ಶರಾವತಿ ನದಿ ಉಳಿಸಿ; ಮಲೆನಾಡಲ್ಲಿ ತೀವೃಗೊಂಡ ಹೋರಾಟ
ಶಿವಮೊಗ್ಗ: ಶರಾವತಿ ನದಿ ಉಳಿಸಿ ನದಿ ನೀರನ್ನು ಬೆಂಗಳೂರಿಗೆ ಹರಿಸುವುವದನ್ನ ವಿರೋಧಿಸಿ ಮಲೆನಾಡ ಭಾಗದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಇಂದು ಮಲೆನಾಡಿನ ಜೀವಜಲ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನೇಕ ಸಂಘಟನೆಗಳು ಜಿಲ್ಲಾಧಿಕಾರಿ ಕಛೇರಿಯ ಎದುರು ಪ್ರತಿಭಟನೆ ನಡೆಸಿದದರು.
ಈ ಸಂದರ್ಭ ಬೆಕ್ಕಿನ ಕಲ್ಲುಮಠದ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಶರಾವತಿ ನದಿಯನ್ನ ೪೦೦ ಕಿ.ಮೀ ದೂರದ ಬೆಂಗಳೂರಿಗೆ ಹರಿಸುವ ಪ್ರಯತ್ನ ಅವೈಜ್ಞಾನಿಕವಾದುದು. ಇದರ ಜೊತೆ ಸಾವಿರಾರು ಜೀವಜಲಗಳು ನಾಶವಾಗಲಿದೆ. ಹಾಗಾಗಿ ಈ ಯೋಜನೆಯನ್ನ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರಪ್ಪ ಮಾತನಾಡಿ ಮಲೆನಾಡಿನ ಪ್ರತಿಯೊಂದು ನದಿಗಳನ್ನ ಇಲ್ಲಿನ ಜನ ಕೇವಲ ನದಿಯಾಗಿ ನೋಡಿಲ್ಲ. ಇದೊಂದುಸಂಸ್ಕೃತಿಯಾಗಿ ಪೂಜಿಸಲ್ಪಡುತ್ತಿದೆ, ಹಾಗಾಗಿ ಬೆಂಗಳೂರಿಗೆ ಹರಿಸುವ ಪ್ರಯತ್ನ ವ್ಯರ್ಥವಾದುದು ಎಂದರು.
ದುರ್ಗಿಗುಡಿ ಕನ್ನಡ ಸಂಘ, ಕರ್ನಾಟಕ ತುಂಗಾ ರಕ್ಷಣಾ ವೇದಿಕೆ, ರೈತ ಸಂಘ, ನವಕರ್ನಾಟಕ ನಿರ್ಮಾಣ ವೇದಿಕೆ, ಶಿವಮೊಗ್ಗ ಕೈಗಾರಿಕ ಮತ್ತು ವಾಣಿಜ್ಯ ಸಂಘ, ವಿಹೆಚ್ಪಿ, ಡಿಎಸ್ಎಸ್ ಜಮಾಯತೆ ಇಸ್ಲಾಮಿ ಹಿಂದೂ, ಬಸ್ ಮಾಲಿಕರ ಸಂಘ ಮೊದಲಾದ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾದರು.