ಮಲಾಲ ಟ್ವೀಟ್ ಗೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ
ಉಡುಪಿ – ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಲೆಸಬೇಕು ಹಾಗೂ ಮಕ್ಕಳು ಮತ್ತೆ ಶಾಲೆಗೆ ಹೋಗುವಂತೆ ಆಗಬೇಕು ಎಂಬುದಾಗಿ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸೂಫಜೈ ಟ್ವಿಟ್ ಮಾಡಿದ್ದಾರೆ , ಅವರ ಟ್ವಿಟ್ ನಲ್ಲಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲು ಕೆಲಸ ಮಾಡಬೇಕು. ಕಾಶ್ಮೀರಿಗಳ ಧ್ವನಿ ಕೇಳಿಸಿಕೊಳ್ಳಬೇಕು ಹಾಗೂ ಅಲ್ಲಿನ ಮಕ್ಕಳು ಕ್ಷೇಮವಾಗಿ ಶಾಲೆಗೆ ಹೋಗಿ, ಬರುವಂತಾಗಬೇಕು ಎಂದು ನಾಯಕರಿಗೆ ಮನವಿ ಮಾಡುತ್ತೇನೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಅದರ ಆಚೆಗೂ ಪ್ರಯತ್ನಿಸಬೇಕು ಎಂದು ಶನಿವಾರ ಮಲಾಲ ಟ್ವೀಟ್ ಮಾಡಿದ್ದರು…
ಮಲಾಲ ಟ್ವೀಟ್ ಗೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ
ಬಿಜೆಪಿಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ನೊಬೆಲ್ ವಿಜೇತೆ ಮಲಾಲಾ ಅವರಲ್ಲಿ ನನ್ನದೊಂದು ಪ್ರಾಮಾಣಿಕ ಮನವಿ, ಪಾಕಿಸ್ತಾನದ ಅಲ್ಪಸಂಖ್ಯಾತರ ಜತೆ ಸ್ವಲ್ಪ ಸಮಯ ಮಾತನಾಡಲಿ. ಬಲಂತದ ಮತಾಂತರದ ವಿರುದ್ಧ ಹಾಗೂ ಅವರದೇ ಸ್ವಂತ ದೇಶದಲ್ಲಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ಮಾತನಾಡಲಿ ಅಭಿವೃದ್ಧಿಯ ಕಾರ್ಯಸೂಚಿಯನ್ನು ಕಾಶ್ಮೀರಕ್ಕೂ ವಿಸ್ತರಿಸಲಾಗಿದೆಯೇ ಹೊರತು ದಮನ ಮಾಡುತ್ತಿಲ್ಲ ಎಂಬುದಾಗಿ ಶೋಭಾ ತೀಕ್ಷ್ಣವಾಗಿ ಟ್ವಿಟ್ ಮಾಡಿದ್ದಾರೆ.