯಥಾವತ್ತು ನಿಮ್ಮ ಮುಂದಿಡಲಾಗುತ್ತಿದೆ.

ಕನ್ನಡ ನ್ಯೂಸ್ ಚಾನ್‌ಲ್‌ಗಳಲ್ಲಿ ತನ್ನದೇ ಒಂದು ಸ್ಪೆಶಲ್ ವೆರೈಟಿ ಎಂಬಂತೆ ಬಿಂಬಿಸಿಕೊಂಡು ತಾನು ಮಾಡಿದ್ದೇ ಸರಿ ಎಂಬಂತೆ ಇಮೇಜು ತೊರ್‍ತಿದ್ದ ಹೆಚ್.ಆರ್.ರಂಗನಾಥ್ ಎಂಬ ಪಬ್ಲಿಕ್ ಟಿವಿ ಫೇಕ್ ಸುದ್ದಿಗಳನ್ನೇ ಬಿತ್ತರಿಸುತ್ತಾ, ಆಗಿಂದಾಗ್ಗೆ ಅಂತೆ ಕಂತೆಗಳನ್ನು ಸೃಷ್ಟಿಸಲು ಹೋಗಿ ಇದೀಗ ಕೇಂದ್ರದ ಬಲೆಗೆ ಬಿದ್ದು ವಿಲವಿಲನೆ ಒದ್ದಾಡ್ತಿರುವ ಅಪಾಪೋಲಿ ಪತ್ರಕರ್ತ ಎಂಬುದರಲ್ಲಿ ಎರಡು ಮಾತಿಲ್ಲ. ‘ಬಿಗ್ ಬುಲೆಟಿನ್, ಟಾಪ್ ನ್ಯೂಸ್, ಲೇಟೆಸ್ಟ್ ಬೇಕ್ರಿಂಗ್ ನ್ಯೂಸ್’ ಹೆಸರಿನಲ್ಲಿ ವೀಕ್ಷಕರನ್ನು ಸುಳ್ಳಿನ ಭ್ರಮಾಲೋಕಕ್ಕೆ ಸೆಳೆದೊಯ್ಯುತ್ತಿದ್ದ ರಂಗನಾಥನ ತೆವಲುತನದ ಪೊರೆ ತಾನಾಗಿಯೇ ಕಳಚಿಕೊಳ್ಳ ತೊಡಗಿದೆ.

ಇದು ಬಿಗ್ ಬುಲೆಟಿನ್ನಾ? ಫೇಕ್ ಬುಲೆಟಿನ್ನಾ?

