ಟೊಂಕ ಕಟ್ಟಿ ನಿಂತ ಆರೆಸ್ಸೆಸ್‌ಗೇ ನೋ ಪಾಸ್

(ಸ್ಪೆಶಲ್ ರಿಪೋರ್ಟ್ -ಎಸ್ಸೆನ್ ಕುಂಜಾಲ್)
ಇವರು ಎಲ್ಲೆಲ್ಲೂ ಇರ್‍ತಾರೆ. ಪ್ರತೀ ಊರಲ್ಲಿದ್ದಾರೆ. ಹಳ್ಳಿ-ಹಳ್ಳೀಲೂ ಇದ್ದಾರೆ. ಎಲ್ಲಾ ಅಪಾರ್ಟ್‌ಮೆಂಟಲ್ಲೂ ಇದ್ದಾರೆನ್ನುವುದರಲ್ಲಿ ಸಂದೇಹಗಳೇ ಇಲ್ಲ. ಲೇಜೌಟ್‌ಗಳಲ್ಲಂತೂ ಗುಪ್ತಗಾಮಿನಿಯಂತೆ ಇದ್ದೇ ಇರ್‍ತಾರೆ. ವಿನೂತನ ಶೈಲಿಯ ‘ವಿಲ್ಲಾ’ಗಳಲ್ಲೂ ‘ಇಲ್ಲಾ’ ಅನ್ನಲು ಸಾಧ್ಯವೇ ಇಲ್ಲ. ಹಾಗೇ ಬನ್ನೀ; ದೂರ ಯಾಕೆ ಹೋಗಿ ನೋಡ್ತೀರಾ? ನಿಮ್ಮ ವಾರ್ಡಲ್ಲಿ, ಕೇರಿಯಲ್ಲಿ, ವಿಲೇಜಲ್ಲಿ, ಪಂಚಾಯ್ತಿಯಲ್ಲಿ, ಪುರಸಭೇಲಿ, ಮುನ್ಸಿಪಾಲ್ಟೀಲಿ, ಮಹಾನಗರ ಪಾಲಿಕೇಲಿ ಅಲ್ಲಲ್ಲಿ ಓಡಾಡಿಕೊಂಡಿರ್‍ತಾರೆ ಬೂತ್ ಲೆವೆಲ್ಲಲ್ಲೂ ಒಂದಿಷ್ಟು ಪರ್ಸಂಟೇಜ್ ಇದ್ದೇ ಇರ್‍ತಾರೆ. ಅಷ್ಟೆಲ್ಲಾ ದೂರ ಯಾಕೆ ಹೋಗ್ತೀರಾ? ನಿಮ್ಮನೆ ಆಚೆ-ಈಚೆ ಕಣ್ಣು ಹಾಯಿಸಿ ನೋಡಿ; ಪಕ್ಕದ್ಮನೆಯಲ್ಲೇ ಅವರಿರ್‍ತಾರೆ. ಅದೂ ಆಪ್ತ ರಕ್ಷಕರಂತೆ. ಆಪದ್ಭಾಂದವರಂತೆ. ಅಸಹಾಯಕನಿಗೆ ಕೈಹಿಡಿದು ಮೇಲೆಬ್ಬಿಸಲು. ಕೈಲಾಗವನಿಗೆ ಸಹಕರಿಸಲು! ಇಂಥವರ ಸದ್ಬಳಕೆ ಕೊರೋನಾ ಟೈಮಲ್ಲಿ ಮಾಡಿಕೊಳ್ಳಬೇಕಿದೆ ಎಂಬುದೇ ಈ ವರದಿಯ ಸದಾಶಯ.

