ಐಸಿಯು ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷರಾಗಿ ಸುನೀಲ್ ಕಬ್ರಾಲ್ ಶಿರ್ವ ಆಯ್ಕೆ

ಉಡುಪಿ : ಇಂಡಿಯನ್ ಕ್ರಿಶ್ಚನ್ ಯೂನಿಯನ್ (ಐಸಿಯು) ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷರಾಗಿ ಸುನೀಲ್ ಕಬ್ರಾಲ್ ಶಿರ್ವ ಆಯ್ಕೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಕ್ರೈಸ್ತರಿಗೆ ಸಿಗುವ ಸವಲತ್ತುಗಳ ಮಾಹಿತಿ ಮತ್ತು ಕ್ರೈಸ್ತರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳ ಪರಿಹರಿಸುವ ನಿಟ್ಟಿನಲ್ಲಿ ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ (ಐಸಿಯು) ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ.

ಇಂಡಿಯನ್ ಕ್ರಿಶ್ಚನ್ ಯೂನಿಯನ್ ಕಾರ್ಯಾಲಯವು ಉಡುಪಿ ಜೋಡು ರಸ್ತೆ ಬಳಿಯ ವೈಎಂಸಿಎ ಕಟ್ಟಡದಲ್ಲಿ ತೆರೆಯಲಾಗಿದೆ. ಸಂಘಟನೆಯ ಪ್ರಥಮ ಸಭೆಯು ಇತ್ತೀಚೆಗೆ ಕಚೇರಿಯಲ್ಲಿ ನಡೆಯಿತು. ಸ್ಥಾಪಕ ಮತ್ತು ಪ್ರಥಮ ಅಧ್ಯಕ್ಷರಾಗಿ ಸುನೀಲ್ ಕಬ್ರಾಲ್ ಶಿರ್ವ ಮತ್ತು ಕಾರ್ಯದರ್ಶಿಯಾಗಿ ಚಾರ್ಲ್ಸ್ ಅಮ್ಲ೦ರ್ ಉಡುಪಿ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ರೊನಾಲ್ಡ್ ಮನೋಹರ್ ಕರ್ಕಡ ಉದ್ಯಾವರ, ಕೋಶಾಧಿಕಾರಿ ಮೈಕಲ್ ರಮೇಶ್ ಡಿಸೋಜಾ ಮುದರಂಗಡಿ, ಉಪಾಧ್ಯಕ್ಷರಾಗಿ ಮೆಲ್ವಿನ್ ಡಿಸೋಜಾ ಶಿರ್ವ, ಜಾನೆಟ್ ಬರ್ಬೋಜಾ ಮುದರಂಗಡಿ, ಸಹ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಡಿಯೋನ್ ಡಿಸೋಜಾ ಕಲ್ಮಾಡಿ, ಲೆಕ್ಕ ಪರಿಶೋಧಕರಾಗಿ ಶೀಲಾ ಜತ್ತನ್ನ ಉಡುಪಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!