ಮೊನ್ನೆ ಮೊನ್ನೆ ಈ ಮನುಷ್ಯ ಮಾಡಿಕೊಂಡ ದೊಡ್ಡ ಎಡವಟ್ಟೆಂದರೆ ‘ಹೆಲಿಕಾಪ್ಟರ್ ಮನಿ’ ಹೆಸರಿನಲ್ಲಿ. ‘ಪಬ್ಲಿಕ್ ಟಿವಿ’ ಪ್ರಸಾರ ಮಾಡಿದ್ದ ಈ ಸುದ್ದಿ ಸತ್ಯಕ್ಕೆ ದೂರಾದದ್ದು ಅಂತ ಮನಗಂಡಿರುವ ಕೇಂದ್ರ ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ. ‘ಆರ್‌ಬಿಐ ಹೊಸ ನೋಟುಗಳನ್ನು ಮೋದಿ ಸರಕಾರ ಮುದ್ರಿಸುತ್ತಿದೆ. ಅದನ್ನ ಹಳ್ಳಿ ಹಳ್ಳಿಗೆ ಸಾಗಿಸಿ ಮೋದಿ ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕೆಳಗೆ ಎಸೆಯುತ್ತಾರೆ. ಎಂಬುದಾಗಿ ಪಬ್ಲಿಕ್ ಟಿವಿಯಲ್ಲಿ ಬಿತ್ತರಿಸಲಾಗಿರುವುದನ್ನ ನೀವೆಲ್ಲಾ ನೋಡಿರುತ್ತಿರಾ. ಇಂಥದ್ದೊಂದು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಬಡ ಜನರಲ್ಲಿ ಹರ್ಷ ಮುಗಿಲು ಮುಟ್ಟಿತ್ತು. ಆಟೋ-ಕಾರು ಡ್ರೈವರುಗಳು, ರಸ್ತೆ ಬದಿ ವ್ಯಾಪಾರಿಗಳು, ಅಲೆಮಾರಿಗಳು, ಅಸಂಘಟಿತ, ಕಾರ್ಮಿಕರು ಜೇಬಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತುರುಕಿಸಿಟ್ಟುಕೊಂಡು ಹೆಲಿಕಾಫ್ಟರ್ ಅದ್ಯಾವಾಗ ಬರುತ್ತೆ ಅಂತ ಆಗಸದತ್ತ ಕತ್ತೆತ್ತಿ ನೋಡತೊಡಗಿದರು. ನಿಜ ಹೇಳಬೇಕೆಂದರೆ, ಇಟ್ಸ್ ಆಲ್ ಫೇಕ್! ಕೊರೋನಾದಿಂದ ಮನೇಲಿ ಹಾಗೇ ಬಿದ್ಕೊಂಡಿರುವ ಜನರು ತನ್ನ ಚಾನಲನ್ನೇ ನೋಡುವಂತೆ ಮಾಡಿದ ಗಿಮಿಕ್ ಇದಾಗಿತ್ತು. ತನ್ಮೂಲಕ ಟಿ.ಆರ್.ಪಿ ರೇಟನ್ನು ಮತ್ತಷ್ಟು ಎತ್ತರಕ್ಕೇರಿಸಲು ಹೆಣಿದ ತಂತ್ರಗಾರಿಕೆ. ರಂಗಣ್ಣನ ಈ ಕುತಂತ್ರವೇ ಭಾರತ ಸರಕಾರದ ಕೆಂಗಣ್ಣಿಗೆ ಗುರಿಯಾದದ್ದಂತೂ ಸುಳ್ಳಲ್ಲ.

ಎರಡು ಸಾವಿರ ನೋಟಿನ ‘ಚಿಪ್’ ಕಥೆ ನೀವ್ ಕೇಳಿದ್ದೀರಾ?

ಈ ಮನುಷ್ಯನ ‘ಫೇಕ್ ನ್ಯೂಸ್’ ಇದೊಂದೇ ಅಲ್ಲ; ದಿನನಿತ್ಯವೂ ಒಂದಲ್ಲಾ ಒಂದು ಸುಳ್ಳು ಸುದ್ದಿಗಳನ್ನ ಪ್ರದರ್ಶಿಸದಿದ್ದರೆ ರಂಗಣ್ಣನಿಗೆ ನಿದ್ದೆಯೇ ಬರುದಿಲ್ವಂತೆ! ಸುಳ್ಳಿನ ಸರದಾರನಾಗಿರುವ ಇವನ ಹೀನ ಚರಿತ್ರೆ ಇಲ್ಲಿದೆ ನೋಡಿ; ಹಿಂದೊಮ್ಮೆ ನೋಟು ಅಮಾನೀಕರಣವಾದಾಗ ಎರಡು ಸಾವಿರ ನೋಟಿನಲ್ಲಿ ‘ಚಿಪ್’ ಇದೆ. ಆದರಿಂದಾಗಿ ಈ ನೋಟು ಅದೆಲ್ಲೇ ಇಟ್ಟರೂ, ಮಣ್ಣಲ್ಲಿ ಹೂತಿಟ್ಟರೂ, ಬ್ಯಾಂಕ್ ಲಾಕರಲ್ಲಿಟ್ಟರೂ ಪತ್ತೆ ಹಚ್ಚಲು ‘ಚಿಪ್’ ಸಹಾಯಕಾರಿಯಾಗುತ್ತೆ ಅಂತ ಬಡಾಯಿ ಕೊಚ್ಚಿದ್ದ, ಈ ಬುರುಡೆ  ದಾಸ. ಮೊನ್ನೆ ಮೊನ್ನೆ ಮಾರ್ಚ್ ಕೊನೆಯ ವಾರದಲ್ಲಿ ಎರಡು ಸಾವಿರ ನೋಟುಗಳನ್ನು ಮೋದಿ ಬ್ಯಾನ್ ಮಾಡ್ತಿದ್ದಾರೆ ಅಂತ ಢಂಗುರ ಬಾರಿಸಿದ. ಅದೆಲ್ಲಿಯಾ ಬೆಂಗಳೂರಿನ ಒಂದಿಷ್ಟು ಎಟಿಎಂ ಸೆಂಟರುಗಳಿಗೆ ತೆರಳಿ ಅಲ್ಲೆಲ್ಲೂ ಎರಡು ಸಾವಿರದ ನೋಟು ಇಲ್ಲವೇ ಎಂಬುದಾಗಿ ಲೈವ್ ತೋರಿಸಿದ. ಅಷ್ಟು ಮಾತ್ರವಲ್ಲದೇ ಎಪ್ರಿಲ್ ಒಂದನೇ ತಾರೀಕಿನಿಂದ ಈ ನೋಟು ಬ್ಯಾನ್ ಅಂತ ಮೋದಿ ಅನೌನ್ಸ್ ಮಾಡ್ತಾರೆ ಅಂತ ಬ್ರೇಕಿಂಗ್ ನ್ಯೂಸ್ ಪಬ್ಲಿಶ್ ಮಾಡಿದ್ದ. ‘ಪಬ್ಲಿಕ್ ರಂಗಣ್ಣ’ನ ಸುಳ್ಳುತನ ಇದೀಗ ಬಯಲಾಗಿದೆ.

