ದಿನೇಶ್ ಬಾಂಧವ್ಯಗೆ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಗೌರವ ಪುರಸ್ಕಾರ

ಬೆಂಗಳೂರು: ದಿನೇಶ್ ಬಾಂಧವ್ಯಗೆ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಗೌರವ ಪುರಸ್ಕಾರ ನೀಡಲಾಯಿತು.ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನೆಡೆದ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಸಮಾರಂಭದಲ್ಲಿ ಬಾಂಧವ್ಯ ಬ್ಲಡ್ ಕರ್ನಾಟಕ ಸಂಸ್ಥೆಯ ಸ್ಥಾಪಕರು ಸಮಾಜ ಸೇವಕರು ಹಾಗೂ ಪರಿಸರ ಪ್ರೇಮಿ ದಿನೇಶ್ ಬಾಂಧವ್ಯರನ್ನು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌ರವರು ಗೌರವ ಪುರಸ್ಕಾರ ನೀಡಿದರು.

ಊರಿನವರ ರಕ್ತದ ಅವಶ್ಯಕತೆ ಪೂರೈಕೆಗೆ ಹುಟ್ಟಕೊಂಡ ಬಾಂಧವ್ಯ ಇದೀಗ ರಾಜ್ಯವ್ಯಾಪಿಯಾಗಿ ಬೆಳೆದಿದೆ. ಬಾಂಧವ್ಯ ಗುಂಪಿನ ಕಾರ್ಯಚಟುವಟಿಕೆಗಳ ಮೂಲಕ ನಾಡಿನಾದ್ಯಂತ ದಿನೇಶ್ ಬಾಂಧವ್ಯ ಎಂದೇ ಪರಿಚಿತರಾಗಿದ್ದಾರೆ.ಮೊದ ಮೊದಲು ತನ್ನ ಊರು ಸಾಸ್ತಾನ ಭಾಗದ ಆಸುಪಾಸಿನ ರಕ್ತದಾನಿಗಳ ವಿವರಗಳನ್ನು ಸಂಗ್ರಹಿಸಿ ಅಗತ್ಯ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಿ ರೋಗಿಗಳ ತುರ್ತು ಅವಶ್ಯಕತೆಗೆ ರಕ್ತ ಪೂರೈಕೆಯ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದರು.

ಸಾಮಾಜಿಕ ಜಾಲತಾಣಗಳಿಲ್ಲದ ಆ ದಿನಗಳಲ್ಲಿ ಮೊಬೈಲ್ ಕಾಂಟಾಕ್ಟ್ ಗಳಲ್ಲಿಯೇ ರಕ್ತದ ಗುಂಪನ್ನು ನಮೂದು ಮಾಡಿಕೊಳ್ಳುವ ಮೂಲಕ ಅಗತ್ಯ ಸಂದರ್ಭದಲ್ಲಿ ಸೂಕ್ತ ದಾನಿಗಳನ್ನು ಸುಲಭವಾಗಿ ಸಂಪರ್ಕಿಸುವ ವ್ಯವಸ್ಥೆಯನ್ನು ಇವರು ಮಾಡಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರಕ್ತದಾನಿಗಳ ಗುಂಪನ್ನು ಕಟ್ಟಿಕೊಂಡು ಸಮಾಜಮುಖಿ ಕೆಲಸ ಮಾಡಿಕೊಂಡು, ಸಾವಿರಾರು ಜನರ ಜೀವ ಉಳಿಸುವಲ್ಲಿ ಶ್ರಮಿಸಿದ್ದಾರೆ.

ಸಮಾಜ ಸೇವಕರಾದ ದಿನೇಶ್ ಬಾಂಧವ್ಯರ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ನಾಡೋಜ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಮತ್ತು ಮಾಜಿ ಪ್ರಧಾನಿ ದೇವೇಗೌಡರವರು ಉಪಸ್ಥಿತರಿದ್ದರು..

 

Leave a Reply

Your email address will not be published. Required fields are marked *

error: Content is protected !!