ಇಷ್ಟಕ್ಕೂ ಇದ್ಯಾರಿರಬಹುದು? ನಿಮಗೆ ಮಾಡುವ ಉಪಕಾರಕ್ಕೆ ಫಲಾಪೇಕ್ಷೆ ಉಹುಂ; ಬೇಡವೇ ಬೇಡ ಅಂತಾರೆ. ‘ಇದು ನಮ್ಮ ಡ್ಯೂಟಿ’ ಎಂಬುದೇ ಇವರ ಬಾಯಲ್ಲಿ ಉಸುರುವ ಮಾತು. ಎಲ್ಲವೂ ನಿಸ್ವಾರ್ಥ; ಆಕಾಂಕ್ಷೆ ರಹಿತ! ಕರೆದರೆ ಓಡಿ ಬರ್‍ತಾರೆ. ಏನಾಗ ಬೇಕು ಅದನ್ನು ಮಾಡ್ತಾರೆ. ಇವರಿಗೆ ಪ್ರಚಾರ ಬೇಕಿಲ್ಲ. ಪತ್ರಿಕೇಲಿ ಪಬ್ಲಿಸಿಟಿ ಮಾಡಬೇಕಂತಿಲ್ಲ. ಇವರು ‘ಪೇಪರ್ ಟೈಗರ್’ ಅಲ್ಲವೇ ಅಲ್ಲ. ಟೀವಿ ಮುಂದೆ ಬಂದು ಕೂರಲಾರರು. ಸ್ಕ್ರೀನ್ ಮುಂದೆ ಬಂದು ನಿಮ್ಮ ಸಾಧನೆ ಹೇಳಿಕೊಳ್ಳಿ ಅಂದರೆ ನಯವಾಗಿ ನಕ್ಕು ಸುಮ್ಮನಾಗ್ತಾರೆ. ‘ಆಯ್ತಣ್ಣಾ..ಆಯ್ತಕ್ಕಾ..’ ಅಂತ ಹೇಳಿ ಅವರನ್ನ ಕಳಿಸ್ತಾರೆಯೇ ವಿನಹ ಪಬ್ಲಿಸಿಟಿಗಂತೂ ಸಿಗಲಾರರು. ಸನ್ಮಾನ ಮಾಡ್ತೀವಿ, ಚೀಫ್ ಗೆಸ್ಟ್ ಅಂತ ಇನ್ವೀಟೇಶನ್ನಲ್ಲಿ ಹಾಕ್ತೀವಿ ಅಂದ್ರೆ ಬಿಲ್‌ಕುಲ್ ಒಪ್ಪಲಾರರು.

ಗಗನ ತುಂಬಾ ನಕ್ಷತ್ರ ರಾಶಿಯಂತೇ….


ನಿಮಗೊಂದು ರಿಯಾಲಿಟಿಯನ್ನ ಹೇಳಲೇಬೇಕಾಗಿದೆ. ನಮ್ಮ ಇಂಡಿಯಾದಲ್ಲಿ ಇರುವ ಟೋಟಲ್ ಮಿಲಿಟರಿ ಪಡೆ, ಪೋಲಿಸ್ ಫೋರ್ಸ್‌ಕ್ಕಿಂತ ಹೆಚ್ಚಿದೆ ಇವರ ಸಂಖ್ಯೆ ಅಂದರೆ ನೀವ್ ನಂಬ್ತೀರಾ? ಹೈಲೀ ಇಂಪಾಸಿಬಲ್! ಇವರನ್ನ ಕೌಂಟ್ ಮಾಡಲು ಮುಂದಾಗ್ತೀರಾ? ನಿಮ್ಮಂಥ ಶತಮೂರ್ಖ ಇನ್ನೊಬ್ಬನಿರಲಾರ. ಅಲ್ಲಿ ಎತ್ತರದ ಆಕಾಶದಲ್ಲಿರುವ ನಕ್ಷತ್ರ ಲೆಕ್ಕ ಮಾಡಿದಂತೆಯೇ!. ಅವರನ್ನ ಲೆಕ್ಕ ಹಾಕುವಂಥ ಕ್ಯಾಲ್‌ಕುಲೇಟರೇ ಇಲ್ಲ ಅಂದರೂ ಅಚ್ಚರಿಪಡಬೇಕಾದ್ದೇನಿಲ್ಲ. ಹಾಗಾದರೆ ಇವರ್‍ಯಾರು ಅಂದುಕೊಂಡಿದ್ದೀರಾ? ಇವರೆಲ್ಲಿ ಇರ್‍ತಾರೆ? ಇವರನ್ನ ಕಾಂಟಾಕ್ಟ್ ಮಾಡುವುದಾದರೂ ಹೇಗೆ? ಆಪ್ರೋಚ್ ಮಾಡುವುದಾದರೂ ಯಾವ ರೀತಿಯಲ್ಲಿ? ಎಂಬ ಪ್ರಶ್ನೆಗೆ ಉತ್ತರದಂತೂ ತೀರಾ ನಿಗೂಢ.