ರಾಧಾ ಎಂಬ ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ!

ಈ ಗೋಮುಖವ್ಯಾಘ್ರನ ಇಂಥ ಸುಳ್ಳಿನ ಸರಮಾಲೆಗಳನ್ನ ಲೆಕ್ಕಹಾಕಿ ಹೇಳುವುದಾದರೆ, ಇದರ ಹಿಂದಿರುವ ಬೃಹತ್ ಅಮೌಂಟಿನ ಕರಾಳತೆ ಕಣ್ಣೆದುರು ಬರುತ್ತದೆ. ಅದೆಲ್ಲಿಯಾದರೂ ಹಣ ಸಿಗುತ್ತದೆ ಎಂದಾದರೆ ಮರುಕ್ಷಣವೇ ‘ರಂಗಣ್ಣ’ನ ಕುರುಚಲು ಗಡ್ಡ ನಿಮಿರಾಗುತ್ತದೆ. ಕೈಲಿದ್ದ ಪೆನ್ನು ಎಲ್ಲೆಲ್ಲೋ ಹರಿದಾಡುತ್ತದೆ. ತನ್ಮೂಲಕ ಕೋಟ್ಯಂತರ ಕೊಳ್ಳೆಗೆ ರೆಡಿಯಾಗ್ತಾನೆ, ಪಬ್ಲಿಕ್ ರಂಗ! ಈತನ ಕೊಳಕು ಬಾಯಿಯಿಂದ ಹೊರಬೀಳುವ ದುರ್ನಾತದ ಮಾತುಗಳಿಗೆ ಒಗ್ಗಲಾಗದ ರಾಧಾ ಹಿರೇಗೌಡರ್ ಎಂಬಾಕೆ ಈ ಮನುಷ್ಯನ ದುಸ್ಸಾಹಸಕ್ಕೆ ಗುಡ್ ಬೈ ಹೇಳಿ ‘ಬಿ ಟೀವಿ’ ಛಾನಲ್ಲಿನಲ್ಲಿ ಮುಖ್ಯಸ್ಥೆಯಾಗಿ ಮೇರುಸ್ಥಾನದಲ್ಲಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ರಾಧಕ್ಕ ಇದ್ದಷ್ಟು ದಿನ ರಂಗಣ್ಣನ ಬಿಗ್ ಬುಲೆಟಿನ್‌ನ ರೋಚಕತೆ, ಸಲ್ಲಾಪ ಸವಿಯಲು ಪಬ್ಲಿಕ್ ಛಾನಲ್ಲಿನ ಮುಂದೆ ಜನ ಮುಗಿಬೀಳುತ್ತಿದ್ದರು. ಇದೊಂದು ಆಗಿನ ದುರಂತ ಕಥೆಯಾ? ದಂತ ಕಥೆಯಾ? ಗೊತ್ತಿಲ್ಲ.

