ಪರಿಸರ ಸಂರಕ್ಷಿಸಿ, ಪ್ರಕೃತಿ ನಮಗೆ ಎಚ್ಚರಿಕೆ ನೀಡುತ್ತಿದೆ:ಸದಾಶಿವ ಪ್ರಭು

ಉಡುಪಿ: ಪ್ರಕೃತಿ ನಮಗೆ ಎಚ್ಚರಿಕೆ ನೀಡುತಿದ್ದು, ಪರಿಸರ ಸಂರಕ್ಷಣೆ ವಿಚಾರದಲ್ಲಿ ನಮ್ಮ ಜವಬ್ಧಾರಿ ಹೆಚ್ಚಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಸೋಮವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಜಗನ್ನಾಥ ಸಭಾಭವನ ಆವರಣದಲ್ಲಿ ನಡೆದ ‘ಶತಮಾನ ಕಂಡ ಸಂಸ್ಥೆಯೊಂದಿಗೆ ಶತಾಯುಷಿ ತಿಮ್ಮಕ್ಕ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಾನವನ ಅತೀಯಾದ ಅಸ್ತಕ್ಷೇಪ ಬೇರೆಬೇರೆ ರೀತಿಯಲ್ಲಿ ಪ್ರಕೃತಿಯ ಅಸಮಾತೋಲನಕ್ಕೆ ಕಾರಣವಾಗಿದೆ. ಈಗಾಗಲೆ ಇದರ ಪರಿಣಾಮನಲ್ಲಿ ಕೊಡಗು ಜಿಲ್ಲೆಯಲ್ಲಿ ಕಂಡಿದ್ದೇವೆ.

ಇಂಥ ಎಚ್ಚರಿಕೆಯನ್ನು ಪ್ರಕೃತಿ ನಮಗೆ ನೀಡಿದರು, ನಾವು ಸರಿಯಾಗಿ ಎಚ್ಚೆತ್ತುಕೊಳ್ಳದೆ ಇನ್ನೊಂದು ದುರಂತಕ್ಕೆ ಕಾರಣರಾಗುತ್ತೇವೆ. ಅಭಿವೃದ್ಧಿ ಹೆಸರಲ್ಲಿ ಮರಕ್ಕೆ ಕತ್ತರಿ ಬೀಳುತ್ತಿರುವುದು ಹೌದು, ಇದು ಸಾಧ್ಯವಾದಷ್ಟು ಕಡಿಮೆಯಾಗಿ, ಹೆಚ್ಚೆಚ್ಚು ಗಿಡ ನೆಡುವ, ಪರಿಸರ  ಸಂರಕ್ಷಣೆ ಕೆಲಸವಾಗಬೇಕು.

ಈ ನಿಟ್ಟಿನಲ್ಲಿ ಎಲ್ಲರೂ ಜವಬ್ಧಾರಿ ಅರಿತು  ಮುಂದಕ್ಕೆ ಸಾಗಬೇಕು ಎಂದು ಕರೆ ನೀಡಿದರು.  ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಬದ್ಧತೆಯನ್ನು ದೇಶ ಗುರುತಿಸಿದೆ. ಪರಿಸರ ಕಾಳಜಿ, ಪ್ರೀತಿಯನ್ನು ವೃಕ್ಷಮಾತೆ ತಿಮ್ಮಕ್ಕ ಅವರನ್ನು ನೋಡಿ ನಾವು ಕಲಿಯಬೇಕು ಎಂದರು.

ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ಬಳಿಕ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬಿ.ಸದಾಶಿವ ಪ್ರಭು, ವೃತ್ತ ನಿರೀಕ್ಷಕ ಮಂಜುನಾಥ್, ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ವನಸಿರಿ ಅಭಿಯಾನದ ಉಮೇಶ್ ಬಿ.ಎನ್  ಸಹಕಾರ ಸಂಘ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಬಡಗಬೆಟ್ಟು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಲ್.ಉಮಾನಾಥ್, ಬಡಗಬೆಟ್ಟು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು.ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!