ರಾಮ-ರಹೀಂ ಭಕ್ತಿ ಮುಖ್ಯವಲ್ಲ, ದೇಶಭಕ್ತಿ ಮುಖ್ಯ: ಪ್ರಧಾನಿ ಮೋದಿ

ನವದೆಹಲಿ: ಸುಪ್ರೀಂ ಕೋರ್ಟ್ ಶನಿವಾರ ಅಯೋಧ್ಯೆ ತೀರ್ಪು ಕುರಿತು ನೀಡಿರುವ ಐತಿಹಾಸಿಕ ತೀರ್ಪಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.


ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಸೋಲು, ಗೆಲುವಿನ ದೃಷ್ಟಿಯಿಂದ ನೋಡುವುದು ಬೇಡ. ಅದು ರಾಮಭಕ್ತಿಯಾಗಿರಲಿ ಅಥವಾ ರಹೀಂ ಭಕ್ತಿಯಾಗಿರಲಿ, ಇದು ದೇಶದ ಪ್ರತಿಯೊಬ್ಬ ನಾಗರಿಕರು ಭಾರತ ಭಕ್ತಿಯನ್ನು ತೋರಿಸುವ ಸಮಯವಿದು. ಈ ಸಂದರ್ಭದಲ್ಲಿ ಶಾಂತಿ, ಸಾಮರಸ್ಯ ಮತ್ತು ಏಕತೆಯನ್ನು ಕಾಪಾಡಿ ಎಂದು ನಾನು ದೇಶದ ಜನರನ್ನು ಕೇಳಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.


ರಾಮ, ರಹೀಂ ಎಂದು ಹೇಳದೆ ಪ್ರತಿಯೊಬ್ಬರೂ ದೇಶಭಕ್ತಿಯನ್ನು ತೋರಿಸುವ ಸಮಯವಿದು. ಅಯೋಧ್ಯೆ ಕೇಸಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!