ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಕಾರಿನ ಮೇಲೆ ದಾಳಿ: ಪ್ರಾಣಾಪಾಯದಿಂದ ಪಾರು

ಮುಂಬೈ:ಕೆಲಸ ಮುಗಿಸಿ ಸ್ಟುಡಿಯೊದಿಂದ ಮನೆ ಕಡೆಗೆ ಕಾರಿನಲ್ಲಿ ಹೊರಟಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಮತ್ತು ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸಮಿಯಾ ಗೋಸ್ವಾಮಿ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಗುರುವಾರ ನಸುಕಿನ ಜಾವ ಮುಂಬೈಯಲ್ಲಿ ನಡೆದಿದೆ.

ದಾಳಿಯಲ್ಲಿ ಅರ್ನಾಬ್ ಮತ್ತು ಅವರ ಪತ್ನಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಷ್ಟೇ ಮಾಹಿತಿ ಲಭ್ಯವಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇಬ್ಬರ ವಿರುದ್ಧ ಭಾರತೀಯ ಸಂವಿಧಾನದ ಕಾಯ್ದೆ 341 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ದಾಳಿ ಸಂಬಂಧ ಗೋಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ವೊರ್ಲಿಯಲ್ಲಿರುವ ಟಿವಿ ಕಚೇರಿಯಿಂದ ಮನೆಗೆ ತೆರಳಿತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಹಾಗೂ ಪತ್ನಿ ಮೇಲೆ ದಾಳಿ ನಡೆಸಲಾಗಿದೆ.  ಮಧ್ಯರಾತ್ರಿ 12.15ರ ಸುಮಾರಿಗೆ ಗಣಪತ್ರಾವ್ ಕದಮ್ ಮಾರ್ಗ್ ಪ್ರದೇಶದಲ್ಲಿ ತೆರಳುವ ವೇಳೆ ಬೈಕ್  ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ನಡೆಸಿದ್ದರು. 

ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ಬೆಟ್ಟು ಮಾಡಿ ತೋರಿಸಿ ಕಾರಿನ ಮುಂದೆ ಬೈಕ್ ನಿಲ್ಲಿಸಿ ಅಡ್ಡಗಟ್ಟಿದ್ದರು. ಚಾಲಕನ ಸೀಟ್ ಬಳಿಯಿದ್ದ ಕಿಟಿಕಿಗೆ ಸಾಕಷ್ಟು ಬಾರಿ ಹೊಡೆದರು. ಬಳಿಕ ಕಿಟಕಿ ಗಾಜುಗಳನ್ನು ಒಡೆಯಲು ಸಾಧ್ಯವಾಗಲಿಲ್ಲ. ನಂತರ ತಮ್ಮ ಬಳಿಯಿದ್ದ ಬಾಟಲಿ ತೆಗೆದು ಅದರಲ್ಲಿದ್ದ ದ್ರವದ ರೀತಿಯ ವಸ್ತುವನ್ನು ಕಾರಿನ ಮೇಲೆಲ್ಲಾ ಸುರಿದು, ಬಾಯಿಗೆ ಬಂದ ರೀತಿಯಲ್ಲಿ ನಿಂದಿಸುತ್ತಿದ್ದರು ಗೋಸ್ವಾಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ಈ ನಡುವೆ ಬಂಧಿತರ ಕುರಿತಂತೆಯೂ ಹೇಳಿಕೆ ನೀಡಿರುವ ಗೋಸ್ವಾಮಿ, ದಾಳಿಕೋರರುು ಯುವ ಕಾಂಗ್ರೆಸ್ ಸದಸ್ಯರೆಂದು ವಿಚಾರಣೆ ವೇಲೆ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಮಾಡಿದ್ದ ಆರೋಪದ ಮೇಲೆ ನಿನ್ನೆ ಅರ್ನಾಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 

Leave a Reply

Your email address will not be published. Required fields are marked *

error: Content is protected !!