ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್‌ ಪತ್ತೆಗೆ ಸೇನಾ ಹೆಲಿಕಾಪ್ಟರ್‌ ಬಳಕೆ ಸಾಧ್ಯತೆ?

ಮಂಗಳೂರು:ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್‌ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದು, ತೀವ್ರ ಶೊಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್‌ ಬಳಸುವ ಬಗ್ಗೆಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿದೆ.

ವಿ.ಜಿ. ಸಿದ್ದಾರ್ಥ್‌ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು.

ಜಪ್ಪಿನ ಮೊಗರು, ಅಳಿವೆ ಬಾಗಿಲು, ಉಳ್ಳಾಲ ಸುತ್ತಮುತ್ತ ತೀವ್ರ ಶೋಧ
ಕಾರ್ಯ ನಡೆಯುತ್ತಿದೆ. 30ಕ್ಕೂ ಹೆಚ್ಚು ಬೋಟ್‌ ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಆಗಮಿಸುತ್ತಿದೆ.

ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಸಿದ್ದಾರ್ಥ್ ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್‌ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದರು. ಬಳಿಕ ಮಾಲಕನ ಸೂಚನೆಯಂತೆ ಚಾಲಕ ಕಾರನ್ನು ಕಾಸರಗೋಡು ಹೆದ್ದಾರಿಯತ್ತ ತಿರುಗಿಸಿದ್ದನು. ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ಕಾರನ್ನು ಎಡ ಬದಿಯಲ್ಲಿರುವ ಕಂರ್ಬಿಸ್ಥಾನದ ರಸ್ತೆಯಲ್ಲಿ ಚಲಾಯಿಸಲು ಹೇಳಿದ್ದರು. ಕೆಲವು ಮೀಟರ್‌ ಮುಂದೆ ಸಾಗಿದ ಬಳಿಕ ಕಾರನ್ನು ನಿಲ್ಲಿಸಲು ಹೇಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಸ್ವಲ್ಪ ಮುಂದಕ್ಕೆ ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್‌ ಆಫ್ ಸಂದೇಶ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ 1,700  ಹೆಚ್ಚು ಔಟ್ಲೆಟ್ ಹೊಂದಿದ್ದ ಕಾಫಿಡೇ ಇತ್ತೀಚೆಗೆ ಕೊಕೊಕೋಲಾ ಕಂಪನಿಗೆ ಮಾರಲು  ಸಿದ್ಧತೆ ನಡೆಸಿದ್ದರು. ಇದು ಕೊನೆಯ‌ ಕ್ಷಣದಲ್ಲಿ ಈ‌ ವ್ಯವಹಾರ ಮುರಿದು ಬಿತ್ತು ಎನ್ನಲಾಗಿದೆ. ಸಿದ್ದಾರ್ಥಗೆ 7 ಸಾವಿರ ಕೋಟಿ ಸಾಲ ಇತ್ತು ಎನ್ನುವ ಮಾಹಿತಿ ಈಗ ಹೊರಬರುತ್ತಿದೆ.

ಕೊನೆಯ ಕ್ಷಣದಲ್ಲಿ ಸಿದ್ದಾರ್ಥ್‌ ಅವರ ಕಾರು ಚಾಲಕ ಬಸವರಾಜು ಕಂಕನಾಡಿ ಪೊಲೀಸ್‌ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿದ್ಧಾರ್ಥ ಪತ್ತೆಗೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ನೆರವು ಕೇಳಿದ ನಳಿನ್, ಶೋಭಾ.

Leave a Reply

Your email address will not be published. Required fields are marked *

error: Content is protected !!