ನಮಸ್ತೇ ಸದಾ ವತ್ಸಲೇ ಮಾತು ಭೂಮೇ..ತ್ವಯಾ ಹಿಂದು ಭೂಮೇ.

ಗುಜರಾತಲ್ಲಿ ಭೂಮಿಯೇ ಗಢಗಢ ಕಂಪಿಸಿದಂತಾದಾಗ, ಆ ಭಾರೀ ಭೂಕಂಪದ ಹೊತ್ತಲ್ಲಿ ಅದೆಷ್ಟೋ ಪ್ರಾಣಗಳನ್ನು ಉಳಿಸಿದ್ದು ಇದೇ ಜನ. ಸಮುದ್ರ ತೀರದಲ್ಲಿ ‘ಸುನಾಮಿ’ ಅಲೆಗಳು ಘನಘೋರವಾಗಿ ಅಪ್ಪಳಿಸಿದಾಗ ಮನೆ-ಮಠ ಕಳೆದುಕೊಂಡವರಿಗೆ ಸೂರು ಕಟ್ಟಿಸಿ ನೆಲೆಗೊಳಿಸಿದವರೂ ಇವರೇ. ಹೀಗೆ ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳು ಕಾಣಿಸಿಕೊಂಡಾಗೆಲ್ಲಾ ‘ಡೋಂಟ್ ವರಿ.. ವಿ ಆರ್ ವಿದ್ ಯು’ ಅಂತ ಸಂತ್ರಸ್ತರಲ್ಲಿ, ನಿರಾಶ್ರಿತರಾದವರಲ್ಲಿ ಧೈರ್ಯ ತುಂಬಿದ್ದಷ್ಟೇ ಅಲ್ಲ; ಆಸರೆ ಕೊಟ್ಟವರೂ ಇದೇ ಜನ.

ಪ್ರಭೋ ಶಕ್ತಿಮನ್ ಹಿಂದು ರಾಷ್ಟಾಂಗ ಭೂತಾ….


ಹೌದು; ಹಾಗಾದರೆ ಇವರ ಜಾತಿ ಯಾವುದು? ಪಂಥ ಯಾವುದು? ಎಂಬ ಪ್ರಶ್ನೆ ಮೂಡುವುದು ತೀರಾ ಕಾಮನ್. ಇದೊಂದು ರಾಷ್ಟ್ರವ್ಯಾಪ್ತಿ ಸಂಘಟನೆ. ಜಗತ್ತೇ ಬೆಚ್ಚಿ ಬೀಳುವಂತ ಶಕ್ತಿ. ಇಂದಿರಾಗಾಂಧಿ ಬದುಕಿದ್ದಷ್ಟು ದಿನ ಇದರ ಹೆಸರು ಕೇಳಿದರೆ ಏರ್ ಕಂಡೀಶನ್ನಲ್ಲೂ ಬೆವರುತ್ತಿದ್ದರು. ಒಮ್ಮೆ ಅದನ್ನ ಬ್ಯಾನ್ ಮಾಡಿಯೂ ಬಿಟ್ಟಿದ್ದರು. ಆ ನಂತರವೇ ಈ ಸಂಘಟನೆ ದೈತ್ಯರೂಪಿಯಾಗಿ ಬೆಳೆದದ್ದು. ಇವತ್ತಿಗೆ ಇವರ ಸುದ್ದಿಗೆ ಯಾರೇ ಹೋದರೂ ಮುಗೀತು ಕಥೆ. ಅಷ್ಟೊಂದು ಬಲಿಷ್ಠವಾಗಿ ಬೆಳೆದಿರುವ ಈ ಸಂಘಟನೆಯ ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ, ನಾವೆಲ್ಲಾ ಶಾರ್ಟ್‌ಫಾರ್ಮಲ್ಲಿ ಆರೆಸ್ಸೆಸ್ ಅಂತ ಕರೀತೇವೆ. ಇವರನ್ನ ಕಂಡರೆ ಆಗದವರು ‘ಚಡ್ಡೀ’ ಅಂತ ಕರೀತಾರೆ. ಅವರ ಬಗ್ಗೆ ಭಯವಿದ್ದವರು ‘ಅವ್ನು ಸಂಘದವ’ ಅಂತ ಮೂದಲಿಸುದೂ ಇದೆ.