ಹೇಮಂತ್ ಕಶ್ಯಪ್ ಜೈಲು ಸೇರಿದ್ದು ಯಾಕೆ ಗೊತ್ತಾ?

ತನ್ನ ವಾಹಿನಿ ಪರಿಶುದ್ಧವಾದುದು, ಭ್ರಷ್ಟ ರಹಿತವಾದದ್ದು, ಯಾರ ಬಳಿಯೂ ಕೈಚಾಚದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಾಹಿನಿ ಎಂಬ ಬುರುಡೆ ಬಿಡುತ್ತಲೇ ಕೋಟಿ ಕೋಟಿ ಡೀಲ್‌ಗೆ ಕೈ ಚಾಚಿದ ಪ್ರಕರಣಗಳು ಸಾಕಷ್ಟು ಇದ್ದಾವೆ. ಅಷ್ಟೇ ಯಾಕೆ? ಇತನ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಕಶ್ಯಪ್ ಎಂಬಾಂತ ವೈದ್ಯ ರಮಣ ರೆಡ್ಡಿ ಅವರನ್ನು ಬ್ಲಾಕ್ ಮೇಲ್ ಮಾಡಲು ಹೋಗಿ ಸರಿಯಾಗಿ ತಾಗಲಾಕಿಕೊಂಡಿದ್ದ. ಈ ಪ್ರಕರಣದಲ್ಲಿ ಹೇಮಂತ್ ಕಶ್ಯಪ್ ಜೈಲಿಗೆ ಹೋಗಿದ್ದ. ಇದರಲ್ಲಿ ಈ ರಂಗಣ್ಣನ ಮಾನ ಮೂರು ಕಾಸಿಗೆ ಹರಾಜಾಗಿ ಹೋಯಿತ್ತು. ಇಂಥದ್ದೇ ಹಲವಾರು ಪ್ರಕರಣಗಳು ಆಗಿಂದಾಗ್ಗೆ ನಡಯುತ್ತಲೇ ಇರ್‍ತಾವೆ.

ಸುವರ್ಣ ಚಾನೆಲ್ಲಿಂದ ಓಡಿಸಿದ್ಯಾಕೆ ಗೊತ್ತಾ?

ಅದೆಲ್ಲಾ ಹಾಗಿರಲಿ; ತಾನು ಹತ್ತಿ ಬಂದ ಏಣಿಯನ್ನ ಮರೆತುಬಿಡುವ ಮಿತ್ರದೋಹಿ ಈ ರಂಗಣ್ಣ. ಆವತ್ತು ಸುವರ್ಣ ವಾಹಿನಿಯ ಚರ್ಚಾಗೋಷ್ಠಿಯಲ್ಲಿ ಬುರುಡೆ ರಂಗಣ್ಣನನ್ನ ಪಾಲ್ಗೊಳ್ಳುವಂತೆ ಮಾಡಿ ಅಲ್ಲೇ ನೇಮಕವಾಗುವಂತೆ ಮಾಡಿದವರೇ ಶಶಿಧರ ಭಟ್. ದುರಂತ ಎಂದರೆ ಯಾರು ಈತನ ಮುಖವನ್ನು ನಾಡಿನ ಜನತೆ ನೋಡುವಂತೆ ಮಾಡಿದ್ದರೋ ಅವರನ್ನೇ ತನ್ನ ಸ್ವಾರ್ಥಕ್ಕಾಗಿ ವಾಹಿನಿಯಿಂದ ಕಿತ್ತು ಹೊರಹಾಕುತ್ತಾನೆ. ಕಾಲಚಕ್ರ ಉರುಳ ಬೇಕಲ್ಲವೇ? ಇವನೊಬ್ಬ ಬರೀ ಮಾತುಗಾರ ಎಂಬುದನ್ನರಿತ ಸುವರ್ಣ ವಾಹಿನಿಯವರು ಆ ಕಾಲದಲ್ಲಿಯೇ ಈತನನ್ನು ಕಿತ್ತು ಹೊರಹಾಕುತ್ತಾರೆ.

