ಅಲೆವೂರಿನಲ್ಲಿ ಶೋಭಾ ಕರಂದ್ಲಾಜೆಗೆ ಸನ್ಮಾನ.

ಅಲೆವೂರು ಬಿಜೆಪಿ  ಗ್ರಾಮ ಸಮಿತಿ  ಇದರ ವತಿಯಿಂದ ನೂತನ ಸಂಸದರಾದ ಶೋಭಾ ಕರಂದ್ಲಾಜೆಯವರಿಗೆ ಅಲೆವೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು. ಪ್ರಾಸ್ತಾವಿಕವಾಗಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮಾತನ್ನಾಡಿ ಬಿಜೆಪಿಗೆ ಲೀಡ್ ಕೊಟ್ಟ ಪಂಚಾಯತ್ ಗಳಲ್ಲಿ ಅಲೆವೂರು ಪಂಚಾಯತ್  ಕಾಪು ಕ್ಷೇತ್ರದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ.

ಇದಕ್ಕೆ ಕಾರಣರಾದ ಅಲೆವೂರಿನ ನಿಸ್ವಾರ್ಥ ಕಾರ್ಯಕರ್ತರೆಲ್ಲರಿಗೂ ಈ ಜಯದ ಅರ್ಪಣೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ  ಶೋಭಾ ಕರಂದ್ಲಾಜೆಯವರು ತಮ್ಮನ್ನು ಭೇಟಿಯಾಗಲು ಬರುವವರು ನೇರವಾಗಿ ನಾನು ಇರುವ ದಿನ ನನ್ನ ಕಚೇರಿಗೆ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು, ಎರಡನೇ ಬಾರಿ ಪ್ರೀತಿಯಿಂದ ಆರಿಸಿದ ನಿಮ್ಮೆಲ್ಲರ ಖಣ ತೀರಿಸುವೆನಂದು ಹೇಳಿ ಕ್ರತಜ್ನ್ಯತೆ ಅರ್ಪಿಸಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷರಾದ  ಗುರ್ಮೆ ಸುರೇಶ್ ಶೆಟ್ಟಿ, ಶಾಸಕರಾದ ಲಾಲಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಆದ್ಯಕ್ಷರಾದ ದಿನಕರ್ ಬಾಬು, ಉಪಾದ್ಯಕ್ಷರಾದ ಶೀಲಾ ಕೆ ಶೆಟ್ಟಿ,  ರಾಜ್ಯ ಮಹಿಳಾ ಮೋರ್ಚ ಅಧ್ಯಕ್ಷರಾದ ಗೀತಾಂಜಲಿ ಸುವರ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸಂದ್ಯಾ ರಮೇಶ್, ಕಾಪು ಕ್ಷೇತ್ರಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅಲೆವೂರು ತಾಲೂಕು ಪಂಚಾತಯ್ ಸದಸ್ಯರಾದ ಬೇಬಿ ರಾಜೇಶ್, ಹಿಂದುಳಿದ ಮೋರ್ಚ ಅಧ್ಯಕ್ಷರಾದ ಶಂಕರ್ ಪಾಲನ್, ಯುವಮೋರ್ಚ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಅಲೆವೂರು ಪಂಚಾಯತ್ ಉಪಾಧ್ಯಕ್ಷ ರಾದ ಜಯಲಕ್ಷ್ಮಿ ಹಂಸರಾಜ್, ಮಾಜಿ ಅಲೆವೂರು ಪಂಚಾಯತ್ ಅಧ್ಯಕ್ಷರಾದ ಹರೀಶ್ ಸೇರಿಗಾರ್ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಅಲೆವೂರು ಗ್ರಾಮ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಅಲೆವೂರು ವಹಿಸಿ ಕಾರ್ಯಕರ್ತರಿಗೆ ಕ್ರತಜ್ನ್ಯತೆ ಸಲ್ಲಿಸಿ, ಧನ್ಯವಾದ ಸಮರ್ಪಿಸಿದರು. ಪ್ರಶಾಂತ ಆಚಾರ್ಯ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ರವಿ ಸೇರಿಗಾರ್ ಹಾಗೂ ಸಂತೋಷ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!