ಪರಂ ವೈಭವಂ ನೇತು ಮೇತತ್ ಸ್ವರಾಷ್ಟ್ರಂ

ಹಾಗಾದರೆ ಇಂಥ ರಾಷ್ಟ್ರವ್ಯಾಪ್ತಿ ಸಂಘಟನೆಯ ಹುಟ್ಟು ಯಾವಾಗ ಅಂದುಕೊಂಡಿದ್ದೀರಾ? ಇವತ್ತಿಗೆ ತೊಂಬತ್ತೈದು ವರುಷಗಳ ಹಿಂದೆ. ಅಂದರೆ ಬ್ರಿಟಿಷರ ಆಳ್ವಿಕೆಯ ದಿನಗಳಲ್ಲೇ. ಆವತ್ತು ೧೯೨೫ರಲ್ಲಿ ಕೇಶವ ಬಲರಾಮ ಹೆಡ್ಗೇವಾರ್ ಇದರ ಸಂಸ್ಥಾಪಕರು. ಇವರನ್ನ ‘ಡಾಕ್ಟರಜೀ’ ಅಂತಲೇ ಅಕ್ಕರೆಯಿಂದ ಕರೆಯುತ್ತಾರೆ. ಇವರೆಂದರೆ ರಾಷ್ಟ್ರಾಭಿಮಾನದ ಜೀವಂತ ಸಂಕೇತದಂತೆ. ಸ್ವತಂತ್ರ ಭಾರತಕ್ಕೆ ‘ಭಗವಾಧ್ವಜ’ ರಾಷ್ಟ್ರಧ್ವಜವಾಗಬೇಕು ಅಂತ ಕನಸು ಕಂಡವರೇ ಅವರು. ಎಲ್ಲಾ ದೇಶಗಳೂ ಆಯಾಯ ದೇಶದ ಜೀವನ ಪದ್ಧತಿಯನ್ನ ರಾಷ್ಟ್ರಧ್ವಜದಲ್ಲಿ ಸಂಕೇತವಾಗಿ ಆಳವಡಿಸಿಕೊಂಡಿದ್ದರೆ, ಭಾರತದಲ್ಲಿ ಯಾಕೆ ಹೀಗೆ? ಇಲ್ಯಾಕೆ ಮೂರು ಬಣ್ಣ ಜೋಡಣೆ ಯಾಕೆ? ಇದವರ ಪ್ರಶ್ನೆ.

ಭಾರತ ಮಾತಾ ಕೀ ಜಯ್….
ಹೌದು; ತಾನು ಬದುಕಿದ್ದಷ್ಟು ದಿನ ತನ್ನ ಕನಸು ಈಡೇರಿಸಿಕೊಳ್ಳಲಾಗದ ಚಿಂತೆ ಅವರ ಆತ್ಮಕ್ಕಿದೆ. ತದನಂತರ ಬಂದ ಮಾಧವ ಸದಾಶಿವ ಗೋಳ್ವಲ್ಕರ್ ಅರೆಸ್ಸೆಸ್‌ನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದರು. ಇವರು ‘ಗುರೂಜಿ’ ಅಂತಲೇ ಖ್ಯಾತರಾದರು. ಇವರಿಂದಲೂ ಡಾಕ್ಟರಜೀ ಕನಸು ಈಡೇರಿಸಲಾಗಿಲ್ಲ. ತದನಂತರ ಬಾಳಾಸಾಹೇಬ್ ದೇವರಸ್ ‘ಸರಸಂಘಚಾಲಕ’ರಾದರು.1975 ಜೂನ್ 30 ರಂದು ನಾಗ್ಪುರ ರೈಲ್ವೇ ಸ್ಟೇಶನ್ ಬಳಿ ಅರೆಸ್ಟಾದರು. ಇದರ ಐದು ದಿನ ಮುಂಚೆ ‘ಸಂಘ’ವನ್ನು ಇಂದಿರಾಜಿ ಬ್ಯಾನ್ ಮಾಡಿದ್ದರು. ಈಗಿರುವ ಸರಸಂಘಚಾಲಕ ನೀವೆಲ್ಲಾ ನೋಡುತ್ತಿರುವವರೇ ಆಗಿದ್ದಾರೆ ಅವರೇ ಮೋಹನ್ ಭಾಗವತ್!