ಕುಮಾರಸ್ವಾಮಿ ಕೊಟ್ರಂತೆ ಕೋಟಿ ಕೋಟಿ ದುಡ್ಡು!

ಅಷ್ಟೊತ್ತಿಗಾಗಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಖ್ಯ ಬೆಳೆಸಿಕೊಂಡಿದ್ದ ಈ ಮಹಾನುಭಾವ ಅವರ ನೆರವು ಮತ್ತಷ್ಟು ರಾಜಕಾರಣಿಗಳ ನೆರವಿನಿಂದ ತನ್ನದೇ ಒಂದು ಕೋಟಿ ಸೃಷ್ಟಿಸಿಕೊಳ್ಳುತ್ತಾನೆ. ಅದುವೇ ಪಬ್ಲಿಕ್ ಟಿವಿ. ಇದರಲ್ಲಿ ಸುದ್ದಿಯನ್ನು ಸುದ್ದಿ ರೀತಿಯಲ್ಲಿ ಹೇಳದೇ ತನ್ನ ಉಪ ಕಥೆ ಉಪ್ಪು ಖಾರ ಎಲ್ಲಾ ಬೆರೆಸಿ ನ್ಯೂಸ್ ಜೊತೆ ವ್ಯೂಸ್ ಬೆರೆಸಿ ಇಡೀ ಪತ್ರಿಕಾ ರಂಗವನ್ನೇ ದಿಕ್ಕು ತಪ್ಪಿಸುತ್ತಾನೆ, ಈ ನಿಸ್ಸೀಮ ರಂಗಣ್ಣ.

ಪೊಲೀಸರ ಕೈಗೆ ಸಿಕ್ರೆ 2 ವರ್ಷ ಜೈಲು ಗ್ಯಾರಂಟಿ!

ಪಬ್ಲಿಕ್ ಟೀವಿ ರಂಗಣ್ಣನಿಗೆ ಹೊಸ ಗೆಟಪ್ಪು ಸಿಕ್ಕಿದ್ದೇ ಕೊರೋನಾದ ಲಾಕ್‌ಡೌನ್‌ನಿಂದ. ಈ ಟೈಮ್‌ಲ್ಲಿ ಯಾರೂ ಮನೆಯಿಂದ ಹೊರಗೋಗುವಂತಿಲ್ಲ ಅಂತ ಮನೆಯಲ್ಲೇ ಟೀವಿ ವಾಚ್ ಮಾಡ್ತಾ ಇರ್‍ತಾರೆ ಅಂತ ತಿಳ್ಕೊಂಡಿದ್ದ ಈ ಬುರುಡೆ ದಾಸ ಸುಳ್ಳಿನ ಸರಮಾಲೆಯನ್ನೇ ಪ್ರದರ್ಶಿಸ್ತಾನೆ. ‘ನೀವು ಮನೆಯಿಂದ ಹೊರಗೆ ಬಂದರೆ ಕೊರೋನಾ ಗ್ಯಾರಂಟಿ! ಪೋಲಿಸರ ಕೈಗೆ ಸಿಕ್ಕರೆ ಎರಡು ವರ್ಷ ಜೈಲು ಗ್ಯಾರಂಟಿ! ಡ್ರೋನ್ ಬಂದು ರೋಡಲ್ಲಿದ್ದವರನ್ನು ರೆಕಾರ್ಡ್ ಮಾಡುತ್ತೆ’ ಅಂತ ಬಿಗ್ ಬುಲೆಟಿನ್‌ನಲ್ಲಿ ಬುಲೆಟ್ ಬಿಡುವ ಈ ಪ್ರಾವೀಣ್ಯ ಪಿಂಡ ಮನುಷ್ಯನಿಗೆ ರೈತರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಕೃಷಿ ಬೆಳೆ ನಾಶದ ಬಗ್ಗೆ ಗೊಡವೆಯೇ ಇಲ್ಲ. ಜನಸಾಮಾನ್ಯರ ಹಸಿವಿನ ಅರಿವಿಲ್ಲ. ಮುಗ್ಧ, ಬಡ, ದಿನಗೂಲಿ ಜನರಿಗೆ ಏನ್ ಮಾಡಬೇಕೆಂಬ ಕಳಕಳಿಯಿಲ್ಲ. ಜನರಿಗೆ ಸರಕಾರೀ ಸವಲತ್ತು ಕೊಡಿಸಲು ಟೀವಿ ಮಧ್ಯವರ್ತಿಯಂತೆ ಸಹಕರಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲ.

