ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಬೆಂಗಳೂರು: ಸಿಎಂ ಯಡಿಯೂರಪ್ಪನವರು ಬಹುಮತ ಸಾಬೀತು ಮಾಡಿದ ನಂತರ ಧನ ವಿಧೇಯಕ ಅಂಗೀಕಾರವಾದ ಕೂಡಲೇ ಸ್ಪೀಕರ್ ರಮೇಶ್ ಕುಮಾರ್ ವಿದಾಯ ಭಾಷಣ ಮಾಡಿದರು.
ಪಕ್ಷದ ಹಿರಿಯರ ಮಾತಿನಂತೆ ಸ್ಪೀಕರ್ ಆಗಿ ಆಯ್ಕೆಯಾದೆ. ನಾನು ಯಾರನ್ನು ಕೇಳಲಿಲ್ಲ, ಪಕ್ಷದ ವರಿಷ್ಠರ ಸಲಹೆಯಂತೆ ಈ ಸ್ಥಾನವನ್ನು ಅಲಂಕರಿಸಿದೆ. ಇದೂವರೆಗೂ ಈ ಸ್ಥಾನದ ಗೌರವ ಕಡಿಮೆಯಾಗದಂತೆ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲ ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದರು.
ದಯವಿಟ್ಟು ಯಾರು ವೈಯಕ್ತಿಕ ವಿಚಾರಗಳನ್ನು ಕೆದಕಬೇಡಿ. ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರ ದೂರಿನ ಅನ್ವಯ ಸಂವಿಧಾನದ ಪ್ರಕಾರವೇ 17 ಶಾಸಕರ ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೇನೆ. ಯಾವುದೇ ಒತ್ತಡ, ಪ್ರಚೋದನೆಗೆ ಒಳಗಾಗದೇ ಆದೇಶವನ್ನು ಪ್ರಕಟಿಸಿದ್ದೇನೆ ಎಂದರು