‘ಸಂಘ’ದವರು ರೆಡಿ ಇದ್ದಾರೆ!

ಯಸ್. ಇದೀಗ ಕಾಲ ಕೂಡಿ ಬಂದಂತಿದೆ. ಆರೆಸ್ಸೆಸ್ ಸಂಘ ಪರಿವಾರಧ ಪಕ್ಷವಾಗಿರುವ ಬಿಜೆಪಿ ದೆಹಲಿ ಗದ್ದುಗೆಯಲ್ಲಿದೆ. ಸಂಸತ್‌ನಲ್ಲೂ, ಮೇಲ್ಮನೆಯಲ್ಲೂ ಇದೀಗ ಬಹುಮತ ಸಾಧಿಸಿದೆ. ಭಾಗವತ್ ಹೇಳಿದ್ದೆಲ್ಲಾ ಆಗಿ ಹೋಗುತ್ತಿದೆ. ಸರಸಂಘಚಾಲಕರಾದ ಇವರೇ ಒಂದರ್ಥದಲ್ಲಿ ಕೇಂದ್ರ ಸರಕಾರದ ರಿಮೋಟ್ ಇಂಥ ಪರ್ವಕಾಲದಲ್ಲಿ ಕೇಂದ್ರದಲ್ಲೂ, ರಾಜ್ಯದಲ್ಲೂ, ರಾಜ್ಯದ ಬಹುತೇಕ ಪಾಲಿಕೆಗಳಲ್ಲೂ ಭಾಜಪದ್ದೇ ರಾಯಭಾರ. ಇಂಥ ಸಮಯದಲ್ಲೇ ಜಗತ್ತನ್ನೇ ವಿನಾಶಗೊಳಿಸುವಂಥ ಮಹಾಮಾರಿ ಕೊರೋನಾ ವಕ್ಕರಿಸಿದೆ. ಇನ್ನಿರುವ ಹದಿನೇಳು ದಿನ ಕಷ್ಟದ ದಿವಸಗಳು. ಹೊರರಾಜ್ಯದವರು, ಈಶಾನ್ಯ ರಾಜ್ಯದವರು ಗುಡಿಸಲಿನಲ್ಲಿದ್ದಾರೆ. ಜೋಪಡಿಗಳಲ್ಲೇ ದಿನ ತಳ್ಳುತ್ತಿದ್ದಾರೆ. ಬಡವರ, ದಿನಗೂಲಿ ಕಾರ್ಮಿಕರ ಬದುಕಂತೂ ನರಕಸದೃಶವಾಗಿದೆ. ತುತ್ತು ತೊತ್ತಿಗಾಗಿ ಕಾಯುತ್ತಿದಾರೆ. ಜೋಪಡಿಯಿಂದ ಹೊರಬರುವಂತೆಯೂ ಇಲ್ಲ. ಅದರೊಳಗೆ ಆಹಾರ ಸಾಮಾಗ್ರಿಗಳಂತೂ ಇಲ್ಲವೇ ಇಲ್ಲ. ದಾನಿಗಳು ತುಂಬಾ ಇದ್ದಾರೆ. ‘ಪರಿವರ್ತನಾ ಫೌಂಡೇಶನ್’ನಂತೆ ಕೊಡುವವರಿದ್ದಾರೆ. ಆದರೆ ಸರ್ವ್ ಮಾಡುವವರ ಕೊರತೆಯಿದೆ. ಬೆಂಗಳೂರಿನಲ್ಲಿ ನೂರಾರು ಸಂಖ್ಯೆಯಲ್ಲಿ ಸಂಘಪರಿವಾರದವರಿಗೆ ಪಾಸ್ ನೀಡಲಾಗಿದ್ದು ರಾಜ್ಯದ ಇತರೆಡೆಗಳಲ್ಲಿಯೂ ಈ ಅವಕಾಶವನ್ನು ವಿಸ್ತರಿಸಬೇಕಾಗಿದೆ. ನಿಮಗೆ ಗೊತ್ತಿರುವಂಥದ್ದೇ; ಆರೆಸ್ಸೆಸ್ಸಿಗರು ಯಾವತ್ತಿಗೂ ಕೆಲಸಕ್ಕೆ ಹಿಂದೇಟು ಹಾಕುವವರಲ್ಲ; ಹಿಂಜರಿಯಲಾರರು ಕೂಡಾ. ಸಾಮಾಜಿಕ ಕಳಕಳಿಯಂತೂ ಇದ್ದೇ ಇರುತ್ತೆ. ಇಂಥವರಿಗೆ ಪಾಸ್ ಮತ್ತೊಂದಿಷ್ಟು ದೇಣಿಗೆ ನೀಡಿ ಊಟಕ್ಕಾಗಿ ಹಪಹಪಿಸುತ್ತಿರುವ ನಿರ್ಗತಿಕರಿಗೆ, ಬಡವರಿಗೆ ಅನ್ನ ಬಡಿಸುವಂತೆ ಮಾಡಿದಲ್ಲಿ ಲಾಕ್‌ಡೌನ್ ಮೇ ಮೂರಲ್ಲ; ಜೂನ್ ಮೂರರ ತನಕ ವಿಸ್ತರಿಸಲ್ಪಟ್ಟರೂ ಯಾರೂ ತಲೆಕೆಡಿಸಿಕೊಳ್ಳಲಾರರು! ಇವೆಲ್ಲಾ ಪ್ರಶ್ನೆಗಳಿಗೆ ನಾಳೆ ನಿಮ್ಮ ಮುಂದೆ ಮಾತನಾಡಲಿದ್ದೇನೆ-ಜತೆಗೆ ಸರಕಾರದಿಂದ ಸರಿಯಾದ ಸೋಲ್ಯೂಶನ್ ಸಿಗದಿದ್ದಲ್ಲಿ ಸುಸೈಡ್ ಗ್ಯಾರಂಟಿ ಅಂತ ನಿನ್ನೆ ಹೇಳಿರುವ ಹುಡುಗಿಯ ಮಾತುಗಳೊಂದಿಗೆ-