ಹಣ ಬಂದರೆ ಸ್ಪೆಡರ್ ಮ್ಯಾನ್; ಇಲ್ಲಾಂದ್ರೆ ಮುದುಕಪ್ಪ!

ಈ ರೀಲುದಾರ ಕಾಯುತ್ತಿರುವುದು ಕಾಂಟ್ರವರ್ಸಿಗಳಿಗೆ. ಒಂದು ದಿನ ಸಚಿವನನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಾನೆ. ಅವನಿಂದ ಹಣ ಬರದಿದ್ದರೆ ಒಂದೆರಡು ದಿನ ಬಿಟ್ಟು ‘ನಾಲಾಯಕ್ ಮಿನಿಸ್ಟರ್’ ಅಂತ ಕ್ಯಾಕರಿಸಿ ಉಗೀತಾನೆ. ಈ ಪಬ್ಲಿಕ್ ವಾಹಿನಿಯಲ್ಲಿ ಬಂದು ಕೂರುವವರೆಲ್ಲಾ ‘ಪೇಯ್ಡ್’ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಜ್ಯೋತಿಷ್ಯರು. ಹೌದು ಪಾಪ; ಈ ಬಡವನ ರಂಗೀಲಾರೆ ಈ ಹಣದಲ್ಲೇ ಸಾಗಬೇಕಲ್ಲವೇ? ಸರಕಾರದಿಂದ ಎಡ್ವರ್ಟೆಸ್‌ಮೆಂಟಿನ ಹಣ ಬಂದರೆ ಯಡಿಯೂರಪ್ಪನನ್ನ ಸ್ಪೆಡರ್‌ಮ್ಯಾನ್‌ಗೆ ಹೋಲಿಸ್ತಾನೆ. ಇಲ್ಲವಾದಲ್ಲಿ ‘ತಲೆಮಾಸಿದ ಮುದುಕಪ್ಪ’ ಅಂತ ಹಳೀತಾನೆ. ವಾಟ್ ಎ ಅಮೇಜಿಂಗ್!

ಲಾಸ್ಟ್ ಸಿಪ್!

ಈ ಪಬ್ಲಿಕ್ ರಂಗಣ್ಣನ ಬಗ್ಗೆ ಬರೆಯುತ್ತಾ ಹೋದರೆ, ಹಿಮಾಲಯದಷ್ಟೆತ್ತರದ ಕೊಳಕುಗಳಿದ್ದಾವೆ. ಅಗಾಧ ಬ್ಲಾಕ್‌ಮೇಲ್ ಪ್ರಕರಣಗಳಿವೆ. ಅಸಂಖ್ಯ ಹಣಗಳಿಸುವ ತಂತ್ರಗಾರಿಕೆಗಳಿದ್ದಾವೆ. ನಿಮಗೂ ಇಂಥ ಅನುಭವಗಳಾಗಿರಬಹುದು. ಸಣ್ಣದೊಂದು ಮಾಹಿತಿಯನ್ನ ಈ ಪುಟದ ಕೊನೆಯಲ್ಲಿರುವ ಈ-ಮೇಲ್‌ಗೆ ಕಳುಹಿಸಿ. ಅವೆಲ್ಲವನ್ನ ಅಕ್ಷರಶ: ಪ್ರಕಟಿಸುವುದರ ಜತೆಗೆ ತನಿಖೆಗೂ ಒಳಪಡಿಸುವುದರಲ್ಲಿ ಸಂದೇಹಗಳೇ ಇಲ್ಲ. ಈ ಮನುಷ್ಯನ ಇನ್ನಿತರ ಕಪಿಚೇಷ್ಠೆಗಳನ್ನು ಮುಂದೆಂದಾದರೂ ಸಾಧ್ಯಂತವಾಗಿ ಬರೆಯುತ್ತೇನೆ.
                                                   -ಎಸ್ಸೆನ್ ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ [email protected] ಗೆ ಕಳುಹಿಸಬಹುದು.

