ಹಠಮಾರಿ

ನೆನಪುಗಳ ಸಂತೆಗೆ
ಮಳೆಯಾಗಿ ಬಂದೆ..
ಮನಸುಗಳ ಮಿಲನಕೆ
ತಂಪೆರೆದು ಹೋದೆ..

ನನ್ನೆದೆಯ ತೋಟದಲಿ
ಹೂದುಂಬಿಯಾಗಿ..
ಕನಸಿನ ಅರಮನೆಗೆ
ಯುವರಾಣಿಯಾದೆ..

ಕವಿಗಳ ಕಲ್ಪನೆಗು
ನಿಲುಕದ ಸೊಗಸು..
ನಾ ಕಂಡೆ ನಿನ್ನಲ್ಲಿ
ನೂರಾರು ಕನಸು..

ಹಠಮಾರಿ ಹೃದಯಕ್ಕೆ
ಬೇಕಾಗಿದೆ ಕಾವಲು..

ಹಿಂತಿರುಗಲಾರೆಯಾ,,!!

ಕಾಯುತಿದೆ ಕೈಗಳು
ಬಿಗಿದಪ್ಪಿಕೊಳ್ಳಲು..

ರೂಪೇಶ್ ಜೆ.ಕೆ

Leave a Reply

Your email address will not be published. Required fields are marked *

error: Content is protected !!