  • ಎಸ್ಸೆನ್ ಕುಂಜಾಲ್

2 thoughts on “ಟೊಂಕ ಕಟ್ಟಿ ನಿಂತ ಆರೆಸ್ಸೆಸ್‌ಗೇ ನೋ ಪಾಸ್

  1. ಕುಂಜಾಲ್ ರವರಿಗೆ ಧನ್ಯವಾದಗಳು. ವರದಿ ಸತ್ಯಾಂಶದಿಂದ ಕೂಡಿದೆ. ಅಲ್ಲದೆ ಚೀತೋಹಾರಿ ಯಾಗಿದೆ. ಮುಂದಿನ ನಿಮ್ಮ ಬರಹಕ್ಕಾಗಿ ಕಾದಿರುತ್ತೇನೆ…

  2. ಕುಂಜಾಲ್ ರವರಿಗೆ ಧನ್ಯವಾದಗಳು. ವರದಿ ಸತ್ಯಾಂಶದಿಂದ ಕೂಡಿದೆ. ಅಲ್ಲದೆ ಚೀತೋಹಾರಿ ಯಾಗಿದೆ. ಮುಂದಿನ ನಿಮ್ಮ ಬರಹಕ್ಕಾಗಿ ಕಾದಿರುತ್ತೇನೆ…

Leave a Reply

Your email address will not be published. Required fields are marked *

error: Content is protected !!