2 thoughts on “ಪಬ್ಲಿಕ್ ಟೀವಿ ರಂಗಣ್ಣನ ಮಂಗಾಟಕ್ಕೆ ಮೋದಿ ಬ್ರೇಕ್!

  1. ಸುವರ್ಣನ್ಯೂಸ್ ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರಲ್ಲಿ ನಾನೂ ಒಬ್ಬ.ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸುವರ್ಣವಾಹಿನಿಯನ್ನ ನಾಡಿನ ಪ್ರಜ್ಞಾವಂತ ವೀಕ್ಷಕರಿಗೆ ತಲುಪಿಸುವಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಟ್ಟರನ್ನ ಆ ಹುದ್ದೆಯಿಂದಲೇ ತೆಗೆಯುವಂತೆ ಮಾಡಿ ಅದೇ ಜಾಗದಲ್ಲಿ ವಕ್ಕರಿಸಿದ ಎಲ್ಲ ಬೆಳವಣಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವವರ ಪೈಕಿ ನಾನೂ ಇದ್ದೇನೆ. ನೀವು ಈ ವರದಿಯಲ್ಲಿ ಉಲ್ಲೇಖಿಸಿರುವ ಎಲ್ಲವೂ ಸತ್ಯವಾದವು.ಹಣ ಮಾಡುವ ಏಕೈಕ ಉದ್ದೇಶದಿಂದಲೇ ಪತ್ರಕರ್ತನ ಪೋಸಾಕು ಧರಿಸಿ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಗೋಮುಖವ್ಯಾಘ್ರ ಈ ಪಬ್ಲಿಕ್ ಟಾಯ್ಲಟ್ ನ ರಂಗ.ಈವರೆಗೆ ಈತ ಕೆಲಸ ಮಾಡಿರುವೆಡೆಗಳಲ್ಲೆಲ್ಲ ಮಾಡಬಾರದ್ದನ್ನೆಲ್ಲ ಮಾಡಿ, ಸಹೋದ್ಯೋಗಿಗಳ ಜೀವ ಹಿಂಡಿ,ಅದರಲ್ಲೂ ಬ್ರಾಹ್ಮಣೇತರ ಪತ್ರಕರ್ತರನ್ನ ಅಕ್ಷರಶಃ ಶೋಷಿಸಿ ಮಹಿಳಾ ಸಿಬ್ಬಂದಿಗಳನ್ನ ಲೈಂಗಿಕವಾಗಿ ಶೋಷಿಸಿ ರಾಜಕಾರಣಿಗಳು,ಉದ್ಯಮಿಗಳು ಹಾಗೂ ಅಧಿಕಾರಿಗಳನ್ನ ಬ್ಲಾಕ್ಮೇಲ್ ಮಾಡಿಕೊಂಡೇ ನೂರಾರು ಕೋಟಿ ಆಸ್ತಿ ಸಂಪಾದಿಸಿರುವ ಈ ಮಾನಗೇಡಿ ಲೂಟಿಕೋರನಿಗೆ ಸಮಾಜದಲ್ಲಿ ಮಾತನಾಡಲಿಕ್ಕೆ ಯಾವ ನೈತಿಕತೆಯೂ ಉಳಿದಿಲ್ಲ.