ಮಂಗಳೂರಿನಲ್ಲಿ ಪಿಜಿ, ಹಾಸ್ಟೆಲ್ಗೆ ಅನುಮತಿ ಕಡ್ಡಾಯ; ಸಂದೀಪ್ ಪಾಟೀಲ್
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಹಣ ಸಂಪಾದಿಲು ಕೆಲವು ದಾರಿಗಳಿವೆ ಅದ್ರಲ್ಲೂ ಸಿಟಿಗಳಂತೂ ಪರವೂರಿಂದ ಬಂದವಾರಿಗಾಗಿ ನಿರ್ಮಿಸಲ್ಪಟ್ಟ ಪಿಜಿಗಳಿಂದ ಸಕತ್ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಮಾತ್ರವಲ್ಲದೇ ಕೆಲ ಪಿಜಿಗಳಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅಂತಹದರಲ್ಲಿ ಕೇಳಿಬರುತ್ತಿರುವ ಹೆಸರು ಮಂಗಳೂರು ಇನ್ನೂ ಮಂಗಳೂರು ನಗರದಲ್ಲಿ ಪಿಜಿ, ಹಾಸ್ಟೆಲ್ಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಟಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.
ಮಂಗಳೂರಿನಲ್ಲಿರುವ ಹಾಸ್ಟೆಲ್ , ಪಿಜಿ , ವಸತಿಗೃಹಗಳ ಮಾಲೀಕರು , ಪಾಲುದಾರರು ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ ,ಸಿಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುವುದು, ಸಿಸಿ ಟಿ.ವಿಗಳ ಫುಟೇಜ್ ಗಳು ಕನಿಷ್ಠ 30 ದಿನಗಳ ಅವಧಿಗೆ ವೀಕ್ಷಣೆಗೆ ಲಭ್ಯವಿರುವಂತೆ ಡಿವಿಆರ್ ಗಳಿಗೆ ದಾಸ್ತಾನು ಮಾಡಿಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಯುಕ್ತರ ಆದೇಶದದ ಪ್ರಕಾರ ಸಂಸ್ಥೆಗಳ ಮಾಲೀಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ವಾಸ್ತವ್ಯವಿರುವ ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ ಹಾಗೂ ಗುರುತಿನ ಚೀಟಿಯನ್ನು ಠಾಣೆಗೆ ನೀಡಬೇಕು. ವಿದೇಶಿ ವಿದ್ಯಾರ್ಥಿಗಳಿದ್ದರೆ, ಅವರು ವಾಸ್ತವ್ಯಕ್ಕೆ ಬಂದ 15 ದಿನಗಳ ಒಳಗೆ ಅವರ ಪೂರ್ಣ ಮಾಹಿತಿಯೊಂದಿಗೆ ಪಾಸ್ಪೋರ್ಟ್ ಹಾಗೂ ಅವರ ವೀಸಾ ವಿವರವನ್ನು ಠಾಣೆಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.