ಮಹಿಳೆಯ ಬ್ಯಾಗ್, ಮೊಬೈಲ್ ಕದ್ದಆರೋಪಿ ಪೊಲೀಸರ ವಶಕ್ಕೆ, ನ್ಯಾಯಾಂಗ ಬಂಧನ

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಮಂದಾರ್ತಿ ಒಳಮಕ್ಕಿ ಎಂಬಲ್ಲಿ ಎಪ್ರಿಲ್‌ನಲ್ಲಿ ರಾತ್ರಿ ವೇಳೆ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ, ಅವಳ ಬಾಯಿ ಮುಚ್ಚಿ, ಕೈಯಲ್ಲಿದ್ದ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡು ಹೋದ ಆರೋಪಿ ಮಂದಾರ್ತಿ ನಿವಾಸಿ ಶಂಕರ (೨೬) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ಈತನಿಂದ ಬ್ಯಾಗ್, ೬೦೦೦ ರೂ. ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!