ಈ ಭ್ರಷ್ಟ ಹಾಗೂ ಸಮಾಜಕಂಠಕ,ಮನುವಾದಿ, ಕೋಮುವಾದಿ,ಭಯೋತ್ಪಾದಕ,ವಿಕೃತ,ವಿಲಕ್ಷಣ ಮನಸ್ಥಿತಿಯ ಮನೋರೋಗಿ ಕಂ ಬೀದಿಬದಿಯ ಹುಚ್ಚುನಾಯಿಗೆ ಸಾರ್ವಜನಿಕರು ನಡುಬೀದಿಯಲ್ಲಿ ಅಟ್ಟಾಡಿಸಿಕೊಂಡು ಚಚ್ಚುವ ದಿನಗಳು ಬಂದೇ ಬರುತ್ತವೆ.ಈ ನಿಟ್ಟಿನಲ್ಲಿ ನಾಡಿನಾದ್ಯಂತ ಒಂದು ಪ್ರಜ್ಞಾವಂತರ ಪಡೆ ಸನ್ನದ್ಧಗೊಳ್ಳುತ್ತಿದೆ.ಈತ ಈವರೆಗೆ ಪತ್ರಕರ್ತನ ಸೋಗಿನಲ್ಲಿ‌ ಗಳಿಸಿರುವ ಅಕ್ರಮ ಸಂಪತ್ತು, ಅಕ್ರಮ ಚಟುವಟಿಕೆ ಹಾಗೂ ಬ್ಲಾಕ್ ಮೇಲ್,ಭ್ರಷ್ಟಾಚಾರ, ಪತ್ರಿಕೋದ್ಯಮ ನಿಯಮಗಳ ಉಲ್ಲಂಘನೆ ಸೇರಿದಂತೆ ಎಲ್ಲವೂ ನಿಷ್ಪಕ್ಷಪಾತ ತನಿಖೆಗೆ ಒಳಪಡಬೇಕು
    ಸಮಾಜದ ಪ್ರಜ್ಞಾವಂತ ಜನಸಮೂಹ ಕೂಡ ಈತನ ಚಾನಲ್ಲನ್ನ‌ ಬಹಿಷ್ಕರಿಸಿ ಖಾಯಂ ಆಗಿ ಜೈಲಿಗೆ ಸೇರಿಸುವ ಕೆಲಸಗಳಾದಾಗ ಈತನ ಕಾರಣದಿಂದ ಅನ್ಯಾಯಕ್ಕೊಳಗಾಗಿರುವ ಅದೆಷ್ಟೋ ಜನ ನೆಮ್ಮದಿಯಿಂದ ಉಸಿರಾಡುವಂತಾಗುತ್ತದೆ.ಈ ಪಾಪಿಯ ವಿರುದ್ಧದ ಎಲ್ಲ‌ಹೋರಾಟಗಳಿಗೆ ನನ್ನಂತಹ ಸಹಸ್ರಾರು ಮಂದಿ ಪ್ರಜ್ಞಾವಂತರ ಪಡೆ ನಿಮ್ಮ‌ಜೊತೆಗಿದೆ.ಶುಭವಾಗಲಿ ನಿಮ್ಮೀ ಪ್ರಯತ್ನಕ್ಕೆ.
    ನನ್ನ ಹೆಸರನ್ನು ಪ್ರಕಟಿಸಿದರೂ ಯಾವ ಕೇರೂ ಮಾಡುವುದಿಲ್ಲ.ಆತ ನನ್ನ ಒಂದು ಕೂದಲನ್ನೂ ಕೀಳಲಾರ!
    ವಂದನೆಗಳೊಂದಿಗೆ,
    ತಮ್ಮ ವಿಶ್ವಾಸಿ,
    ತಿರುಮಲಾಪುರಕೆ.ಗೋಪಾಲ್
    ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ
    ಮಂಡ್ಯ
    ದೂರವಾಣಿ:9620517434
    email: tkgopal1975 @gmail.com

Leave a Reply

Your email address will not be published. Required fields are marked *

error: Content is protected !!